Advertisement

4000 ಹಸುಗಳ ಏರ್‌ಲಿಫ್ಟ್!

01:43 PM Jun 14, 2017 | Team Udayavani |

ಇಸ್ತಾಂಬುಲ್‌: ಜಗತ್ತಿನ ಅತಿ ದೊಡ್ಡ ಹಸುಗಳ ಏರ್‌ಲಿಫ್ಟ್ಗೆ ಕತಾರ್‌ ಸದ್ಯದಲ್ಲೇ ಸಾಕ್ಷಿಯಾಗಲಿದೆ. ಹೌದು. ಸುಮಾರು 4 ಸಾವಿರ ಹಸುಗಳು ವಿಮಾನದ ಮೂಲಕ ಆ ದೇಶಕ್ಕೆ ಬಂದು ಇಳಿಯಲಿದೆ. ಕತಾರ್‌ ಮತ್ತು ನೆರೆಯ ಅರಬ್‌ ರಾಷ್ಟ್ರಗಳ ನಡುವೆ ಸಂಬಂಧ ಹಳಸಿರುವುದರಿಂದ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಯಾಗಿದ್ದು, ಆಹಾರ, ನೀರಿಗೂ ಕೊರತೆ ಉಂಟಾಗಿದೆ. ಈ ನಡುವೆ ಎದುರಾಗಿರುವ ತಾಜಾ ಹಾಲಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಉದ್ಯಮಿಯೊಬ್ಬರು ಸುಮಾರು 4000 ಹಸುಗಳನ್ನು ವಿಮಾನಗಳ ಮೂಲಕ ಗಲ್ಫ್ ಮರುಭೂಮಿಗೆ ಕೊಂಡೊಯ್ಯಲು ಸಿದ್ಧತೆ ನಡೆಸಿದ್ದಾರೆ. 

Advertisement

ತಲಾ 590 ಕೆ.ಜಿ ತೂಗುವ, 4000 ಹಸುಗಳನ್ನು ಆಸ್ಟ್ರೇಲಿಯಾ ಮತ್ತು ಅಮೆರಿಕದಿಂದ ಹೊತ್ತು ಕತಾರ್‌ಗೆ ತಂದಿಳಿಸಲು ಸುಮಾರು 60 ವಿಮಾನಗಳ ಅಗತ್ಯ ಬೀಳಬಹುದು. ಆದರೂ ಪರವಾಗಿಲ್ಲ ಎಂದು ಈ ಸಾಹಸಕ್ಕೆ ಕೈಹಾಕಿರುವ ಉದ್ಯಮಿ ಮೌತಾಜ್‌ ಅಲ್‌ ಖಯ್ನಾತ್‌, “ಕತಾರ್‌ಗೆ ನೆರವಾಗಲು ಇದಕ್ಕಿಂತಲೂ ಉತ್ತಮ ಅವಕಾಶ ಮತ್ತೆ ಸಿಗಲಾರದು,’ ಎಂದಿದ್ದಾರೆ.

ಹಾಲಿನ ಪೂರೈಕೆಗೆ ಕ್ರಮ: “ಈ ಕ್ರಮದಿಂದಾಗಿ ಈ ತಿಂಗಳಾಂತ್ಯದಲ್ಲೇ ತಾಜಾ ಹಾಲಿನ ಉತ್ಪಾದನೆ ಆರಂಭವಾಗಲಿದೆ. ಅಂದರೆ, ಎಂದಿಗಿಂತ 1 ತಿಂಗಳು ಮೊದಲೇ ಹಾಲು ಉತ್ಪಾದಿಸಿ ಒಟ್ಟಾರೆ ಬೇಡಿಕೆಯಲ್ಲಿ ಮುಕ್ಕಾಲು ಪಾಲನ್ನು ಜುಲೈ ಮಧ್ಯದ ವೇಳೆಗೆ ಪೂರೈಸುವ ಗುರಿ ಹೊಂದಿ ದ್ದೇವೆ. ಹಸುಗಳ ಪಾಲನೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ಇಷ್ಟು ಹಸುಗಳನ್ನು ಸಾಗಿಸಲು ಸುಮಾ ರು 51 ಕೋಟಿ ರೂ. (8 ಮಿಲಿಯನ್‌ ಡಾಲರ್‌) ಗಿಂತಲೂ ಹೆಚ್ಚು ಹಣ ವೆಚ್ಚವಾಗಲಿದೆ,’ ಎಂದು ಅಲ್‌ ಖಯ್ನಾತ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next