Advertisement

ಉಪ ಚುನಾವಣೆ : ಮೂರು ಕ್ಷೇತ್ರಕ್ಕೆ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಿದ ಬಿಜೆಪಿ

09:58 PM Mar 25, 2021 | Team Udayavani |

ಬೆಳಗಾವಿ : ಮಾಜಿ ಸಂಸದ ದಿ. ಸುರೇಶ್ ಅಂಗಡಿಯವರ ಹಠತ್ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬೈ ಎಲೆಕ್ಷನ್ ಪ್ರಕಟವಾದ ಬಳಿಕ  ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಕೊಂಡಿತ್ತು.

Advertisement

ಕಾಂಗ್ರೆಸ್ ಬಿಜೆಪಿ, ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ಗುದ್ದಾಟ ನಡೆಯುತ್ತಾ ಇರುವ ಹಿನ್ನಲೆಯಲ್ಲೇ ಬಿಜೆಪಿ ಮೂರು ಕ್ಷೇತ್ರಗಳಾದ ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಬಹಿರಂಗಗೊಳಿಸಿದೆ. ಬೆಳಗಾವಿ ಉಪ ಚುನಾವಣೆ ಟಿಕೆಟ್ ಗೆ ಸುರೇಶ್ ಅಂಗಡಿಯವರ ಮಗಳು ಶ್ರದ್ಧಾ ಶೆಟ್ಟರ್ ಅವರ ಹೆಸರು ಮುನ್ನೆಲೆಗೆ ಬಂದಿತ್ತು, ಆದರೆ ಇದೀಗ ಬಿಜೆಪಿ ದಿ. ಸುರೇಶ್ ಅಂಗಡಿಯವರ ಪತ್ನಿ ಮಂಗಳಾ ಅಂಗಡಿಯವರಿಗೆ ಟಿಕೆಟ್ ನೀಡಿ, ಕಾಂಗ್ರೆಸ್ ಗೆ ತಕ್ಕ ಪ್ರತಿಸ್ಪರ್ಧಿಯನ್ನು ಕಣಕ್ಕೆ ಇಳಿಸಿದೆ.

ಇನ್ನೊಂದು ಕಡೆ ಏ . 17 ರಂದು ನಡೆಯಲಿರುವ ಮಸ್ಕಿ ಹಾಗೂ ಬಸವ ಕಲ್ಯಾಣ ಉಪಚುನಾವಣೆಗೆ ಬಿಜೆಪಿ ಮಸ್ಕಿ ಕ್ಷೇತ್ರದಲ್ಲಿ ಪ್ರತಾಪ ಗೌಡ ಪಾಟೀಲ್ ಅವರಿಗೆ ಟಿಕೆಟ್ ನೀಡಿದೆ. ಬಸವಕಲ್ಯಾಣದಿಂದ ಶರಣು ಸಲಗರೆಗೆ ಟಿಕೆಟ್ ನೀಡಿದೆ.

ಬೆಳಗಾವಿಯಲ್ಲಿ ಕಾಂಗ್ರೆಸ್ ಸತೀಶ್ ಜಾರಕಿಹೊಳಿ ಅವರಿಗೆ ಅಭ್ಯರ್ಥಿಯಾಗಿ ಚುನಾವಣೆ ಅಖಾಡಕ್ಕೀಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next