ಪುಣೆ: ನಗರದ ವೈಕುಂಠ ಮೆಹ್ತಾ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಕೋ. ಆಪರೇಟಿವ್ ಮ್ಯಾನೇಜೆ¾ಂಟ್ ಕಾಲೇಜ್‌ನಲ್ಲಿ ಎರಡು ದಿನಗಳ ಕಾಲ ನಡೆದ ರಾಷ್ಟ್ರೀಯ ಕೃಷಿ ಉತ್ಪನ್ನಗಳ ಸಮರ್ಥನೀಯ ನಿರ್ವಹಣೆ ಮತ್ತು ಲಾಭದಾಯಕ ಸಮಾಲೋಚನ ಸಮ್ಮೇಳನವನ್ನು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮಾಜಿ ಕೇಂದ್ರ ಕೃಷಿ ಸಚಿವ ಶರದ್ ಪವಾರ್, ಅಂಧ್ರಪ್ರದೇಶದ ಮಾಜಿ ಕೃಷಿ ಸಚಿವ ವಿ. ಎಸ್ .ರಾವ್, ಮಹಾರಾಷ್ಟ್ರ ಸರಕಾರದ ಆಹಾರ ಮತ್ತು ಔಷದ ಖಾತೆ ಸಚಿವ ಗಿರೀಶ್ ಬಾಪಟ್, ಪುಣೆ ಸಂಸದ ಅನಿಲ್ ಶಿರೋಲೆ, ಕೇಂದ್ರ ಕೃಷಿ ಸಚಿವಾಲಯದ ಅಧಿಕಾರಿಗಳಾದ ಗುಲಾಟಿ, ಎಸ್. ತ್ರಿಪಾಠಿ, ಪುರುಷೋತ್ತಮ ರುಪಾಲ ಟಿ. ಚಟರ್ಜಿ ಮತ್ತು 170 ಕ್ಕೂ ಮಿಕ್ಕಿದ ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಎರಡು ದಿನ ನಡೆದ ಈ ಸಮ್ಮೇಳನದಲ್ಲಿ ಉಪರಾಷ್ಟ್ರಪತಿಗಳು ಉಪಸ್ಥಿತರಿದ್ದರು. ಸಮ್ಮೇಳನದ ಊಟೋಪಚಾರದ ಮೇಲ್ವಿ ಚಾರಕರಾಗಿ ಪ್ರವೀಣ್ ಶೆಟ್ಟಿ ಪುತ್ತೂರು ಆಡಳಿತ ನಿರ್ದೇಶಕರಾಗಿರುವ ಎ. ಪಿ. ಹಾಸ್ಪಿಟಾಲಿಟಿ ಸರ್ವಿಸಸ್ ಅವರು ನಿರ್ವಹಿಸಿದರು. ಇವರ ಉತ್ತಮ ಸೇವೆಯನ್ನು ಪರಿಗಣಿಸಿ ಉಪ ರಾಷ್ಟ್ರ ಪತಿಗಳು ಅಭಿನಂದನೆಯೊಂದಿಗೆ ಪ್ರಶಂಸಾ ಪತ್ರ ನೀಡಿ ಪ್ರವೀಣ್ ಶೆಟ್ಟಿ ಅವರನ್ನು ಗೌರವಿಸಿದರು.
ಪ್ರವೀಣ್ ಶೆಟ್ಟಿ ಅವರ ನೇತೃತ್ವ ದಲ್ಲಿ ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪುಣೆಗೆ ಭೇಟಿ ನೀಡಿದ ಒಂದು ದಿನದ ಕಾರ್ಯಕ್ರಮದಲ್ಲಿಯೂ ಊಟೋ ಪಚಾರದ ಉತ್ತಮ ಸೇವೆಗಾಗಿ ಪ್ರಶಂಸಾ ಪತ್ರವನ್ನು ಪಡೆದಿದ್ದರು.
ವರದಿ : ಹರೀಶ್ ಮೂಡಬಿದ್ರಿ