Advertisement
ಪೈವಳಿಕೆ ನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಚುನಾವಣೆ ಸಾಮಾಗ್ರಿಗಳ ಸಂಗ್ರಹ ಮತ್ತು ವಿತರಣೆ ನಡೆಯಲಿದ್ದು, ಮತಗಣನೆಯೂ ಇದೇ ಶಾಲೆಯಲ್ಲಿ ಜರಗಲಿದೆ. ಮತಗಣನೆಯ ದಿನ ಮೀಡಿಯಾ ಸೆಂಟರ್ ಕೂಡ ಇಲ್ಲಿ ಚಟುವಟಿಕೆ ನಡೆಸಲಿದೆ. ಜಿಲ್ಲಾ ಧಿಕಾರಿ, ಚುನಾವಣೆ ನಿರೀಕ್ಷಕರು, ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಚುನಾವಣೆ ಅ ಧಿಕಾರಿ, ಉಪಚುನಾವಣೆ ಅ ಧಿಕಾರಿಗಳು ಇಲ್ಲಿರುವರು. ಈ ಶಾಲೆಯಲ್ಲಿ 4 ಸ್ಟಾಂಪಿಂಗ್ ರೂಂಗಳಲ್ಲಿ 258 ವಿದ್ಯುನ್ಮಾನ ಮತಯಂತ್ರಗಳನ್ನು ಸಜ್ಜುಗೊಳಿಸಲಾಗಿದೆ. ಅ.20ರಂದು ಬೆಳಗ್ಗೆ 9.30ರಿಂದ 18 ವಿತರಣೆ ಕೇಂದ್ರಗಳಿಂದ ಪೋಲಿಂಗ್ ಸಿಬ್ಬಂದಿಗೆ ಮತದಾನ ಸಾಮಾಗ್ರಿಗಳನ್ನು ವಿತರಿಸಲಾಗುವುದು. ಕರ್ತವ್ಯದಲಿರುವ ಸಿಬ್ಬಂದಿಗೆ ಈ ಕೇಂದ್ರಕ್ಕೆ ತಲಪುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕೈಕಂಬದಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಸರ್ವೀಸ್ ನಡೆಸಲಾಗುವುದು. ಕರ್ತವ್ಯದ ಸಿಬ್ಬಂದಿಗೆ ಕುಟುಂಬಶ್ರೀ ವತಿಯಿಂದ ಆಹಾರ ಪೂರೈಕೆ ನಡೆಯಲಿದೆ.
ಅ.21ರಂದು ಮತದಾನ ನಡೆಯಲಿದ್ದು, ಬೆಳಗ್ಗೆ 5.30ಕ್ಕೆ ಪ್ರಹಸನ ಮತದಾನ(ಮೋಕ್ ಪೋಲಿಂಗ್) ಆರಂಭಗೊಳ್ಳಲಿದೆ. (ಮತದಾನಕ್ಕಿಂತ 90 ನಿಮಿಷ ಮುಂಚೆ) 5.30ಕ್ಕೆ ಪೋಲಿಂಗ್ ಏಜೆಂಟರೂ ಹಾಜರಾಗುವಂತೆ ಚುನಾವಣೆ ಅ ಧಿಕಾರಿ ತಿಳಿಸಿದ್ದಾರೆ.
Related Articles
ಚುನಾವಣೆಗೆ ನೇಮಕಗೊಂಡಿ ರುವ ಸಿಬ್ಬಂದಿಗೆ ಬೇಕಾದ ತರಬೇತಿಯೂ ಈಗಾಗಲೇ ಪೂರ್ಣಗೊಂಡಿದೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ಅಕ್ರಮ ಮತದಾನ ತಡೆಯುವ ನಿಟ್ಟಿನಲ್ಲಿ ಎಲ್ಲ ಪೋಲಿಂಗ್ ಏಜೆಂಟರಿಗೆ ತರಬೇತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರು ತಿಳಿಸಿದರು.
Advertisement