Advertisement

ಉಪ ಚುನಾವಣೆ ಎಫೆಕ್ಟ್: ಶಕ್ತಿ ಕೇಂದ್ರ ಖಾಲಿ ಖಾಲಿ

06:00 AM Oct 27, 2018 | Team Udayavani |

ಬೆಂಗಳೂರು: ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಶಕ್ತಿಕೇಂದ್ರ ವಿಧಾನಸೌಧ- ವಿಕಾಸಸೌಧ ಭಣಗುಡುತ್ತಿದೆ. ಆಡಳಿತಾರೂಢ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಸರ್ಕಾರದ ಸಚಿವರಿಗೆ ಬಳ್ಳಾರಿ, ಶಿವಮೊಗ್ಗ ಕ್ಷೇತ್ರಗಳಲ್ಲಿ ಉಸ್ತುವಾರಿ ವಹಿಸಿರುವುದರಿಂದ ಯಾವೊಬ್ಬ ಸಚಿವರೂ ವಿಧಾನಸೌಧದತ್ತ ತಲೆ ಹಾಕುತ್ತಿಲ್ಲ. 

Advertisement

ವಿಧಾನಸೌಧ-ವಿಕಾಸಸೌಧಕ್ಕೆ ಸಚಿವರನ್ನು ಹುಡುಕಿಕೊಂಡು ಬರುವ ಸಾರ್ವಜನಿಕರಿಗೆ “ಸಾಹೇಬರು’ ಇಲ್ಲ. ಎಲೆಕ್ಷನ್‌ ಆದ ಮೇಲೆ ಸಿಕ್ತಾರೆ ಎಂಬ ಉತ್ತರ ಸಿಗುತ್ತಿದೆ. ಸಚಿವರು ಉಪ ಚುನಾವಣಾ ಪ್ರಚಾರಕ್ಕೆ ಹೋಗಿರುವುದರಿಂದ ಇಲಾಖಾ ಕಾರ್ಯದರ್ಶಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳು ಕಚೇರಿಗಳತ್ತ ಬರುವುದು ಕಡಿಮೆ. ಹೀಗಾಗಿ, ಉಪ ಚುನಾವಣೆಯಿಂದಾಗಿ ಕೆಲಸ ಕಾರ್ಯಗಳು ಸ್ಥಗಿತಗೊಂಡಂತಾಗಿದೆ.

ಸಂಪುಟದ ಎಲ್ಲ ಸಚಿವರಿಗೂ ಉಪ ಚುನಾವಣಾ ಉಸ್ತುವಾರಿ ನೀಡಿಲ್ಲ. ಆದರೂ ಕೆಲವು ಸಚಿವರು ಉಪ ಚುನಾವಣೆ ನೆಪದಲ್ಲಿ ವಿಧಾನಸೌಧಕ್ಕೆ ಬರುತ್ತಿಲ್ಲ. ಗುರುವಾರ ನಡೆದ ಸಚಿವ ಸಂಪುಟ ಸಭೆಗೂ ಹಲವು ಸಚಿವರು ಗೈರು ಹಾಜರಾಗಿದ್ದರು. ಇತ್ತೀಚೆಗಷ್ಟೇ ಯಡಿಯೂರಪ್ಪ ಅವರು ಸಚಿವರ್ಯಾರೂ ವಿಧಾನಸೌಧಕ್ಕೆ ಹೋಗುತ್ತಿಲ್ಲ. ಹೀಗಾಗಿ, ಉಪ ಚುನಾವಣೆ ಮುಗಿಯುವವರೆಗೆ ವಿಧಾನಸೌಧ ಮುಚ್ಚುಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next