Advertisement
ಭಾರತೀಯ ಭೂ ಸೇನೆಯಲ್ಲಿ ಪ್ರತಿದಾಳಿ ಕಾರ್ಯಾಚರಣೆಗೆ ಹೆಸರಾಗಿರುವ “ಗೂರ್ಖಾ ರೆಜಿಮೆಂಟ್’ನಲ್ಲಿ ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಅಲ್ಲದೆ, “ಮಂಗಳೂರು ಲಿಟ್ ಫೆಸ್ಟ್’ ಆಯೋಜಿಸುವ ಮೂಲಕ ಸಾಹಿತ್ಯ, ಸಂಸ್ಕೃತಿ ಕುರಿತ ಬದ್ಧತೆ ತೋರಿಸಿದ್ದೀರಿ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ನೀವು ತೊಡಗಿಸಿಕೊಳ್ಳುತ್ತೀರಿ ಎಂದು ಖಚಿತವಾಗಿ ಹೇಳಬಲ್ಲೆ ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.
Related Articles
ಲೋಕಸಭಾ ಕ್ಷೇತ್ರದಲ್ಲಿ ಪ್ರತೀ ಬೂತ್ ಗೆಲ್ಲುವುದಕ್ಕಾಗಿ ನಮ್ಮ ಕಾರ್ಯಕರ್ತರು ಮತದಾರರಿಗೆ ಮತ ಹಾಕುವಂತೆ ಪ್ರೇರಣೆ ನೀಡುವುದು ಮುಖ್ಯವಾಗಿದೆ. ಪ್ರತೀ ಬೂತಿನಲ್ಲಿ ಅತಿ ಹೆಚ್ಚು ಮತ ಹಾಕಿಸಿ, ಬೂತ್ ಗೆದ್ದರೆ ಲೋಕಸಭೆ ಕ್ಷೇತ್ರವನ್ನು ಗೆಲ್ಲುವುದಕ್ಕೆ ಕೊಡುಗೆ ಕೊಟ್ಟಂತಾಗುತ್ತದೆ. ಇದೇ ವೇಳೆ, ಇತರ ಜನರಂತೆ ಪಕ್ಷದ ಕಾರ್ಯಕರ್ತರು ಕೂಡ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕಾಗಿದೆ. ದೇಶದ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ಪ್ರತಿ ಕ್ಷಣದಲ್ಲೂ ಬದ್ಧತೆ ಹೊಂದಿದ್ದೇನೆಂದು ಪ್ರತಿ ಮತದಾರನಿಗೂ ತಿಳಿಸಲು ಇಚ್ಚಿಸುತ್ತೇನೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
Advertisement
ಕಾಂಗ್ರೆಸ್‌ನ ಅಸಲಿ ಮುಖ ಬಯಲು: ಕ್ಯಾ| ಚೌಟಮಂಗಳೂರು: ಹುಬ್ಬಳ್ಳಿಯಲ್ಲಿ ಹಿಂದೂ ಯುವತಿ ನೇಹಾ ಹಿರೇಮಠ ಅವರ ಬರ್ಬರ ಹತ್ಯೆಯನ್ನು ಖಂಡಿಸಿ ಕಾರ್ಕಳದಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಹರ್ಷಿತ್ ಪೂಜಾರಿ, ಗಣೇಶ್, ಶ್ರೇಯಸ್ ಅಂಚನ್ ಸಹಿತ ಹಲವರ ಮೇಲೆ ಮೇಲೆ ಕೇಸು ದಾಖಲಿಸುವ ಮೂಲಕ ಕಾಂಗ್ರೆಸಿನ ಅಸಲಿ ಮುಖ ಮತ್ತೆ ಬಯಲಾಗಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ. ಜೆಹಾದಿ ಕೃತ್ಯಕ್ಕೆ ಮುಗ್ಧ ಹಿಂದೂ ಯುವತಿ ಬಲಿಯಾಗಿದ್ದರೂ ಕಾಂಗ್ರೆಸ್ ನಾಯಕರು ಮೌನವಾಗಿ ಕುಳಿತಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹಸಚಿವರ ಬೇಜವಾಬ್ದಾರಿ ಹೇಳಿಕೆಗಳು ಪರೋಕ್ಷವಾಗಿ ಮತಾಂಧರಿಗೆ ಪ್ರೋತ್ಸಾಹ ನೀಡುವಂತಿವೆ. ಇಂತಹ ಅಮಾನುಷ ಕೊಲೆಯನ್ನು ಖಂಡಿಸಿ ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ ಅವರ ವಿರುದ್ದವೇ ಕೇಸು ದಾಖಲಿಸಿದ್ದು ಕಾಂಗ್ರೆಸಿನ ಓಲೈಕೆ ರಾಜಕೀಯಕ್ಕೆ ಜ್ವಲಂತ ಉದಾಹರಣೆ. ಸಮಾಜಘಾತಕ ಕೃತ್ಯಗಳು ನಡೆದಾಗ ತತ್‌ಕ್ಷಣವೇ ಅದರ ವಿರುದ್ಧ ಹೋರಾಟ ಮಾಡುವ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಂತಹ ದೇಶಭಕ್ತ ಸಂಘಟನೆ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಅಂತಹ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿ ಬೆದರಿಸುವ ಕೆಲಸ ಮಾಡಿದ್ದರೆ ಮುಂದಿನ ದಿನಗಳಲ್ಲಿ ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದರು. ಸುನಿಲ್ ಕುಮಾರ್ ಖಂಡನೆ: ನೇಹಾ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿರುವುದನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ಖಂಡಿಸಿದ್ದಾರೆ. ನ್ಯಾಯ ಕೇಳಿದ ವಿದ್ಯಾರ್ಥಿ ಸಂಘಟನೆ ವಿರುದ್ಧ ಕೇಸು ದಾಖಲಿಸಿರುವುದು ಅಕ್ಷಮ್ಯ ಎಂದಿದ್ದಾರೆ.