Advertisement

ಹೇರಿಕುದ್ರು: ನದಿಗೆ ಹಾರಿದ ಉದ್ಯಮಿ : ಪತ್ತೆಯಾಗದ ಸುಳಿವು

10:12 AM Jan 27, 2020 | sudhir |

ಕುಂದಾಪುರ: ಜನರು ನೋಡುತ್ತಿದ್ದಂತೆಯೇ ಹೊಟೇಲ್‌ ಉದ್ಯಮಿಯೋರ್ವರು ನದಿಗೆ ಹಾರಿದ ಘಟನೆ ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಸಂಗಮ್‌ – ಹೇರಿಕುದ್ರು ಸೇತುವೆಯಲ್ಲಿ ರವಿವಾರ ಸಂಜೆ 5 ಗಂಟೆ ಸುಮಾರಿಗೆ ಸಂಭವಿಸಿದೆ. ಅವರಿಗಾಗಿ ರಾತ್ರಿಯವರೆಗೂ ಶೋಧ ನಡೆಸಲಾಯಿತಾದರೂ ಯಾವುದೇ ಸುಳಿವು ಸಿಕ್ಕಿಲ್ಲ.

Advertisement

ಕುಂದಾಪುರದ ಚಿಕ್ಕನ್‌ಸಾಲ್‌ ರಸ್ತೆ ನಿವಾಸಿ, ಮುಂಬಯಿಯಲ್ಲಿ ಹಲವು ವರ್ಷಗಳಿಂದ ಹೊಟೇಲ್‌ ಉದ್ಯಮಿಯಾಗಿದ್ದ ಕೆ.ಜಿ. ಗಣೇಶ್‌ (50) ನದಿಗೆ ಹಾರಿದವರಾಗಿದ್ದಾರೆ.

ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಕುಂದಾಪುರ ಕಡೆಯಿಂದ ರಿಕ್ಷಾದಲ್ಲಿ ಬಂದಿದ್ದ ಅವರು ಸೇತುವೆಯಿಂದ ಸ್ವಲ್ಪ ದೂರು ಇಳಿದಿದ್ದರು. ಬಳಿಕ ಸೇತುವೆವರೆಗೆ ನಡೆದುಕೊಂಡು ಬಂದು, ಪರ್ಸ್‌, ವಾಚ್‌, ಕನ್ನಡಕ, ಚಪ್ಪಲಿ ಮುಂತಾದ ವನ್ನು ತೆಗೆದಿರಿಸಿ ನದಿಗೆ ಹಾರಿದ್ದಾರೆ ಎಂದು ತಿಳಿದು ಬಂದಿದೆ.

ಕೂಡಲೇ ನದಿಯಲ್ಲಿ ದೋಣಿ ಮೂಲಕ ಮೀನು ಹಿಡಿಯುತ್ತಿದ್ದವರು 2-3 ದೋಣಿಯಲ್ಲಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಪರ್ಸ್‌ನಲ್ಲಿದ್ದ ಆಧಾರ್‌ ಕಾರ್ಡ್‌ ಛಾಯಾಪ್ರತಿಯಿಂದಾಗಿ ಅವರ ಗುರುತು ಪತ್ತೆಹಚ್ಚಲಾಗಿದೆ.
ಕುಂದಾಪುರ ಅಗ್ನಿ ಶಾಮಕ ದಳದ ಠಾಣಾಧಿಕಾರಿ ಕೆ.ಎನ್‌. ಮೊಗೇರ ನೇತೃತ್ವದಲ್ಲಿ ರಾತ್ರಿಯವರೆಗೂ ಪತ್ತೆ ಕಾರ್ಯ ನಡೆಯಿತು. ಸ್ಥಳೀಯರು ಕೂಡ ಸಹಕರಿಸಿದ್ದರು.

25 ವರ್ಷದಿಂದ ಹೋಟೆಲ್‌ ಉದ್ಯಮ
ಮುಂಬಯಿಯಲ್ಲಿ ಸುಮಾರು 25 ವರ್ಷಗಳಿಂದ ಹೊಟೇಲ್‌ ಉದ್ಯಮಿಯಾಗಿದ್ದ ಗಣೇಶ್‌, 4-5 ವರ್ಷಗಳ ಹಿಂದಷ್ಟೇ ಊರಿಗೆ ಬಂದಿದ್ದರು. ಅಲ್ಲಿದ್ದ ಹೊಟೇಲನ್ನು ಈಗ ಲೀಸ್‌ಗೆ ಕೊಟ್ಟಿದ್ದರು. ಊರಲ್ಲಿಯೂ ಬಾಡಿಗೆಗೆ ರೂಂಗಳನ್ನು ನೀಡಿದ್ದರು. ಆರ್ಥಿಕವಾಗಿ ಅನುಕೂಲಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗಿನ ಕೆಲವು ದಿನಗಳಿಂದ ಖನ್ನತೆಗೆ ಒಳ ಗಾಗಿದ್ದ ಅವರು, “ನಾನು ಸಾಯೆ¤àನೆ, ಸಾಯೆ¤àನೆ’ ಎಂದು ಹೇಳುತ್ತಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ.

Advertisement

ಸ್ಥಳಕ್ಕೆ ಕುಂದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next