Advertisement

ರೈತರಿಂದ ತರಕಾರಿ ಖರೀದಿಸಿ ಮಾರಾಟ

02:16 PM Apr 18, 2020 | mahesh |

ಮದ್ದೂರು: ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ಸ್ಥಳೀಯರಿಗೆ ಅನುಕೂಲ ಕಲ್ಪಿಸಿರುವುದಾಗಿ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಮೋಹನ್‌ಕುಮಾರ್‌ ಗೌಡ ತಿಳಿಸಿದರು.

Advertisement

ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದಲ್ಲಿ ರೈತರಿಂದ ನೇರ ಖರೀದಿ ಮಾಡಿ ಗ್ರಾಹಕರಿಗೆ ತರಕಾರಿ ಮಾರಾಟ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕೊರೊನಾ ಲಾಕ್‌ಡೌನ್‌ನಿಂದಾಗಿ ಬಹತೇಕ ಎಪಿಎಂಸಿ ಮಾರುಕಟ್ಟೆಗಳು ಬಂದ್‌ ಆಗಿವೆ. ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ, ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಕಂಪೆನಿ ಮುಂದಾಗಿದೆ. ಸುತ್ತಮುತ್ತಲ ರೈತರು ಈ ವ್ಯವಸ್ಥೆಯನ್ನು ಸದ್ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕಿನ ಭೀಮನಕೆರೆ, ಕೊಕ್ಕರೆ ಬೆಳ್ಳೂರು, ಕೂಳಗೆರೆ, ಹಳ್ಳಿಕೆರೆ, ಡಿ.ಹೊಸೂರು ಇನ್ನಿತರೆ ಗ್ರಾಮಗಳಲ್ಲಿ ಬೆಳೆದಿರುವ ಟೊಮೆಟೊ, ಎಲೆಕೋಸು, ಬೀನ್ಸ್‌, ಹೀರೇಕಾಯಿ, ಕಲ್ಲಂಗಡಿ ಹಣ್ಣು ಸೇರಿದಂತೆ ಇನ್ನಿತರೆ ತರಕಾರಿ ಖರೀದಿಸಿ ರೈತರ ಸಂಕಷ್ಟಕ್ಕೆ ನೆರವಾಗಿದ್ದಾರೆ. ರೈತರು ಬೆಳೆದಿರುವ ಬೆಳೆಯನ್ನು
ನಾಶವಾಗದಂತೆ ಕಂಪೆನಿಗಳು ಮುಂದೆ ಬಂದು ವ್ಯವಸ್ಥೆ ಮಾಡಬೇಕೆಂದು ಹೇಳಿದರು. ಈ ವೇಳೆ ಕಂಪನಿ ನಿರ್ದೇಶಕರಾದ ಬ್ಯಾಡರಹಳ್ಳಿ ಶಿವಕುಮಾರ್‌,
ಜಯರಾಮು, ದೊರೆ, ಮಂಜುನಾಥ್‌, ದೇವರಾಜು, ಬಸವರಾಜು, ಸಿಇಒ ಚಾಂದಿನಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next