Advertisement

ರೈತರ ತೋಟದಿಂದಲೇ ಬೆಳೆ ಖರೀದಿ: ಪರಮಶಿವಯ್ಯ

06:27 PM Dec 03, 2020 | Suhan S |

ರಾಮನಗರ: ರೈತರು ತಾವು ಬೆಳೆದ ಉತ್ಪನ್ನಗಳನ್ನುಅವರ ತೋಟಗಳ ಬಳಿಯಿಂದಲೇ ಮಾರುಕಟ್ಟೆಬೆಲೆ ಕೊಟ್ಟು ಖರೀದಿಸುವುದು, ಬಿತ್ತನೆ ಬೀಜ, ಸಾವಯವ ಗೊಬ್ಬರ ಪೂರೈಕೆ ಮುಂತಾಗಿ ಕೃಷಿಗೆಅಗತ್ಯವಿರುವ ವಸ್ತು ಪೂರೈಸುವ ಉದ್ದೇಶದಿಂದ ಜೈ ಜವಾನ್‌ – ಜೈ ಕಿಸಾನ್‌ ರೈತ ಸಂಪರ್ಕ ಕೇಂದ್ರ ಆರಂಭಿಸಿರುವುದಾಗಿ ಎಲ್‌.ವಿ.ಗ್ರೂಪ್‌ ಮಾಲೀಕ ಎಲ್‌.ವಿ.ಪರಮಶಿವಯ್ಯ ತಿಳಿಸಿದರು.

Advertisement

ತಾಲೂಕಿನ ಕೇತೋಹಳ್ಳಿ ಗ್ರಾಮದಲ್ಲಿ ಜೈಜವಾನ್‌-ಜೈ ಕಿಸಾನ್‌ ಕೃಷಿ ಉತ್ಪನ್ನ ಕೇಂದ್ರದಉದ್ಘಾಟನೆ, ಪ್ರಗತಿ ಪರ ರೈತರ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾರುಕಟ್ಟೆ ಬೆಲೆ: ರೈತರು ತಾವು ಬೆಳೆದ ಪದಾರ್ಥಗಳಿಗೆ ಸಗಟು, ಚಿಲ್ಲರೆ ಮಾರುಕಟ್ಟೆಗೆ ಸಾಗಿಸಲು ಸಾಗಾಟದ ವೆಚ್ಚವೇ ಅಧಿಕ. ಹೀಗಾಗಿಕೆಎಂಎಫ್‌ ಮಾದರಿಯಲ್ಲಿ ಪ್ರತಿ ಹಳ್ಳಿಗೆ ಹಾಲುಸಂಗ್ರಹಕ್ಕಾಗಿ ಲಾರಿ ತೆರಳುತ್ತಿದೆ. ಇದೇ ಮಾದರಿಯಲ್ಲಿ ತಾವೂ ಪ್ರತಿ ಹಳ್ಳಿಗಳಿಗೆ ವಾಹನ ಕಳುಹಿಸಲಾಗುತ್ತಿದೆ. ಸ್ಥಳೀಯ ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಬೆಲೆ ನೀಡಿ ಖರೀದಿಸಲಾಗುತ್ತದೆ. ಇದರಿಂದಾಗಿ ರೈತರಿಗೆ ಸಾಗಾಟದ ವೆಚ್ಚ ಕಡಿಮೆಯಾಗಲಿದೆ ಎಂದು ಹೇಳಿದರು.

ಕೃಷಿ ಮೂಲಕ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ತಾವು ನಿರೂಪಿಸುವುದಾಗಿ ತಿಳಿಸಿದಅವರು, ತಾವು ಸ್ಥಾಪಿಸಿರುವ ಕೃಷಿ ಕೇಂದ್ರದಲ್ಲಿಯುವಕರೇ ಹೆಚ್ಚು ಇರಲಿದ್ದಾರೆ. ಅವರೂ ಕೃಷಿಮಾಡಲಿದ್ದಾರೆ. ಉದ್ಯೋಗಕ್ಕಾಗಿ ದೊಡ್ಡ ನಗರಗಳನ್ನು ಆಶ್ರಯಿಸುವುದು ತಪ್ಪುತ್ತದೆ ಎಂದರು.

