Advertisement

ಮಗಳ ಮದುವೆಗೆ ಇಂದಿನಿಂದಲೇ ಎಲ್ಐಸಿಯಲ್ಲಿ 150 ರೂ ಹೂಡಿಕೆ ಮಾಡಿ..! ಮಾಹಿತಿ ಇಲ್ಲಿದೆ

05:38 PM May 23, 2021 | Team Udayavani |

ನವ ದೆಹಲಿ: ಭಾರತದಂತಹ ದೇಶದಲ್ಲಿ ಹೆಣ್ಣು ಮಕ್ಕಳಿರುವ ತಂದೆಯಂದಿರು ವಿಶೇಷವಾಗಿ ಮಗಳ ಭವಿಷ್ಯಕ್ಕೆ, ಮದುವೆಗೆಂದು ಹಣ ಸಂಗ್ರಹಿಸಿಡುವ ಅಭ್ಯಾಸವಿದೆ. ಅದು ಆಪತ್ಕಾಲಿಗೆ ಸಹಾಯವಾಗುತ್ತದೆ ಎಂಬ ದೃಷ್ಟಿಯೂ ಹೌದು.

Advertisement

ಮಗಳ ಆರಂಭದ ದಿನಗಳಿಂದ ಹಿಡಿದು ಆಕೆಯ ವಿದ್ಯಾಭ್ಯಾಸ, ವಿವಾಹ ಮಾಡಿಕೊಡುವಲ್ಲಿಯ ತನಕ ತಂದೆಯಾದವನು ಚಿನ್ನದ ರೂಪದಲ್ಲಿಯೋ, ಹಣದ ರೂಪದಲ್ಲಿಯೋ ಕೂಡಿ ಇಡುವ ಅಥವಾ ಸಂಗ್ರಹಿಸಿ ಇಡುತ್ತಾರೆ.

ಇದನ್ನೂ ಓದಿ : ಸಾವಿನ ಓಟ..: ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದ 21 ಓಟಗಾರರು ಪ್ರತಿಕೂಲ ಹವಾಮಾನಕ್ಕೆ ಬಲಿ!

ಇನ್ನು, ಮಗಳ ವಿದ್ಯಾಭ್ಯಾಸ ಹಾಗೂ ವಿವಾಹಕ್ಕೆ ಹಣ ಸಂಗ್ರಹಿಸಿಡುವ ಬಗ್ಗೆ ಚಿಂತೆ ಬೇಕಾಗಿಲ್ಲ. ಹೆಣ್ಣುಮಕ್ಕಳಿಗಾಗಿ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ವಿಶೇಷ ಪಾಲಿಸಿ ನಿಮಗೆ ಸಹಾಯ ಮಾಡುತ್ತದೆ. ಆ ಬಗ್ಗೆ ಮಾಹಿತಿ ನಿಮಗೆ ಈ ಮೂಲಕ ತಿಳಿಸುವ ಪ್ರಯತ್ನ ನಮ್ಮದು.

ಎಲ್ ಐ ಸಿ ಯ ಈ ಯೋಜನೆಯಡಿಯಲ್ಲಿ ಪ್ರತಿ ದಿನ ಸಣ್ಣ ಮೊತ್ತವನ್ನು ಉಳಿತಾಯ ಮಾಡುವುದುರ ಮೂಲಕ ದೊಡ್ಡ ಮೊತ್ತವು ನಿಮ್ಮ ಪಾಲಿಗಾಗುತ್ತದೆ.

Advertisement

ಎಲ್‌ ಐ ಸಿ(ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) ಹೆಣ್ಣುಮಕ್ಕಳ ಮದುವೆಗಾಗಿ ಈ ವಿಶೇಷ ಯೋಜನೆಯಲ್ಲಿ ನಿಮಗೆ ಒಟ್ಟು 22 ಲಕ್ಷ ರೂ. ಸಿಗುತ್ತವೆ.

ಹೌದು, ಎಲ ಐ ಸಿ ಯ ಈ ಪಾಲಿಸಿಯಡಿಯಲ್ಲಿ ನೀವು ಪ್ರತಿದಿನ 150 ರೂಪಾಯಿಗಳನ್ನು ಹೂಡಿಕೆ ಮಾಡಿದರೇ, ನೀವು ಮಗ ಳಮದುವೆ ಮಾಡುವಾಗ ನಿಮಗೆ 22 ಲಕ್ಷ ರೂಪಾಯಿಯ ದೊಡ್ಡ ಮೊತ್ತ ನಿಮಗೆ ಸಿಗುತ್ತದೆ.

ಈ ಪಾಲಿಸಿಯನ್ನು ಆರಂಭಿಸಿದ ನಂತರ ತಂದೆ ಅಥವ ಹೂಡಿಕೆದಾರ ಮೃತನಾದರೇ, ಯಾವುದೇ ಹೂಡಿಕೆ ಮಾಡುವ ಅವಶ್ಯಕತೆಯಿಲ್ಲ. ಹೆಣ್ಣು ಮಗಳ ತಂದೆಯ ಮರಣದ ನಂತರ ಪ್ರೀಮಿಯಂ ಪಾವತಿಸದಿದ್ದರೂ ಸಹ ಪಾಲಿಸಿ ಮುಂದುವರಿಯುತ್ತದೆ. ಅಷ್ಟೇ ಅಲ್ಲ, ತಂದೆಯ ಮರಣದ ನಂತರ ನಿಮಗೆ ಕೂಡಲೇ 10 ಲಕ್ಷ ರೂ. ಸಿಗುತ್ತದೆ. ಇದಲ್ಲದೆ, ತಂದೆ ಅಪಘಾತದಲ್ಲಿ ಮರಣ ಹೊಂದಿದರೆ ಅವರಿಗೆ 20 ಲಕ್ಷ ರೂಪಾಯಿ ಸಿಗುತ್ತದೆ.

ಹೆಚ್ಚಿನ ಮಾಹಿತಿಗೆ ಎಲ್ ಐ ಸಿ ತನ್ನ ಅಧಿಕೃತ ವೆಬ್‌ ಸೈಟ್‌ ನಲ್ಲಿ ತನ್ನ ಗ್ರಾಹಕರಿಗೆ ಸುಲಭವಾಗುವ ಹಾಗೆ ವಿವರಿಸಿದೆ.

ಇದನ್ನೂ ಓದಿ : ಮೋದಿ ಕಣ್ಣೀರಾದ ಕ್ಷಣ : ಪ್ರಧಾನಿಗೆ ಆಸ್ಕರ್ ಕೊಡಬೇಕೆಂದು ವ್ಯಂಗ್ಯವಾಡಿದ ನಿರ್ದೇಶಕ ವರ್ಮಾ

Advertisement

Udayavani is now on Telegram. Click here to join our channel and stay updated with the latest news.

Next