Advertisement
ಈ ಒತ್ತಡದ ಜೀವನದಲ್ಲಿ ದಿನದಲ್ಲಿ 1 ಗಂಟೆ ಸಮಯವನ್ನು ಹೊಂದಿಸಿಕೊಂಡು ನಡೆಯುವುದರಿಂದ ಪ್ರಯೋಜನ ಇದೆ. ಪ್ರಸ್ತುತ ದಿನಗಳಲ್ಲಿ ಜನರು ವಾಕಿಂಗ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ವಾಕಿಂಗ್ ಮಾಡಲು ವಯಸ್ಸಿನ ಮಿತಿ ಇಲ್ಲ. ಯಾವ ವಯೋಮಾನದವರು ಕೂಡಾ ವಾಕಿಂಗ್ ಮಾಡಬಹುದು.
ವಾಕಿಂಗ್ ಉಪಯೋಗಗಳು:
Related Articles
Advertisement
ಮಧುಮೇಹ ನಿಯಂತ್ರಣ: ಪ್ರಸ್ತುತ ದಿನಗಳಲ್ಲಿ ಮಧುಮೇಹ ಕಾಯಿಲೆ ಸಾಮಾನ್ಯ. ಟೈಪ್ 2 ಡಯಾಬಿಟಿಸ್ ತಡೆಯಲು ದಿನಕ್ಕೆ 5 ಸಾವಿರ ಹೆಜ್ಜೆ ಹಾಕುವುದು ಒಳ್ಳೆಯದು. ಅದರಲ್ಲೂ 3 ಸಾವಿರ ಹೆಜ್ಜೆ ಬಿರುಸಿನ ನಡಿಗೆಯಾಗಿದ್ದರೆ ಇನ್ನೂ ಒಳ್ಳೆಯದು. ಪ್ರತಿದಿನ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ.
ತೂಕ ನಷ್ಟಕ್ಕೆ ನಡಿಗೆ ಸಹಕರಿ: ತೂಕ ಇಳಿಸಿಕೊಳ್ಳಲು ಬಯಸುವವರಿಗೆ ವಾಕಿಂಗ್ ಉತ್ತಮ ವ್ಯಾಯಾಮ.
ಕ್ಯಾನ್ಸರ್ ವಿರುದ್ಧ ಹೋರಾಟ: ಕ್ಯಾನ್ಸರ್ ಇದುವರೆಗೂ ಒಂದು ದಶಲಕ್ಷಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ. ನಮ್ಮ ಜೀವನ ಶೈಲಿ ಕೂಡ ಕ್ಯಾನ್ಸರ್ ಗೆ ಕಾರಣ ಎಂದು ಹೇಳಲಾಗುತ್ತದೆ. ಸ್ತನ ಕ್ಯಾನ್ಸರ್‌ನಿಂದ ಆಗುವ ಅಪಾಯ ಕಡಿಮೆ ಮಾಡುತ್ತದೆ.
ದೇಹದ ಮೂಳೆಗಳು ಬಲಗೊಳಿಸಲು ಸಹಕರಿ: ವಯಸ್ಸಾದಂತೆ ಮೂಳೆಗಳು ದುರ್ಬಲಗೊಳ್ಳುತ್ತವೆ. ಆದರೆ ನಿಯಮಿತವಾಗಿ ವಾಕ್ ಮಾಡುವ ಮೂಲಕ ಎಲುಬುಗಳನ್ನು ಬಲಪಡಿಸಬಹುದು. ವಾಕಿಂಗ್ ಮಾಡಿದರೆ ಸ್ನಾಯುಗಳನ್ನು ಬಲಗೊಳ್ಳುತ್ತವೆ. ನಿಯಮಿತವಾಗಿ ನಡೆಯುವುದರಿಂದ ಕಾಲು ಮತ್ತು ಬೆನ್ನಿನ ಸ್ನಾಯುಗಳನ್ನು ಬಲಪಡಿಸಬಹುದು. ನಿಯಮಿತ ನಡಿಗೆಯಿಂದ ಮೂಳೆ ಮುರಿತದ ಸಾಧ್ಯತೆ 40% ಕಡಿಮೆಯಾಗುತ್ತದೆ.
ಜೀರ್ಣಕ್ರಿಯೆ ಸುಲಭ: ಜೀರ್ಣಕ್ರಿಯೆ ಸರಿಯಾಗದಿದ್ದರೆ, ಹೊಟ್ಟೆಉಬ್ಬರ, ಮಲಬದ್ಧತೆ, ಅತಿಸಾರ ಮತ್ತು ಕರುಳಿನ ಕ್ಯಾನ್ಸರ್ ಗೆ ವಾಕಿಂಗ್ ಅತ್ಯುತ್ತಮ ಮಾರ್ಗ. ನಿಮ್ಮ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸಲು ಉತ್ತಮ ಆಹಾರ ಪದ್ಧತಿ, ನೀರನ್ನು ಕುಡಿಯುವುದು ಅಳವಡಿಸಿಕೊಳ್ಳಬೇಕು. ಊಟದ ನಂತರ ನಡೆಯುವುದು ಒಳ್ಳೆಯದು. ಇದರಿಂದ ತೂಕ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ರೋಗನಿರೋಧಕ ಶಕ್ತಿ ಹೆಚ್ಚು: ಸೋಂಕುಗಳು ಅಥವಾ ಯಾವುದೇ ರೋಗಗಳನ್ನು ತಡೆಗಟ್ಟಲು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಎಲ್ಲಾ ಸಮಯದಲ್ಲೂ ಸರಿಯಾಗಿ ಕಾರ್ಯನಿರ್ವಹಿಸಬೇಕು. ರೋಗನಿರೋಧಕ ಶಕ್ತಿ ಹೆಚ್ಚಬೇಕೆಂದರೆ ವಾಕಿಂಗ್ ಮಾಡಲೇಬೇಕು. ದಿನಕ್ಕೆ ಕನಿಷ್ಠ 30 ನಿಮಿಷ ನಡೆಯುವುದರಿಂದ ರೋಗನಿರೋಧಕ ಹೆಚ್ಚುತ್ತದೆ.
-ಕಾವ್ಯಶ್ರೀ