ಫ‌ಲವತ್ತತೆ ಹೆಚ್ಚಿಸಿ: ಮಣ್ಣು ಮತ್ತು ಸಮಗ್ರ ಕೃಷಿ ತಜ್ಞ ಸಾಯಿಲ್ ವಾಸು, ಮಣ್ಣಿನ ಬಗ್ಗೆ ಉಪನ್ಯಾಸ ನೀಡಿದರು. ಸಾವಯವ, ತೇವಾಂಶ, ಜೀವಾಂಶ, ಹೊದಿಕೆ ಈ ನಾಲ್ಕು ಗುಣಗಳನ್ನು ರೈತರು ಪಾಲಿಸಿ ದರೆ ಮಣ್ಣಿನ ಫಲವತ್ತತೆ ಹೆಚ್ಚಾಗಲಿದೆ ಎಂದರು. ಸಮಗ್ರ ಕೃಷಿ ಬೇಸಾಯದಿಂದ ವೆಚ್ಚ ಕಡಿಮೆಮಾಡಿ ಹೆಚ್ಚು ಬೆಳೆ ಬೆಳಯಲು ಸಹಕಾರಿಯಾಗುತ್ತದೆ. ಜತೆಗೆ ಮಣ್ಣಿನ ಫಲವತ್ತೆ ಉತ್ತಮವಾಗಲು ಸಾಧ್ಯವಿದೆ. ಗ್ರಾಮದ ಸುತ್ತಮುತ್ತ ಇರುವಕೆರೆಯ ಹೂಳನ್ನು ರೈತರೇ ತೆಗೆದು ತಮ್ಮ ಹೊಲ, ಗದ್ದೆ, ತೋಟಗಳಿಗೆ ಬಳಸಿಕೊಂಡು ಫ‌ಲವತ್ತತೆ ಹೆಚ್ಚಿಸಿ ಕೊಳ್ಳಬೇಕು ಎಂದರು. ಕೃಷಿ ವಿಜ್ಞಾನಿ ರೀತು, ಕೃಷಿ ಅಧಿಕಾರಿ ಅಶೋಕ್‌ ಮಾತನಾಡಿದರು. ಸ್ಥಳೀಯ ಪ್ರಗತಿ ಪರ ರೈತರಾದ ಕಮಲಮ್ಮ, ಮಾದೇಶ್‌, ಜೈಕುಮಾರ್‌ ಮತ್ತಿತರರನ್ನು ಸನ್ಮಾನಿಸಲಾಯಿತು. ಕೃಷಿ ಅಧಿಕಾರಿ ವನಿತಾ ಮತ್ತಿತರರಿದ್ದರು.

Advertisement

ಕೃಷಿ ವಿಜ್ಞಾನಿಗಳ ಬಳಿ  ತರಬೇತಿ ಪಡೆಯಿರಿ :  ಪ್ರಗತಿಪರ ರೈತ ಮಹಿಳೆಯಾಗಿ ತಮ್ಮ ಅನುಭವವನ್ನುಕಮಲಮ್ಮಕಾರ್ಯಕ್ರಮದಲ್ಲಿ ಹಂಚಿಕೊಂಡರು. ತಾವು ಜಿಕೆವಿಕೆ ಬೆಂಗಳೂರುಮತ್ತು ಮಾಗಡಿ ಕೃಷಿ ವಿಜ್ಞಾನಕೇಂದ್ರದಲ್ಲಿ ತರಬೇತಿ ಪಡೆದು ಯಶಸ್ವಿಯಾಗಿ ಸಮಗ್ರಕೃಷಿಯಲ್ಲಿ ತೊಡಗಿಸಿಕೊಂಡಿರುವುದಾಗಿತಿಳಿಸಿದರು. ಸದ್ಯ ಕ್ಯಾಪ್ಸಿಕಂ ಬೆಳೆಯುತ್ತಿರುವುದಾಗಿ, ತಮ್ಮ ಸಂಪರ್ಕದಲ್ಲಿರುವ ರೈತರುಬೆಳೆದ ಕ್ಯಾಪ್ಸಿಕಂಕೂಡ ಖರೀದಿಸಿ ಅನ್ಯ ರಾಜ್ಯಗಳಖರೀದಿದಾರರಿಗೂ ನೇರವಾಗಿ ಮಾರಾಟಮಾಡುತ್ತಿರುವುದಾಗಿ ತಿಳಿಸಿದರು. ಒಬ್ಬ ಮಹಿಳೆಯಾಗಿ ತಾವು ಮಾಡಿರುವ ಸಾಧನೆ ಪುರುಷ ರೈತರಿಗೇಕೆ ಸಾಧ್ಯವಾಗುತ್ತಿಲ್ಲಎಂದು ಕಾರ್ಯ ಕ್ರಮದಲ್ಲಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next