Advertisement

ಬ್ರೆಜಿಲ್‌ ಅಧ್ಯಕ್ಷರಿದ್ದ ವಿಡಿಯೊ ಮೀಟಿಂಗಲ್ಲಿ ವ್ಯಕ್ತಿಯ ‘ನಗ್ನಾವತಾರ’

01:05 AM May 21, 2020 | Hari Prasad |

ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ ಸರಕಾರದ ಮೀಟಿಂಗ್‌ಗಳೂ ಈಗ ವರ್ಚುವಲ್‌ ಆಗಿಯೇ ನಡೆಯುತ್ತಿವೆ.

Advertisement

ಬ್ರೆಜಿಲ್‌ ಅಧ್ಯಕ್ಷರಿದ್ದ ಮೀಟಿಂಗ್‌ ಕೂಡ ಹೀಗೆಯೇ ‘ಝೂಮ್‌’ ಮೂಲಕ ನಡೆಯುತ್ತಿತ್ತು. ನಡುವೆ ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ನಗ್ನಾವತಾರದಲ್ಲಿ ಕಾಣಿಸಿಕೊಂಡು, ರಾಷ್ಟ್ರದ ಮರ್ಯಾದೆಯನ್ನೇ ಹರಾಜಿಗಿಟ್ಟಿದ್ದಾನೆ.

ಸಾವೊ ಪೌಲೊ ರಾಜ್ಯದ ಕೈಗಾರಿಕೆಗಳ ಒಕ್ಕೂಟದ ಜತೆಗಿನ ಮೀಟಿಂಗ್‌ನಲ್ಲಿ ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೊಲ್ಸಾನಾರೊ ಇದ್ದರು. ಲಾಕ್‌ಡೌನ್‌ ಪರಿಣಾಮ ಚರ್ಚಿಸುತ್ತಿರುವಾಗ, ಇದ್ದಕ್ಕಿದ್ದಂತೆ ಒಬ್ಬ ಸದಸ್ಯ ಎದ್ದು ಹೋಗಿ, ಕೆಲವೇ ಕ್ಷಣಗಳಲ್ಲಿ ನಗ್ನಾವಸ್ಥೆಯಲ್ಲಿ ಕ್ಯಾಮೆರಾದ ಮುಂದೆ ಹಾಜರಿದ್ದ.

ಕ್ಯಾಮೆರಾ ಆಫ್ ಮಾಡಲು ಮರೆತಿದ್ದೇ ಈ ಯಡವಟ್ಟಿಗೆ ಕಾರಣವಾಗಿದೆ. ಅನಂತರ, ಅಲ್ಲಿದ್ದ ಸಚಿವರು, “ಆರ್ಥಿಕ ನಷ್ಟದ ತಾಪ ತಾಳಲಾರದೆ, ತಣ್ಣಗಾಗಿ ಬರಲು ಅವರು ಸ್ನಾನಕ್ಕೆ ಹೋಗಿದ್ದರು’ ಎಂದು ರಾಷ್ಟ್ರಾಧ್ಯಕ್ಷರಿಗೆ ಸಮಜಾಯಿಷಿ ಕೊಟ್ಟರಂತೆ. ದುರಂತ, ಆ ವಿಡಿಯೊ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next