Advertisement

Kollywood: ರಜಿನಿಕಾಂತ್‌ ʼಕೂಲಿʼಗೆ ಖಡಕ್‌ ವಿಲನ್‌ ಆಗಿ ಅಕ್ಕಿನೇನಿ ನಾಗಾರ್ಜುನ ಎಂಟ್ರಿ?

11:43 AM Jul 25, 2024 | Team Udayavani |

ಚೆನ್ನೈ:  ಸೂಪರ್‌ ಸ್ಟಾರ್‌ ರಜಿನಿಕಾಂತ್‌ – ಲೋಕೇಶ್‌ ಕನಕರಾಜ್‌ ( Lokesh Kanagaraj) ಅವರ ʼಕೂಲಿʼ (Coolie) ಕಾಲಿವುಡ್‌ ನಲ್ಲಿ ಶೂಟಿಂಗ್‌ ಹಂತದಲ್ಲೇ ಜೋರಾಗಿ ಸದ್ದು ಮಾಡುತ್ತಿದೆ. ಪಾತ್ರ ವರ್ಗದ ಬಗ್ಗೆ ದಿನಕಳೆದಂತೆ  ಲೇಟೆಸ್ಟ್‌ ಅಪ್ಡೇಟ್‌ ಗಳು ಹೊರಬೀಳುತ್ತಿದೆ.

Advertisement

ಟೈಟಲ್‌ ಟೀಸರ್‌ ಮೂಲಕ ಡಿಫ್ರೆಂಟ್‌ ಆಗಿಯೇ ಸದ್ದು ಮಾಡಿರುವ ʼಕೂಲಿʼಯಲ್ಲಿ ಸೂಪರ್‌ ಸ್ಟಾರ್‌ ರಜಿನಿಕಾಂತ್‌ (Rajinikanth) ಭಿನ್ನ ಗೆಟಪ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಲೋಕೇಶ್‌ ಕನಕರಾಜ್‌ ಮೊದಲಿನಿಂದಲೂ ತನ್ನ ಸಿನಿಮಾಗಳಲ್ಲಿ ಸರ್ಪ್ರೈಸ್‌ ಅಂಶಗಳನ್ನು ನೀಡುತ್ತಲೇ ಬಂದಿದ್ದಾರೆ. ಸಿನಿಮಾದಲ್ಲಿನ ಪಾತ್ರವರ್ಗದ ಆಯ್ಕೆಯಿಂದಾಗಿ ಅವರ ಚಿತ್ರ ಪ್ಯಾನ್‌ ಇಂಡಿಯಾ ಪ್ರೇಕ್ಷಕರನ್ನು ರಂಜಿಸುತ್ತದೆ.

ʼಕೂಲಿʼಯಲ್ಲೂ ಬಿಗ್‌ ಸ್ಟಾರ್‌ ಗಳು ಇರಲಿದ್ದಾರೆ ಎನ್ನಲಾಗಿದೆ. ಇದೀಗ ಪಾತ್ರವರ್ಗದ ಬಗ್ಗೆ ಲೇಟೆಸ್ಟ್‌ ಅಪ್ಡೇಟ್‌ ವೊಂದು ಹೊರಬಿದ್ದಿದೆ.

ಟಾಲಿವುಡ್‌ ಸೂಪರ್‌ ಸ್ಟಾರ್‌ ನಾಗಾರ್ಜುನ ಅಕ್ಕಿನೇನಿ (Nagarjuna Akkineni) ʼಕೂಲಿʼಗೆ ಸಿನಿಮಾದ ಭಾಗವಾಗಲಿದ್ದಾರೆ ಎಂದು ʼ ಇಂಡಿಯಾ ಗ್ಲಿಟ್ಜ್ʼ ವರದಿ ಮಾಡಿದೆ.

Advertisement

ʼಕೂಲಿʼ ಸಿನಿಮಾದಲ್ಲಿ ಮಲಯಾಳಂ ನಟರಾದ ಶೋಬನಾ ಮತ್ತು ಸೌಬಿನ್ ಶಾಹಿರ್ (Soubin Shahir) ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಇದರೊಂದಿಗೆ ನಾಗಾರ್ಜುನ ಅವರು ಕೂಡ ನಟಿಸಲಿದ್ದು, ವಿಲನ್‌ ಪಾತ್ರಕ್ಕೆ ಅವರು ಬಣ್ಣ ಹಚ್ಚಲಿದ್ದಾರೆ ಎಂದು ವರದಿ ತಿಳಿಸಿದೆ.

ʼಕೂಲಿʼಯ ಸಿನಿಮಾದ ಸಂಪೂರ್ಣ ಪಾತ್ರವರ್ಗ ಇನ್ನಷ್ಟೇ ರಿವೀಲ್‌ ಆಗಬೇಕಿದೆ. ಸತ್ಯರಾಜ್ (Satyaraj) ಮತ್ತು ಶ್ರುತಿ ಹಾಸನ್ (Shruti Haasan) ಅವರು ಸಿನಿಮಾದ ಭಾಗವಾಗಲಿದ್ದಾರೆ ಎನ್ನುವುದು ಅಧಿಕೃತವಾಗಿದೆ.

ಅಕ್ಕಿನೇನಿ ಇತ್ತೀಚೆಗೆ ʼನಾ ಸಾಮಿ ರಂಗʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮುಂದೆ ಅವರು ಧನುಷ್‌ (Dhanush) ಅವರ ʼಕುಬೇರʼ (Kubera) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತ ರಜಿನಿಕಾಂತ್‌ ಟಿ.ಜೆ.ಜ್ಞಾನವೇಲ್ ಅವರ ʼವೆಟ್ಟೈಯನ್ʼ (Vettaiyan) ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next