Advertisement

ತೊಗರಿ ಭಾವಾಂತರದಡಿ ಖರೀದಿಸಿ

11:28 AM Dec 14, 2018 | Team Udayavani |

ಕಲಬುರಗಿ: ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ದರದ ಸ್ಥಿರತೆ ಕಾಪಾಡುವ ಹಾಗೂ ರೈತರ ಜತೆಗೆ ವ್ಯಾಪಾರಿಗಳ ಹಿತ ಕಾಪಾಡುವ ಭಾವಾಂತರ ಯೋಜನೆ ಅಡಿ ಪ್ರಸಕ್ತವಾಗಿಯೇ ತೊಗರಿ ಖರೀದಿಸುವಂತೆ ಹಾಗೂ ಬಂದ್‌ ಆಗಿರುವ ದಾಲ್‌ಮಿಲ್‌ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವಂತೆ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ (ಎಚ್‌ಕೆಸಿಸಿಐ) ಸಂಸ್ಥೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಗೆ ಮನವಿ ಸಲ್ಲಿಸಿದೆ.

Advertisement

ಈಗಾಗಲೇ ತೊಗರಿ ರಾಶಿಯಾಗಿ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಆದರೆ ಇಲ್ಲಿ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಗೆ ಮುಂದಾದಲ್ಲಿ ರೈತರಿಗೆ ಸ್ವಲ್ಪ ಅನುಕೂಲವಾಗುತ್ತಿ¨. ಆದರೆ ವ್ಯಾಪಾರಿ (ಮಧ್ಯವರ್ತಿ)ಗಳಿಗೆ ಯಾವುದೇ ಅನುಕೂಲವಿಲ್ಲ. ಹೀಗಾಗಿ ಮಾರುಕಟ್ಟೆ ವ್ಯವಸ್ಥೆಗೆ
ಹೊಡೆತ ಬೀಳುತ್ತಿದೆ. ರೈತ ಹಾಗೂ ಮಧ್ಯವರ್ತಿ ಈ ಇಬ್ಬರ ಹಿತ ಕಾಪಾಡುವ ಭಾವಾಂತರ ಯೋಜನೆ ಕಾರ್ಯಾನುಷ್ಠಾನ ಗೊಳಿಸುವಂತೆ ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಹಾಗೂ ಗೌರವ ಕಾರ್ಯದರ್ಶಿ ಶಶಿಕಾಂತ ಪಾಟೀಲ ಸಿಎಂಗೆ ಬರೆಯಲಾದ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಪುನಶ್ಚೇತನಾ ವರದಿ ಧೂಳು: ಹಲವಾರು ಕಾರಣಗಳಿಂದ ಈ ಭಾಗದ ಪ್ರಮುಖ ಉದ್ಯಮವಾಗಿರುವ ದಾಲ್‌ ಮಿಲ್‌ಗ‌ಳು ಬಂದ್‌ಗಿರುವ ಹಾಗೂ ಪುನಶ್ಚೇತನಾ ಕುರಿತಾಗಿ ಜಿಲ್ಲಾ ಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿ 11 ತಿಂಗಳುಗಳು ಗತಿಸಿದರೂ ಯಾವುದೇ ಬಗೆಯ ಆರ್ಥಿಕ ನೆರವಿನ ಪ್ಯಾಕೆಜ್‌ನ್ನು ಘೋಷಿಸಿರುವುದಿಲ್ಲ. ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಮುಖ್ಯಮಂತ್ರಿಗಳಿಗೂ ನಿಯೋಗದ ಮೂಲಕ ತೆರಳಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಆದರೆ ಇಂದಿನ ದಿನದವರೆಗೂ ಯಾವುದೇ ಚಕಾರವಿಲ್ಲ.

ಮುಖ್ಯವಾಗಿ ಪ್ರಸಕ್ತ ಚಾಲ್ತಿಯಲ್ಲಿರುವ ಬೆಳಗಾವಿ ಅಧಿವೇಶನದಲ್ಲೂ ಭಾವಾಂತರ ಯೋಜನೆ ಅಳವಡಿಸುವ ಇಲ್ಲವೆ ದಾಲ್‌ ಮಿಲ್‌ಗ‌ಳಿಗೆ ವಿಶೇಷ ನೆರವು ನೀಡುವ ಯಾವುದೇ ಸೂಚನೆಗಳು ಕಂಡು ಬರುತ್ತಿಲ್ಲ. ಬರೀ ಆಶ್ವಾಸನೆಗಳನ್ನು ನೀಡಲಾಗುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಪಾಟೀಲ್‌ದ್ವಯರು ಕಳವಳ ವ್ಯಕ್ತಪಡಿಸಿದ್ದಾರೆ.

ತೊಗರಿ ಭಾವಾಂತರ ಯೋಜನೆಯಡಿ ಸೇರ್ಪಡೆ ಹಾಗೂ ದಾಲ್‌ಮಿಲ್‌ಗ‌ಳ ಪುನಶ್ಚೇತನಾ ಸಂಬಂಧವಾಗಿ ಎಚ್‌ಕೆಸಿಸಿಐಗೆ ಈ ಹಿಂದೆ ಭೇಟಿ ನೀಡಿದ್ದ ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ಗಮನಕ್ಕೂ ತರಲಾಗಿದೆ. ಅಲ್ಲದೇ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ| ಟಿ.ಎನ್‌. ಪ್ರಕಾಶ ಕಮ್ಮರಡಿ ಅವರಿಗೂ ಮನವಿ ಸಲ್ಲಿಸಿದ ವೇಳೆ ಅವರು ಸಹಾಯ ಕಲ್ಪಿಸುವುದಾಗಿ ಭರವಸೆ ನೀಡಿದ್ದರು ಎಂದು ತಿಳಿಸಿದ್ದಾರೆ.

Advertisement

ಈಗ ಉತ್ತರ ಕರ್ನಾಟಕದ ರೈತರ ಎ.ಪಿ.ಎಂ.ಸಿ. ವರ್ತಕರ ಹಾಗೂ ದಾಲ್‌ ಮಿಲ್‌ಗ‌ಳ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನೇರ ಖರೀದಿ ನೀತಿಯಿಂದಾಗಿ ರೈತರಿಗೆ, ಎಪಿಎಂಸಿ ವರ್ತಕರಿಗೆ, ಹಾಗೂ ದಾಲ್‌ಮಿಲ್‌ಗ‌ಳಿಗೆ ಆಗುತ್ತಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಟ್ಟು, ಭಾವಾಂತರ ಯೋಜನೆಯ ಅಳವಡಿಕೆ ಹೇಗೆ
ಸಹಕಾರಿಯಾಗಬಲ್ಲದು ಎಂದು ವಿವರಿಸಲು ಯೋಚಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next