Advertisement

ಪಿ.ವಿ.ಸಿಂಧು ಶುಭಾರಂಭ, ಕಿದಂಬಿ ಶ್ರೀಕಾಂತ್‌ಗೆ ಸೋಲು

01:23 PM Dec 14, 2017 | |

ದುಬೈ: ಇಲ್ಲಿ ನಡೆಯುತ್ತಿರುವ ದುಬೈ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಕೂಟದಲ್ಲಿ ಭಾರತ ಮೊದಲ ದಿನ ಮಿಶ್ರ ಫ‌ಲ ಅನುಭವಿಸಿದೆ. ಭಾರತದ ತಾರಾ ಆಟಗಾರ್ತಿ ಪಿ.ವಿ.ಸಿಂಧು ಮಹಿಳಾ ಸಿಂಗಲ್ಸ್‌ ಪಂದ್ಯದಲ್ಲಿ ಶುಭಾರಂಭ ಮಾಡಿದ್ದಾರೆ. ಆದರೆ ನಿರೀಕ್ಷೆ ಮೂಡಿಸಿದ್ದ ಕಿದಂಬಿ ಶ್ರೀಕಾಂತ್‌ ಮೊದಲ ಸುತ್ತಿನಲ್ಲೇ ಸೋಲು ಕಂಡಿದ್ದಾರೆ.

Advertisement

ಸಿಂಧುಗೆ ಮುನ್ನಡೆ: ಗುಂಪು “ಎ’ನಲ್ಲಿ ನಡೆದ ಸಿಂಗಲ್ಸ್‌ ಪಂದ್ಯದಲ್ಲಿ ರಿಯೋ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು 21-11, 16-21, 21-18 ಗೇಮ್‌ಗಳ ಅಂತರದಿಂದ ಚೀನಾದ 9ನೇ ಶ್ರೇಯಾಂಕಿತ ಹಿಬಿಂಗ್ವಿಯೊ ಅವರನ್ನು ಪರಾಭವಗೊಳಿಸಿದರು. ಸಿಂಧು ಮೊದಲ ಗೇಮ್‌ನಲ್ಲಿಯೇ ತನ್ನ ಸಾಮರ್ಥ್ಯ ಏನೆಂಬುದನ್ನು ತೋರಿಸಿದರು. 21-11 ರಿಂದ ಗೇಮ್‌ ತಮ್ಮದಾಗಿಸಿಕೊಂಡರು. 1-0 ಅಂತರದ ಮುನ್ನಡೆ ಪಡೆದುಕೊಂಡರು. ಆದರೆ ಎರಡನೇ ಗೇಮ್‌ನಲ್ಲಿ ಚೀನಾ ಆಟಗಾರ್ತಿ ಪ್ರಬಲ ಪೈಪೋಟಿ ಒಡ್ಡಿದರಲ್ಲದೆ 16-21 ಅಂತರದಿಂದ ಸಿಂಧುಗೆ ಆಘಾತ ನೀಡಿದರು. 1-1ರಿಂದ ಗೇಮ್‌ ಸಮಸಾಧಿಸಿದರು. ಕುತೂಹಲ ಹುಟ್ಟಿಸಿದ್ದ ಅಂತಿಮ ಸೆಟ್‌ನಲ್ಲಿ ಇಬ್ಬರಿಂದಲೂ ಜಿದ್ದಿನ ಸೆಣಸಾಟ ನಡೆಯಿತು. ಒಂದು ಸಲ ಅಂಕಗಳಿಕೆಯಲ್ಲಿ ಸಿಂಧು ಮತ್ತೂಂದು ಸಲ ಅಂಕಗಳಿಕೆಯಲ್ಲಿ ಬಿಂಗ್ವಿಯೊ ಮುನ್ನಡೆ ಸಾಧಿಸಿದರು. ಅಂತಿಮವಾಗಿ ಸಿಂಧು ಗೇಮ್‌ ತಮ್ಮದಾಗಿಸಿಕೊಂಡರು.

ಗುಂಪು “ಬಿ’ನಲ್ಲಿ ಶ್ರೀಕಿಗೆ ಸೋಲು: ಗುಂಪು “ಬಿ’ನಲ್ಲಿ ನಡೆದ ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್‌ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್‌ಸೆನ್‌ ವಿರುದಟಛಿ 13-21, 17-21 ಅಂತರದ ನೇರ ಸೆಟ್‌ಗಳ ಸೋಲು ಕಂಡರು.

ಶ್ರೀಕಾಂತ್‌ ಪಂದ್ಯ ಗೆಲ್ಲಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಮೊದಲ ಗೇಮ್‌ನಲ್ಲೇ ಅವರು ಕಳಪೆ ಆಟ ಪ್ರದರ್ಶಿಸಿದರು. 13-21ರಿಂದ ಸೋಲುಂಡು ಹಿನ್ನಡೆ ಅನುಭವಿಸಿದರು. ಎರಡನೇ ಸೆಟ್‌ನಲ್ಲೂ ಶ್ರೀಕಾಂತ್‌ ಅವರಿಂದ ಮಿಂಚಿನ ಆಟ ಹೊರಹೊಮ್ಮಲಿಲ್ಲ. 17-21ರಿಂದ ಸೋತು ನಿರ್ಗಮಿಸಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next