Advertisement

ಪಾಕಿಸ್ತಾನದ ಇಮ್ರಾನ್ ಖಾನ್ ಪಕ್ಷಕ್ಕೆ ದೇಣಿಗೆ ನೀಡಿದ ರೊಮಿತಾ ಶೆಟ್ಟಿ!;ಯಾರಿವರು?

07:39 PM Aug 05, 2022 | Team Udayavani |

ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ 34 ವಿದೇಶಿ ಪ್ರಜೆಗಳಿಂದ ನಿಯಮಗಳಿಗೆ ವಿರುದ್ಧವಾಗಿ ಹಣವನ್ನು ಪಡೆದಿದೆ ಎಂದು ಪಾಕಿಸ್ತಾನದ ಚುನಾವಣಾ ಆಯೋಗ ಮಂಗಳವಾರ ಹೇಳಿದ್ದು, ಆ ಪೈಕಿ ಸಾಮಜಿಕ ತಾಣಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ರೊಮಿತಾ ಶೆಟ್ಟಿ ಅವರದ್ದಾಗಿದೆ.

Advertisement

ಪಾಕ್ ಚುನಾವಣಾ ಆಯೋಗ ರೊಮಿತಾ ಶೆಟ್ಟಿ ಅವರ ವಿವರಗಳನ್ನು ಹಾಗೂ ಇತರ ವ್ಯಕ್ತಿಗಳು ನೀಡಿದ ಹಣದ ವಿವರಗಳನ್ನು ನಿರ್ಣಯದಲ್ಲಿ ದಾಖಲಿಸಿದ್ದು, ಲಿಖಿತ ನಿರ್ಧಾರದ ಪುಟ ಸಂಖ್ಯೆ 67 ರಲ್ಲಿ, ‘ಭಾರತೀಯ ಮೂಲದ ಅಮೆರಿಕದ ಉದ್ಯಮಿಯಾಗಿರುವ ರೊಮಿತಾ ಶೆಟ್ಟಿ ಅವರ ದೇಣಿಗೆಯ ಪಿಟಿಐ ಪಾಕಿಸ್ತಾನವೂ ಫಲಾನುಭವಿಯಾಗಿದೆ’ ಎಂದು ಬರೆದಿದೆ.

ರೊಮಿತಾ ಶೆಟ್ಟಿ ಅವರು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷಕ್ಕೆ 13 ಸಾವಿರದ 750 ಡಾಲರ್‌ಗಳನ್ನು ನೀಡಿದ್ದು, ಇದು ನಿಷೇಧಿತ ನಿಧಿಯ ಅಡಿಯಲ್ಲಿ ಬರುತ್ತದೆ ಮತ್ತು ಪಾಕಿಸ್ತಾನದ ಕಾನೂನು ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗವು ನಿರ್ಧಾರದಲ್ಲಿ ಬರೆದಿದೆ.

ರೊಮಿತಾ ಶೆಟ್ಟಿ ಯಾರು?

ರೊಮಿತಾ ಶೆಟ್ಟಿ ಅವರು ಡಿಮೈಯೊ ಅಹ್ಮದ್ ಕ್ಯಾಪಿಟಲ್ ಎಲ್ಎಲ್ಎಲ್ (ಡಿಎ ಕ್ಯಾಪಿಟಲ್) ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಪಾಕಿಸ್ತಾನಿ-ಅಮೆರಿಕನ್ ಉದ್ಯಮಿ ನಾಸಿರ್ ಅಜೀಜ್ ಅಹ್ಮದ್ ಅವರ ಪತ್ನಿ.

Advertisement

ಬ್ಲೂಮ್‌ಬರ್ಗ್‌ನಲ್ಲಿ ಪ್ರಕಟವಾದ ಅಜೀಜ್ ಅವರ ಪ್ರೊಫೈಲ್ ಪ್ರಕಾರ, ಅವರು ಡಿಎ ಕ್ಯಾಪಿಟಲ್‌ನ ವ್ಯವಸ್ಥಾಪಕ ಪಾಲುದಾರರಾಗಿದ್ದಾರೆ. ಕಂಪನಿಯು ಇತರ ವಿಷಯಗಳ ಜೊತೆಗೆ ಹೂಡಿಕೆ ಮತ್ತು ಹಣಕಾಸು ಯೋಜನೆಗಳ ಬಗ್ಗೆ ತನ್ನ ಗ್ರಾಹಕರಿಗೆ ಸಲಹೆ ನೀಡಲು ಹೆಸರುವಾಸಿಯಾಗಿದೆ. ಕಂಪನಿಯ ವೆಬ್‌ಸೈಟ್ ತನ್ನ ಕಚೇರಿಯು ಯುನೈಟೆಡ್ ಸ್ಟೇಟ್ಸ್‌ನ ನ್ಯೂಯಾರ್ಕ್‌ನಲ್ಲಿದೆ ಎಂದು ಹೇಳುತ್ತದೆ.

ರೊಮಿತಾ ಶೆಟ್ಟಿ ಅವರು ಕೊಲಂಬಿಯಾ ವಿಶ್ವವಿದ್ಯಾಲಯದ ಜಾಗತಿಕ ಚಿಂತನೆ ವಿಭಾಗದ ಸಲಹಾ ಸಮಿತಿಯ ಸದಸ್ಯರೂ ಆಗಿದ್ದಾರೆ. ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನಲ್ಲಿರುವ ಅವರ ಪ್ರೊಫೈಲ್ ಅವರನ್ನು ಡಿಎ ಕ್ಯಾಪಿಟಲ್‌ನ ವ್ಯವಸ್ಥಾಪಕ ನಿರ್ದೇಶಕಿ ಎಂದು ಪಟ್ಟಿಮಾಡಿದೆ. ಅವರು ಅರ್ಥಶಾಸ್ತ್ರ ಕ್ಷೇತ್ರದಲ್ಲಿ 27 ವರ್ಷಗಳ ಕೆಲಸದ ಅನುಭವವನ್ನು ಹೊಂದಿದ್ದಾರೆ.

ಈ ಹಿಂದೆ ಡಿಎ ಕ್ಯಾಪಿಟಲ್‌ನ ಅಧ್ಯಕ್ಷರಾಗಿದ್ದರು. 2007 ರಿಂದ 2008 ರವರೆಗೆ ಅವರು ಅಮೆರಿಕನ್ ಹೂಡಿಕೆ ಕಂಪನಿಯಾದ ಲೆಹ್ಮನ್ ಬ್ರದರ್ಸ್‌ಗಾಗಿ ಕೆಲಸ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next