Advertisement

ಬ್ರಿಟನ್ ನಲ್ಲೇ ಆಶ್ರಯ ಕೋರಿ ಗಡಿಪಾರು ತಪ್ಪಿಸಲು ಮಲ್ಯ ತಂತ್ರ?

03:53 PM May 20, 2020 | Hari Prasad |

ಲಂಡನ್‌: ತನ್ನನ್ನು ಭಾರತಕ್ಕೆ ಗಡೀಪಾರು ಮಾಡದಂತೆ ಇಂಗ್ಲಂಡ್ ನ ಸುಪ್ರೀಂ ಕೋರ್ಟ್ ಮಟ್ಟದಲ್ಲಿ ಮನವಿ ಸಲ್ಲಿಸುವ ಅವಕಾಶವನ್ನು ನಿರಾಕರಿಸಲ್ಪಟ್ಟಿರುವ ಉದ್ಯಮಿ ವಿಜಯ್ ಮಲ್ಯ ಅವರ ಮುಂದೆ ಇದೀಗ ಭಾರತಕ್ಕೆ ಗಡೀಪಾರಾಗುವುದನ್ನು ತಪ್ಪಿಸಲು ಕಾನೂನೇತರ ಮಾರ್ಗಗಳೂ ಉಳಿದುಕೊಂಡಿವೆ.

Advertisement

ಇದಕ್ಕಾಗಿ ಬ್ರಿಟನ್‌ನಿಂದ ಭಾರತಕ್ಕೆ ಗಡಿಪಾರು ಭೀತಿ ಎದುರಿಸುತ್ತಿರುವ ಉದ್ಯಮಿ ವಿಜಯ ಮಲ್ಯ ಆ ದೇಶದಲ್ಲಿ ಆಶ್ರಯ ಕೋರುವ ಸಾಧ್ಯತೆ ಇದೆ.

ಈ ಮೂಲಕ ಭಾರತಕ್ಕೆ ಹಸ್ತಾಂತರವಾಗುವ ಅಪಾಯದಿಂದ ಪಾರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಹೀಗಾಗಿ ಕೇಂದ್ರ ಸರ್ಕಾರಕ್ಕೆ ನಿರೀಕ್ಷೆ ಮಾಡಿದಷ್ಟು ಸುಲಭವಾಗಿ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆತರಲು ಸಾಧ್ಯವಾಗದು ಎಂಬ ವಾದವೊಂದು ಇದೀಗ ಬಲವಾಗಿ ಕೇಳಿಬರಲಾರಂಭಿಸಿದೆ..

ಈ ಬಗ್ಗೆ ವಿವರಣೆ ನೀಡಿರುವ ಲಂಡನ್‌ನಲ್ಲಿರುವ ಭಾರತೀಯ ಮೂಲದ ನ್ಯಾಯವಾದಿ ಕರಿಷ್ಮಾ ವೋರಾ ‘ಮಲ್ಯ ಆಶ್ರಯ ಕೋರಿದ ಅರ್ಜಿಯ ವಿಚಾರಣೆ ನಡೆಯುತ್ತಿದ್ದರೆ ಅಥವಾ ಆತನ ಅರ್ಜಿ ಮಾನ್ಯ ಮಾಡಿ ಆಶ್ರಯ ನೀಡಿದರೆ, ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

Advertisement

ಯಾರಾದರೂ ಮಲ್ಯರಿಗೆ ಈ ಬಗ್ಗೆ ಸಲಹೆ ನೀಡಿದ್ದರೆ, ಆತ ಆಶ್ರಯ ಕೋರಿ ಅರ್ಜಿ ಹಾಕಬಹುದು. ಈ ಕುರಿತ ವಿಚಾರಣೆ ಗೌಪ್ಯವಾಗಿ ನಡೆಯುವುದರಿಂದ ಯಾರಿಗೂ ಗೊತ್ತಾಗುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನು ಹೊರತುಪಡಿಸಿದಂತೆ ಇಂಗ್ಲಂಡ್ ನ ಗೃಹ ಸಚಿವರಾಗಿರುವ ಪ್ರೀತಿ ಪಟೇಲ್ ಮುಂದೆ ಈ ಕುರಿತಾಗಿ ಮನವಿ ಸಲ್ಲಿಸುವ ಅವಕಾಶವೂ ಮಲ್ಯ ಅವರ ಮುಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next