Advertisement

ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್‌ : ನಾಟಕ ಸ್ಪರ್ಧೆ ಉದ್ಘಾಟನೆ 

12:14 PM Dec 25, 2017 | Team Udayavani |

ವಿಟ್ಲ: ಮಂಚಿ-ಕುಕ್ಕಾಜೆ ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್‌ ವತಿಯಿಂದ ವಿಟ್ಲ ವಿಟ್ಠಲ ವಿದ್ಯಾ ಸಂಘದ ಸಹಯೋಗದೊಂದಿಗೆ ರಂಗಭೂಮಿಕಾ ಟ್ರಸ್ಟ್‌ನ ದಶಮಾನೋತ್ಸ ವದ ಸಲುವಾಗಿ ವಿಟ್ಠಲ ಪ.ಪೂ. ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಬಿ.ವಿ. ಕಾರಂತರ ನೆನಪಿನ ಅಂತರ ಕಾಲೇಜು ನಾಟಕ ಸ್ಪರ್ಧೆ ‘ರಂಗಭೂಮಿಕಾ-2017’ ಅನ್ನು ರವಿವಾರ ಉದ್ಘಾಟಿಸಲಾಯಿತು. 

Advertisement

ವಿಟ್ಲ ವಿಟ್ಠಲ ವಿದ್ಯಾ ಸಂಘದ ಸಂಚಾಲಕ ಎಲ್‌.ಎನ್‌. ಕೂಡೂರು ಕಾರ್ಯಕ್ರಮ ಉದ್ಘಾಟಿಸಿದರು. ರಂಗಭೂಮಿಕಾ ಸಂಚಾಲಕ ಎಂ. ಅನಂತಕೃಷ್ಣ ಹೆಬ್ಟಾರ್‌ ವಿಟ್ಲ, ಯಶವಂತ ವಿಟ್ಲ, ವಿಟ್ಠಲ ಪ.ಪೂ. ಕಾಲೇಜಿನ ಪ್ರಾಂಶುಪಾಲ ಆದರ್ಶ ಎ.ಎಸ್‌. ಚೊಕ್ಕಾಡಿ, ಉಪಪ್ರಾಂಶುಪಾಲ ಕಿರಣ್‌ ಕುಮಾರ್‌ ಬ್ರಹ್ಮಾವರ ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟ್‌ ಅಧ್ಯಕ್ಷ ಕಜೆ ರಾಮಚಂದ್ರ ಭಟ್‌ ಸ್ವಾಗತಿಸಿದರು. ಅರವಿಂದ್‌ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಕುಣಿ ಕುಣಿ ನವಿಲೆ, ಬಂಟ್ವಾಳ ಎಸ್‌ವಿಎಸ್‌ ಕಾಲೇಜಿನ ತಂಡದಿಂದ
ಕರುಣಾನಿಧಿ, ಮಂಗಳೂರು ಪದುವಾ ಕಾಲೇಜು ತಂಡದಿಂದ ಮದರ್‌ ಕರೇಜ್‌ ನಾಟಕಗಳು ಪ್ರದರ್ಶನಗೊಂಡವು. ರಂಗನಟ ಚಂದ್ರಹಾಸ ಉಳ್ಳಾಲ, ರಂಗ ವಿಮರ್ಶಕ ಪ್ರಭಾಕರ ತುಮರಿ, ರಂಗಕರ್ಮಿ ಶೀನಾ ನಾಡೋಳಿ ಅವರು ತೀರ್ಪುಗಾರರಾಗಿ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next