Advertisement
ನಾಮಪತ್ರ ವಾಪಸ್‌ಗೆ ಗುರುವಾರ ಅಂತಿಮ ದಿನವಾಗಿದ್ದು, 53 ಅಭ್ಯರ್ಥಿಗಳು ಉಮೇದುವಾರಿಕೆ ವಾಪಸ್ ಪಡೆದರು. ಹೀಗಾಗಿ ಒಂಬತ್ತು ಮಹಿಳೆಯರು ಸಹಿತ 165 ಅಭ್ಯರ್ಥಿಗಳು ಕಣದಲ್ಲಿ ಉಳಿದರು. ಮೂರು ಪಕ್ಷಗಳಲ್ಲಿ ಬಿಜೆಪಿಗೆ ಬಂಡಾಯದ ಚಿಂತೆ ಹೆಚ್ಚಾಗಿ ಕಾಡುತ್ತಿದೆ. ಹೊಸಕೋಟೆ ಮತ್ತು ವಿಜಯನಗರ ಕ್ಷೇತ್ರಗಳಲ್ಲಿ ಕಣದಲ್ಲೇ ಉಳಿದ ಬಿಜೆಪಿಯ ಬಂಡಾಯ ಅಭ್ಯರ್ಥಿಗಳಾದ ಶರತ್ ಬಚ್ಚೇಗೌಡ, ಕವಿರಾಜ್ ಅರಸ್‌ರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಶಿವಾಜಿನಗರ ಮತ್ತು ರಾಣೆಬೆನ್ನೂರು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ. ಹೀಗಾಗಿ ಇವೆಲ್ಲವೂ ಹೈಪ್ರೊಫೈಲ್ ಕ್ಷೇತ್ರಗಳು. ಶಿವಾಜಿನಗರದಲ್ಲಿ ರೋಶನ್‌ಬೇಗ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳದ ಕಾರಣ ಎಂ. ಸರವಣಗೆ ಟಿಕೆಟ್ ನೀಡಿ ಕಣಕ್ಕಿಳಿಸಲಾಗಿದೆ. ರಾಣೆಬೆನ್ನೂರಿನಲ್ಲಿ ಹಿಂದೆ ಕೆಪಿಜೆಪಿಯಿಂದ ಗೆದ್ದಿದ್ದ ಆರ್. ಶಂಕರ್‌ಗೆ ಟಿಕೆಟ್ ನೀಡದೆ, ಬಿಜೆಪಿಯಿಂದ ಅರುಣ್‌ಕುಮಾರ್‌ಗೆ ಟಿಕೆಟ್ ನೀಡಿ ಅದೃಷ್ಟ ಪರೀಕ್ಷೆ ನಡೆಸಲಾಗಿದೆ.
Related Articles
– ಅಥಣಿ
ಜೆಡಿಎಸ್ ಅಭ್ಯರ್ಥಿ ಗುರು ದಾಸ್ಯಾಳ್ ಕೊನೇ ಘಳಿಗೆಯಲ್ಲಿ ನಾಮಪತ್ರ ಹಿಂಪಡೆದಿದ್ದಾರೆ. ತಮ್ಮದೇ ಪಕ್ಷದ ಮೂಲವುಳ್ಳ ಹಾಗೂ ಲಿಂಗಾಯತ ಸಮುದಾಯದ ದಾಸ್ಯಾಳ್ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಇದು ಕುಮಟಳ್ಳಿಗೆ ಲಾಭ ತಂದುಕೊಡಬಹುದು ಎಂದು ಅಂದಾಜಿಸಲಾಗಿದೆ.
