Advertisement
ಬೇಕಾಗುವ ಸಾಮಗ್ರಿಗಳುಬೋನ್ ಲೆಸ್ ಚಿಕನ್ 1ಕೆ.ಜಿ., ಟೊಮೇಟೋ 3, ಈರುಳ್ಳಿ 4, ದಾಲ್ಚಿನ್ನಿ ಎಲೆ 1, ಲವಂಗ 2, ಬೆಳ್ಳುಳ್ಳಿ ಶುಂಠಿ ಪೇಸ್ಟ್ 2 ದೊಡ್ಡ ಚಮಚ, ಗೇರು ಬೀಜ ಪೇಸ್ಟ್ 2 ದೊಡ್ಡ ಚಮಚ,ಅರಸಿನ ಪುಡಿ ಅರ್ಧ ಚಮಚ, ಕೊತ್ತಂಬರಿ ಪುಡಿ 1ಸಣ್ಣ ಚಮಚ, ಕಸೂರಿ ಮೇತಿ 1 ಸಣ್ಣ ಚಮಚ, ಗರಂ ಮಸಾಲಾ ಪುಡಿ 1 ಸಣ್ಣ ಚಮಚ, ಬೆಣ್ಣೆ 3 ದೊಡ್ಡ ಚಮಚ., ಹಾಲಿನ ಕೆನೆ 2 ದೊ.ಚ., ಕೊತ್ತಂಬರಿ ಸೊಪ್ಪು 1 ದೊ.ಚ., ಮೆಣಸಿನ ಪುಡಿ 2 ದೊ.ಚ., ಹಸಿ ಮೆಣಸು 4 ರಿಂದ 6,ನಿಂಬೆ ಹಣ್ಣಿನ ರಸ ಸ್ವಲ್ಪ,ಉಪ್ಪು ರುಚಿಗೆ ತಕ್ಕಷ್ಟು.
– 2 ಈರುಳ್ಳಿ ಸಿಪ್ಪೆ ತೆಗೆದು ಕುದಿಯುವ ನೀರಿನಲ್ಲಿ ಹಾಕಿ 10 ನಿಮಿಷ ಮುಚ್ಚಿಡಿ.ಅನಂತರ ತೆಗೆದು ಮಿಕ್ಸರ್ ನಲ್ಲಿ ಕಡೆಯಿರಿ. ಟೊಮೇಟೋವನ್ನು ಕುದಿಯುವ ನೀರಿನಲ್ಲಿ ಹಾಕಿ 10 ನಿಮಿಷ ಮುಚ್ಚಿಡಿ. ಅನಂತರ ತೆಗೆದು ಮಿಕ್ಸರ್ ನಲ್ಲಿ ಕಡೆಯಿರಿ.
-1 ದೊಡ್ಡ ಚಮಚ ಬೆಣ್ಣೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿ ದಾಲ್ಚಿನ್ನಿ ಎಲೆ, ಲವಂಗ ಹಾಕಿ ಅರ್ಧ ನಿಮಿಷ ಫ್ರೈ ಮಾಡಿ, ಹೆಚ್ಚಿದ್ದ ಈರುಳ್ಳಿ ಹಾಕಿ ನಸು ಕೆಂಪು ಬಣ್ಣ ಬರುವ ತನಕ ಹುರಿಯಿರಿ.
– ಬೆಳ್ಳುಳ್ಳಿ ಶುಂಠಿ ಪೇಸ್ಟ್ ಹಾಕಿ 2 ನಿಮಿಷ ಹುರಿಯಿರಿ. ಮೆಣಸಿನ ಪುಡಿ ಹಾಕಿ 1 ನಿಮಿಷ ಹುರಿದುಕೊಳ್ಳಿ. ಗೇರು ಬೀಜದ ಪೇಸ್ಟ್ ಹಾಕಿ ಸಣ್ಣ ಉರಿಯಲ್ಲಿ 5 ನಿಮಿಷ ಹುರಿಯಿರಿ.
– ಟೊಮೇಟೋ ಪೇಸ್ಟ್ , ಈರುಳ್ಳಿ ಪೇಸ್ಟ್, ಕಸೂರಿ ಮೇತಿ , ಕೊತ್ತಂಬರಿ ಪುಡಿ, ಅರಸಿನ ಪುಡಿ, ಗರಂ ಮಸಾಲ ಪುಡಿ, ಹಸಿಮೆಣಸು, ಉಪ್ಪು ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿರಿ.
– ಚಿಕನ್ ಪೀಸ್ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿರಿ. ಬೇಕಾದಷ್ಟು ನೀರನ್ನು ಸೇರಿಸಿ ಹದಕ್ಕೆ ತನ್ನಿ. ಚೆನ್ನಾಗಿ ಕುದಿಸಿರಿ. ಉರಿ ಆರಿಸಿ, ಉಳಿದ ಬೆಣ್ಣೆ ಹಾಗೂ ಹಾಲಿನ ಕೆನೆ ಹಾಕಿ ನಂತರ ನಿಂಬೆ ಹಣ್ಣಿನ ರಸವನ್ನು ಸೇರಿಸಿರಿ. ತದನಂತರ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪಿನಿಂದ ಆಲಂಕರಿಸಿರಿ. ಬಹಳ ಸುಲಭವಾಗಿ ಮಾಡಿಕೊಂಡು ಈ ಬಟರ್ – ಚಿಕನ್ ಮಸಾಲಾ ಮಾಡಿಕೊಂಡು ಚಪಾತಿ, ನಾನ್,ರೋಟಿಯ ಜೊತೆ ಇದನ್ನು ಸವಿಯಿರಿ.