Advertisement

ಮೇ 29: ಎರಡು ಗ್ರಾ.ಪಂ.ಗಳ ಮೂರು ಸ್ಥಾನಕ್ಕೆ ಉಪಚುನಾವಣೆ

09:33 AM May 11, 2019 | keerthan |

ಬೆಳ್ತಂಗಡಿ : ತಾಲೂಕಿನ ಉಜಿರೆ ಹಾಗೂ ಕೊಯ್ಯೂರು ಗ್ರಾ.ಪಂ.ಕ್ಷೇತ್ರಗಳಲ್ಲಿ ಕಾರಣಾಂತರಗಳಿಂದ ತೆರವಾದ ಸ್ಥಾನಕ್ಕೆ ಮೇ 29ರಂದು ಉಪಚುನಾವಣೆ ನಿಗದಿಯಾಗಿದೆ.

Advertisement

ಉಜಿರೆಯ ಎರಡು ಕ್ಷೇತ್ರಗಳಾದ ವಾರ್ಡ್‌ ನಂ. 4ರಲ್ಲಿ ಸದಸ್ಯೆ ಗೀತಾ ವೆಂಕಪ್ಪ ನಾಯ್ಕ ರಾಜೀನಾಮೆ ಹಾಗೂ ವಾರ್ಡ್‌ ನಂ. 11ರಲ್ಲಿ ಸದಸ್ಯ ವೆಂಕಪ್ಪ ನಾಯ್ಕ ನಿಧನದ ಹಿನ್ನೆಲೆ ಸ್ಥಾನ ತೆರವಾಗಿತ್ತು.

ಕೊಯ್ಯೂರು ಗ್ರಾ.ಪಂ.ನ ವಾರ್ಡ್‌ ನಂ. 2ರಲ್ಲಿ ಪರಿಶಿಷ್ಟ ಜಾತಿಯ ವಿಟuಲ ನಿಧನ ಹೊಂದಿದ್ದರಿಂದ ತೆರವಾದ ಸ್ಥಾನಕ್ಕೆ ಮೇ 29ರಂದು ಪೂರ್ವಾಹ್ನ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.

ಮೇ 29 ಮತದಾನ: ಮೇ 31ಎಣಿಕೆ
ಮೇ 13ರಿಂದ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮೇ 16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮೇ 17ರಂದು ನಾಮ ಪತ್ರಗಳ ಪರಿಶೀಲನೆ ಕೈಗೊಳ್ಳಲಿದ್ದು, ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 29ರಂದು ಮತದಾನ ನಡೆಯಲಿದ್ದು, 31ರಂದು ಬೆಳಗ್ಗೆ 8ರಿಂದ ತಾ| ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ.

ಮೇ 13ರಂದು ಚುನಾವಣಾಧಿಕಾರಿಗಳಿಗೆ ಮತದಾರರ ಪಟ್ಟಿ ನೀಡಬೇಕಾಗಿದ್ದು, ಆದರೆ ಇನ್ನೂ ಮತದಾರರ ಪಟ್ಟಿ ಬಿಡುಗಡೆಯಾಗಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಮೇ 11 ಎರಡನೇ ಶನಿವಾರ, ಮೇ 12ರಂದು ರವಿವಾರ ರಜೆಯಾದ್ದರಿಂದ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಮತದಾರರ ಪಟ್ಟಿ ಇನ್ನೂ ಬೆಂಗಳೂರು ಚುನಾವಣಾಧಿಕಾರಿ ಕಚೇರಿಯಲ್ಲೇ ಉಳಿದಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Advertisement

ಮೇ 13ರಿಂದ 31ರ ಮತ ಎಣಿಕೆ ಪ್ರಕ್ರಿಯೆ ಮುಗಿಯುವ ವರೆಗೆ ಗ್ರಾ.ಪಂ. ವ್ಯಾಪ್ತಿಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈ ಹಿಂದೆ ವಾರ್ಡ್‌ಗೆ ಮಾತ್ರ ಸೀಮಿತವಾಗಿದ್ದ ನೀತಿಸಂಹಿತೆ ಈ ಬಾರಿ ಪೂರ್ತಿ ಗ್ರಾ.ಪಂ.ಗೆ ಅನ್ವಯವಾಗಿರುವುದು ವಿಶೇಷ.

ಉಜಿರೆ ಗ್ರಾಮ ಪಂಚಾಯತ್‌ ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣ ಸಂಯೋಜಕ ಸುಭಾಶ್‌ ಜಾಧವ್‌ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಉಜಿರೆ ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಯಲ್ಲವ್ವ ಹಂಡಿ, ಕೊಯ್ಯೂರು ಗ್ರಾಮ ಪಂಚಾಯತ್‌ ಚುನಾವಣಾಧಿಕಾರಿಯಾಗಿ ಸುಧಾಕರ (ಪಿಡಿಒ ಪಡಂಗಡಿ) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ನಾರಾವಿ ಗ್ರಾಮ ಪಂಚಾಯತ್‌ ಕಾರ್ಯದರ್ಶಿ ನಿರ್ಮಲ್ ಕುಮಾರ್‌ ನೇಮಕಗೊಂಡಿದ್ದಾರೆ.

ಬಿಡುಗಡೆಯಾಗದ ಮತದಾರರ ಪಟ್ಟಿ

ಚುನಾವಣಾಧಿಕಾರಿಗಳು

ಉಜಿರೆ ಗ್ರಾಮ ಪಂಚಾಯತ್‌ ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣ ಸಂಯೋಜಕ ಸುಭಾಶ್‌ ಜಾಧವ್‌ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಉಜಿರೆ ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಯಲ್ಲವ್ವ ಹಂಡಿ, ಕೊಯ್ಯೂರು ಗ್ರಾಮ ಪಂಚಾಯತ್‌ ಚುನಾವಣಾಧಿಕಾರಿಯಾಗಿ ಸುಧಾಕರ (ಪಿಡಿಒ ಪಡಂಗಡಿ) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ನಾರಾವಿ ಗ್ರಾಮ ಪಂಚಾಯತ್‌ ಕಾರ್ಯದರ್ಶಿ ನಿರ್ಮಲ್ ಕುಮಾರ್‌ ನೇಮಕಗೊಂಡಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next