ಬಸ್ರೂರು: ಇಲ್ಲಿನ ಗ್ರಾ.ಪಂ.ನ ಪ್ರಥಮ ಗ್ರಾಮಸಭೆಯು ಗ್ರಾ.ಪಂ. ಅಧ್ಯಕ್ಷ ಸಂತೋಷ ಕುಮಾರ್ ಎಚ್.ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಗೆ ಆಗಮಿಸಿದ್ದ ಜಿ.ಪಂ, ಸದಸ್ಯೆ ಲಕ್ಷ್ಮಿ¾à ಮಂಜು ಬಿಲ್ಲವ ಅವರು ಮಾತನಾಡಿ, ಜಿ.ಪಂ. ವ್ಯಾಪ್ತಿಗೆ ಏಳು ಗ್ರಾ.ಪಂ.ಗಳು ಬರುತ್ತದೆ. ಆದ್ದರಿಂದ ಅನುದಾನವನ್ನು ಎಲ್ಲಾ ಏಳು ಗ್ರಾ.ಪಂ.ಗಳಿಗೂ ಹಂಚಬೇಕಾಗುತ್ತದೆ. ಆದರೂ ಆದ್ಯತೆಯ ಮೇರೆಗೆ ಬಸ್ರೂರು ಗ್ರಾ.ಪಂ.ನ ಹದಗೆಟ್ಟ ರಸ್ತೆಗಳ ದುರಸ್ತಿಗೆ ಗಮನ ಹರಿಸಲಾಗುವುದು. ರಸ್ತೆ ಮಾತ್ರವಲ್ಲದೆ ಉಳಿದ ಸಮಸ್ಯೆಗಳನ್ನೂ ಆಲಿಸಬೇಕಾಗುತ್ತದೆ ಎಂದರು.
ಬಸ್ರೂರು ಗ್ರಾ.ಪಂ. ಸದಸ್ಯ ರಾಮ್ ಕಿಶನ್ ಹೆಗ್ಡೆ ಅವರು ಮಾತನಾಡಿ, ತಾ.ಪಂ.ನ ಲಭ್ಯ ಅನುದಾನವನ್ನು ಹದಗೆಟ್ಟ ರಸ್ತೆಗಳ ದುರಸ್ತಿಗೆ ಬಳಸಲಾಗುವುದು ಎಂದರು.
ಬಸ್ರೂರು ಗ್ರಾ.ಪಂ. ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಚಿದಾನಂದ ಟಿ. ಕಳಸಾಪುರ, ಕೃಷಿ ಇಲಾಖೆಯ ರಾಜೇಂದ್ರ ಶೆಟ್ಟಿಗಾರ್, ವೈದ್ಯಾಧಿಕಾರಿ ಕಲಾಶ್ರೀ, ವ್ಯ.ಸೇ.ಸ. ಬ್ಯಾಂಕ್‌ನ ಉಪಶಾಖಾಧಿಕಾರಿ ಗೌತಮ್, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ನರಸಿಂಹ ಪೂಜಾರಿ ಉಪಸ್ಥಿತರಿದ್ದು ಇಲಾಖಾ ಮಾಹಿತಿ ನೀಡಿದರು.
ಸೂರ್ಯನಾರಾಯಣ ಉಪಾಧ್ಯ ಮಾರ್ಗದರ್ಶಿ ಅಧಿಕಾರಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮನೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಪಿಡಿಒ ನಾಗೇಂದ್ರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ಲೆಕ್ಕ ಪತ್ರ ಮಂಡಿಸಿದರು.