ಬೆಂಗಳೂರು: ಮೂರು ಕ್ಷೇತ್ರಗಳ ಉಪ ಚುನಾ ವಣೆ ಪೈಕಿ ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಸತೀಶ್ ಜಾರಕಿಹೊಳಿ ಅವರನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದೆ. ಸಿಡಿ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿ ಸ್ಪರ್ಧೆಯೇ ಸೂಕ್ತ.
ಬೇರೆ ಅಭ್ಯರ್ಥಿ ಕಣಕ್ಕಿಳಿದರೆ ಬಿಜೆಪಿ ಎದುರಿಸಲು ಕಷ್ಟ ವಾ ಗಬಹುದು ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ಸತೀಶ್ ಜಾರಕಿಹೊಳಿ ಸ್ಪರ್ಧೆ ಮಾಡಿದರೆ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಪರಿಸ್ಥಿತಿ ಯಲ್ಲಿ ಅವರ ಕುಟುಂಬವೂ ಒಂದಾಗಿ ಕೆಲಸ ಮಾಡುತ್ತದೆ. ಇದರಿಂದ ಗೆಲುವು ಸುಲಭವಾಗ ಬಹುದು. ಹೀಗಾಗಿ, ಹೈಕಮಾಂಡ್ ಮೂಲ ಕವೂ ಸತೀಶ್ ಜಾರಕಿಹೊಳಿ ಮನವೊಲಿಸಿ ಸ್ಪರ್ಧೆಗಿಳಿಸಲು ತೀರ್ಮಾನಿಸಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಸತೀಶ್ ಜಾರಕಿ ಹೊಳಿ, ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜು, ಮಹಾಂ ತೇಶ ಕೌಜಲಗಿ ಅವರ ಹೆಸರುಗಳು ಪರಿಶೀಲನೆ ಯಲ್ಲಿದ್ದರೂ ಸದ್ಯದ ಸ್ಥಿತಿಯಲ್ಲಿ ಸತೀಶ್ ಜಾರಕಿಹೊಳಿ ಹೆಸರು ಅಂತಿಮ ಗೊಳಿಸಲು ನಿರ್ಧರಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಸತೀಶ್ ಅವರನ್ನೂ ಕರೆಸಿಕೊಂಡು ಸದ್ಯದಲ್ಲೇ ಈ ಕುರಿತು ಮಾತುಕತೆ ನಡೆಯಲಿದೆ ಎಂದು ಹೇಳಲಾಗಿದೆ.
ಎರಡಕ್ಕೂ ಅಂತಿಮ: ಇನ್ನು, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದಿಂದ ಬಹುತೇಕ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು ಹೈಕಮಾಂಡ್‌ಗೂ ಕಳುಹಿ ಸಲಾಗಿದೆ. ಇದೀಗ ಶಿಫಾ ರಸು “ಶಾಸ್ತ್ರ’ ಪ್ರಕ್ರಿಯೆ ಯಷ್ಟೇ ಬಾಕಿ ಎಂದು ಹೇಳಲಾಗಿದೆ. ಬಸವಕಲ್ಯಾಣಕ್ಕೆ ಮಾಜಿ ಶಾಸಕ ದಿ.ನಾರಾ ಯಣ ಅವರ ಪತ್ನಿ ಮಲ್ಲಮ್ಮ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ವಿಧಾನಪರಿಷತ್ ಸದಸ್ಯ ವಿಜಯ್‌ಸಿಂಗ್ ಅವರ ಹೆಸರು ಅಂತಿಮ ಗೊಳಿಸಲಾಗಿದೆ. ಅದೇ ರೀತಿ ಮಸ್ಕಿ ಕ್ಷೇತ್ರಕ್ಕೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿದ್ದ ಬಸನಗೌಡ ತುರವಿಹಾಳ್ ಅವರ ಒಂದೇ ಹೆಸರು ಫೈನಲ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಇದರ ನಡುವೆಯೇ ಸಿಂಧಗಿ ಕ್ಷೇತ್ರಕ್ಕೂ ಉಪ ಚುನಾವಣೆ ಘೋಷಣೆ ಯಾಗುವ ನಿರೀಕ್ಷೆಯಿದ್ದು ಆ ಕ್ಷೇತ್ರದಲ್ಲಿ ಇತ್ತೀಚೆಗಷ್ಟೇ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿರುವ ಮಾಜಿ ಸಚಿವ ದಿವಂಗತ ಎಂ.ಸಿ.ಮನಗೊಳಿ ಪುತ್ರ ಅಶೋಕ್ ಮನಗೊಳಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಅಗ್ನಿಪರೀಕ್ಷೆ: ಉಪ ಚುನಾವಣೆಗೆ ಬನ್ನಿ ಎಂದು ಸಿಎಂ ಯಡಿಯೂರಪ್ಪ ವಿಧಾನಸಭೆಯಲ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಸವಾಲು ಹಾಕಿದ್ದರು. ಇದಕ್ಕೆ ಸಿದ್ದ ರಾಮಯ್ಯ ಅವರೂ ಆಯ್ತು ನೋಡೋಣ. ವಿಧಾನ ಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಬನ್ನಿ ಎಂದು ಮರು ಸವಾಲು ಹಾಕಿದ್ದರು. ಕಾಂಗ್ರೆಸ್ ಗೂ ಉಪ ಚುನಾವಣೆ ಅಗ್ನಿಪರೀಕ್ಷೆಯಾಗಿದೆ.
ಸಂಕಲ್ಪ ಸಮಾವೇಶ, ಜನಧ್ವನಿ ಹೋರಾಟ ದಿಂದ ಕಾಂಗ್ರೆಸ್ ಶಕ್ತಿ ಹೆಚ್ಚಾಗಿದೆ. ನಾವು ಈಗಾಗಲೇ ಮೂರೂ ಕ್ಷೇತ್ರಗಳಲ್ಲಿ ಕೆಲಸ ಆರಂಭಿಸಿದ್ದೆವು, ಇನ್ನೂ ಬೇಗ ಚುನಾವಣೆ ಘೋಷಣೆಯಾಗಬಹು ದೆಂಬ ನಿರೀಕ್ಷೆಯಿತ್ತು. ನಾವು ಚುನಾವಣೆಗೆ ಸಜ್ಜಾಗಿದ್ದೇವೆ.
-ಸಲೀಂ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ
-ಎಸ್.ಲಕ್ಷ್ಮೀ ನಾರಾಯಣ