Advertisement
– ಹಿರೇಕೆರೂರುಹಿರೇಕೆರೂರಿನಲ್ಲಿ ಬಿಜೆಪಿಯಿಂದ ಬಿ.ಸಿ. ಪಾಟೀಲ್ ಸ್ಪರ್ಧಿಸುತ್ತಿದ್ದು, ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿದ್ದ ಲಿಂಗಾಯತ ಸಮುದಾಯದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿಜೆಪಿ ನಾಯಕರ ಒತ್ತಡ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ವ್ಯಂಗ್ಯ ಮತ್ತಿತರ ಕಾರಣಗಳಿಂದ ತಮ್ಮ ಅಭ್ಯರ್ಥಿತನ ವಾಪಸ್ ಪಡೆದಿದ್ದಾರೆ. -ಗೋಕಾಕ್
ಇಲ್ಲಿ ಬಿಜೆಪಿಯ ರಮೇಶ್ ಜಾರಕಿಹೊಳಿ ವಿರುದ್ಧ ಹಿಂದಿನ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಅಶೋಕ್ ಪೂಜಾರಿ ಜೆಡಿಎಸ್‌ನಿಂದ ಸ್ಪರ್ಧೆ ಒಡ್ಡಿದ್ದಾರೆ. ಅವರು ಬಿಜೆಪಿ ನಾಯಕರ ಒತ್ತಡಕ್ಕೆ ಮಣಿಯದೇ ಬಂಡಾಯ ಎದ್ದಿರುವುದು ಬಿಜೆಪಿಗೆ ಒಂದು ಹಂತದಲ್ಲಿ ಲಿಂಗಾಯತ ಮತ ಕೈತಪ್ಪುವ ಲಕ್ಷಣಗಳಿವೆ. -ವಿಜಯನಗರ
ಈ ಕ್ಷೇತ್ರದಿಂದ ಬಿಜೆಪಿ ಮೂಲದ ಕವಿರಾಜ ಅರಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಕಮಲ ಪಾಳಯಕ್ಕೆ ಬಿಸಿ ಮುಟ್ಟಿಸಿದೆ. ಕವಿರಾಜ್ ಹಿಂದುಳಿದ ವರ್ಗಕ್ಕೆ ಸೇರಿದವರು. ಇದು ಪರೋಕ್ಷವಾಗಿ ಬಿಜೆಪಿಯ ಅನಂದ್ ಸಿಂಗ್ ಅವರಿಗೆ ತುಸು ತ್ರಾಸದಾಯಕವಾಗಿದೆ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿ.ವೈ. ಘೋರ್ಪಡೆ ಅವರಿಗೆ ಲಾಭ ನೀಡಬಹುದು ಎಂದು ಅಂದಾಜಿಸಲಾಗಿದೆ. -ಹೊಸಕೋಟೆ
ಇಲ್ಲಿ ಎಂ.ಟಿ.ಬಿ. ನಾಗರಾಜ್ ಚುನಾವಣ ಅಬ್ಬರಕ್ಕೆ ಸದ್ಯಕ್ಕೆ ಬ್ರೇಕ್ ಹಾಕಿರುವುದು ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ. ಒಂದು ಕಡೆ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಸುರೇಶ್ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವುದು ತ್ರಿಕೋನ ಸ್ಪರ್ಧೆಯನ್ನು ಖಚಿತಪಡಿಸಿದೆ. ಪ್ರಚಾರಕ್ಕೆ ಕಾಂಗ್ರೆಸ್ ಹಿರಿಯ ನಾಯಕರ ಗೈರು
ಉಪಚುನಾವಣ ಕಣ ಸಿದ್ಧವಾಗಿದ್ದರೂ ಕಾಂಗ್ರೆಸ್ ನಾಯಕರ ನಡುವಿನ ಭಿನ್ನಾಭಿಪ್ರಾಯ ಮಾತ್ರ ಅಂತ್ಯವಾಗಿಲ್ಲ. 15 ಕ್ಷೇತ್ರಗಳ ಟಿಕೆಟ್ ಹಂಚಿಕೆಯಲ್ಲಿ ಸಿದ್ದರಾಮಯ್ಯ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದು ಇವರ ಆಕ್ಷೇಪ. ಹೀಗಾಗಿ ಕೆ.ಎಚ್. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್, ರಾಮಲಿಂಗಾರೆಡ್ಡಿ, ಡಿ.ಕೆ. ಶಿವಕುಮಾರ್, ಡಾ| ಜಿ. ಪರಮೇಶ್ವರ್, ವೀರಪ್ಪ ಮೊಲಿ ಸಹಿತ ಅನೇಕರು ಪ್ರಚಾರದಲ್ಲಿ ತೊಡಗಿಕೊಂಡಿಲ್ಲ ಎನ್ನಲಾಗುತ್ತಿದೆ. ಇದು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದೇ ಹೇಳಲಾಗುತ್ತಿದೆ.