Advertisement

“ಬಡವ ರಾಸ್ಕಲ್‌’ಚಿತ್ರೀಕರಣದಲ್ಲಿ ಬಿಝಿ

12:51 PM Oct 11, 2019 | Lakshmi GovindaRaju |

ನಟ ಧನಂಜಯ್‌, ಅಮೃತಾ ಅಯ್ಯಂಗಾರ್‌, ರಂಗಾಯಣ ರಘು, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು, ನಿರಂಜನ್‌, ಚಂದ್ರು, ಅಲ್ಲು ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ಬಡವ ರಾಸ್ಕಲ್‌’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇತ್ತೀಚೆಗೆ ಗವಿಪುರಂ ಗುಟ್ಟಹಳ್ಳಿಯಲ್ಲಿ, ಚಿತ್ರದಲ್ಲಿ ಬರುವ ಪ್ರಮುಖ ಸಾಹಸ ದೃಶ್ಯಗಳನ್ನು, ನಟ ಧನಂಜಯ್‌ ಮತ್ತಿತರ ಸಾಹಸ ಕಲಾವಿದರ ಸಮ್ಮುಖದಲ್ಲಿ ಸಾಹಸ ನಿರ್ದೇಶಕ ವಿನೋದ್‌ ಅವರ ಸಾಹಸ ಸಂಯೋಜನೆಯಲ್ಲಿ ಸೆರೆಹಿಡಿಯಲಾಯಿತು.

Advertisement

ಈ ಮೂಲಕ “ಬಡವ ರಾಸ್ಕಲ್‌’ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಮುಕ್ತಾಯಗೊಳಿಸಿರುವ ಚಿತ್ರತಂಡ, ಎರಡನೇ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ. “ಗುಜ್ಜಲ್‌ ಟಾಕೀಸ್‌’ ಹಾಗೂ “ಡಾಲಿ ಪಿಕ್ಚರ್’ ಬ್ಯಾನರ್‌ನಲ್ಲಿ ಗುಜ್ಜಲ್‌ ಪುರುಷೋತ್ತಮ್‌ ಹಾಗೂ ಡಾಲಿ ಧನಂಜಯ ಜಂಟಿಯಾಗಿ ನಿರ್ಮಿಸುತ್ತಿರುವ “ಬಡವ ರಾಸ್ಕಲ್‌’ ಚಿತ್ರಕ್ಕೆ ಶಂಕರ್‌ ಗುರು ನಿರ್ದೇಶನವಿದೆ.

ಚಿತ್ರಕ್ಕೆ ಪ್ರೀತಾ ಜಯರಾಮನ್‌ ಛಾಯಾಗ್ರಹಣ ಮಾಡುತ್ತಿದ್ದಾರೆ. ಇನ್ನು ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಾಸುಕಿ ವೈಭವ್‌ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಸದ್ಯ ಮೊದಲ ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೇ ಅ. 12ರಿಂದ ಮೈಸೂರಿನಲ್ಲಿ ಸುಮಾರು 20 ದಿನಗಳ ಕಾಲ ದ್ವಿತೀಯ ಹಂತದ ಚಿತ್ರೀಕರಣಕ್ಕೆ ಪ್ಲಾನ್‌ ಹಾಕಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next