Advertisement

ಎಪಿಎಂಸಿಯಿಂದಲೇ ತರಕಾರಿ ಖರೀದಿಸಿ: ಸಚಿವ

01:05 PM Apr 16, 2020 | mahesh |

ಮೈಸೂರು: ಲಾಕ್‌ಡೌನ್‌ ಹಿನ್ನಲೆಯಲ್ಲಿ ಹಾಪ್‌ಕಾಮ್ಸ್‌ ಮತ್ತು ಎಂಪಿಎಂಸಿ ಮಾರುಕಟ್ಟೆಯಲ್ಲಿನ ತರಕಾರಿ ದರ ಸಮರ ದಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ತಪ್ಪಿಸಲಾಗುವುದು ಎಂದು ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದರು.

Advertisement

ಮೈಸೂರಿನ ಜಿಪಂ ಸಭಾಂಗಣದಲ್ಲಿ ಬುಧವಾರ ಎಂಪಿಎಂಸಿ ವರ್ತಕರು, ದಲ್ಲಾಳಿಗಳು ಮತ್ತು ರೈತ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ಎಪಿಎಂಸಿಯಲ್ಲಿ ಮಾರಾಟವಾಗುವ ತರಕಾರಿ ದರಕ್ಕಿಂತ ಹಾಪ್‌ಕಾಮ್ಸ್‌ನಲ್ಲಿ ಮಾರಾಟವಾಗುವ ತರಕಾರಿ ಬೆಲೆ ದುಬಾರಿಯಾಗಿದ್ದು, ಇದರಿಂದ ಗ್ರಾಹಕರಿಗೆ ಸಮಸ್ಯೆಯಾಗಿದೆ. ಈ ಹಿನ್ನಲೆ ಯಲ್ಲಿ ಹಾಪ್‌ಕಾಮ್ಸ್‌ ಕೂಡ ರೈತರಿಂದ ನೇರವಾಗಿ ಖರೀದಿ ಮಾಡದೇ ಎಪಿಎಂಸಿ ಮೂಲಕ ಖರೀದಿ ಮಾಡಿ, ಆ ಮೂಲಕ ಹಾಪ್‌ ಕಾಮ್ಸ್‌ನ ಮಳಿಗೆಗಳಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಬೇಕು ಎಂದು ಸೂಚನೆ ನೀಡಿದರು. ಇದಕ್ಕೂ ಮುನ್ನ ಶಾಸಕ ರಾಮದಾಸ್‌ ಮಾತನಾಡಿ, ಹಾಪ್‌ಕಾಮ್ಸ್ ನಲ್ಲಿ ದುಬಾರಿ ಬೆಲೆಗೆ ತರಕಾರಿ, ಹಣ್ಣು ಮಾರಾಟವಾಗುತ್ತಿದ್ದು, ಎಂಪಿಎಂಸಿಯಲ್ಲಿನ ತರಕಾರಿ ದರಕ್ಕಿಂತ ಹೆಚ್ಚಾಗಿದೆ. ಇದರಿಂದ ಗ್ರಾಹಕರಿಗೆ
ತೊಂದರೆಯಾಗಿದೆ. ಆದ್ದರಿಂದ ಹಾಪ್‌ ಕಾಮ್ಸ್‌ ಕೂಡ ಎಪಿಎಂಸಿಯಿಂದಲ್ಲೇ ತರಕಾರಿ ಖರೀದಿ ಮಾಡಿ ಮಾರಾಟಬೇಕು ಎಂದು ಸಲಹೆ ನೀಡಿದರು.

ಮೈಸೂರಿನ ಎಂಪಿಎಂಸಿಯ ತರಕಾರಿ ಮಾರುಕಟ್ಟೆಗೆ ನಿತ್ಯ 50ರಿಂದ 60 ಸಾವಿರ ಟನ್‌ ತರಕಾರಿ ಬರುತ್ತಿದ್ದು, ಶೇ.90ರಷ್ಟು ಕೇರಳಕ್ಕೆ ರವಾನೆಯಾಗುತ್ತಿದೆ. ಕೇರಳಕ್ಕೆ ಸಂಚಾರ ನಿರ್ಬಂಧಿಸಿದರೆ ರೈತರಿಗೆ ಸಮಸ್ಯೆಯಾಗಲಿದೆ. ಬೆಲೆ ಪಾತಾಳಕ್ಕೆ ಇಳಿಯಲಿದೆ ಎಂದು ರೈತರು ಸೇರಿದಂತೆ ಕೆಲ ವರ್ತಕರು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಸಚಿವರು, ಸದ್ಯಕ್ಕೆ ಕೇರಳಕ್ಕೆ ತರಕಾರಿ ರವಾನೆಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ದೊಡ್ಡ ವಾಹನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ತರಕಾರಿ ರವಾನಿಸುವ ಮೂಲಕ ವಾಹನ ಸಂಚಾರವನ್ನು ಕಡಿಮೆ ಮಾಡಬೇಕು. ಅಲ್ಲದೇ ಸೋಂಕು ತಡೆಗೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next