Advertisement

ಉದ್ಯಮಿ ಮಲ್ಯರ ಮತ್ತಷ್ಟು ಅವ್ಯವಹಾರಗಳು ಬೆಳಕಿಗೆ

01:37 AM Jul 30, 2019 | mahesh |

ನವದೆಹಲಿ: 9 ಸಾವಿರ ಕೋಟಿ ರೂ. ಸಾಲ ಮರುಪಾವತಿ ಮಾಡದೇ ದೇಶ ತೊರೆದು ಲಂಡನ್‌ನಲ್ಲಿ ವಾಸಿಸುತ್ತಿರುವ ಉದ್ಯಮಿ ವಿಜಯ್‌ ಮಲ್ಯಗೆ ಸಂಬಂಧಿಸಿದ ಇನ್ನಷ್ಟು ನಕಲಿ ಕಂಪನಿಗಳನ್ನು ಜಾರಿ ನಿರ್ದೇಶನಾಲಯ ಪತ್ತೆ ಮಾಡಿದೆ. ಮಲ್ಯ ಆಪ್ತರಾಗಿರುವ ಬೆಂಗಳೂರು ಮೂಲದ ವಿ. ಶಶಿಕಾಂತ್‌ ಹಾಗೂ ಅವರ ಕುಟುಂಬ ಸದಸ್ಯರ ಕಚೇರಿಗಳ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯವು ಮತ್ತೂಂದು ಸುತ್ತಿನ ನಕಲಿ ಕಂಪನಿಗಳ ಜಾಡನ್ನು ಕಂಡುಹಿಡಿದಿದೆ.

Advertisement

2017ರ ವರೆಗೂ ಮಲ್ಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಶಿಕಾಂತ್‌ ಯುಬಿಡಬ್ಲ್ಯೂ ಎಂಬ ಕಂಪನಿಯನ್ನು ಸ್ಥಾಪಿಸಿದ್ದರು. ಇವರು ಯುನೈಟೆಡ್‌ ಬ್ರೂವರೀಸ್‌ ಕಂಪನಿಯ ಮದ್ಯ ಮಾರಾಟ ಮಾಡುತ್ತಿದ್ದರು. ಈ ಕಂಪನಿಯ ವಹಿವಾಟು ವರ್ಷಕ್ಕೆ 220 ಕೋಟಿ ರೂ. ಆಗಿತ್ತು. ಯುನೈಟೆಡ್‌ ಬ್ರೂವರೀಸ್‌ನಿಂದ ಖರೀದಿಸಿದ ಮದ್ಯ ಮತ್ತು ಶೂಗಳನ್ನು ಸೌದಿ ಅರೇಬಿಯಾದಲ್ಲಿ ನೋಂದಣಿಯಾದ, ಶಶಿಕಾಂತ್‌ ಪುತ್ರಿ ನಿರ್ದೇಶಕಿಯಾಗಿರುವ ಕಂಪನಿಗೆ ಮಾರಾಟ ಮಾಡಲಾಗುತ್ತಿತ್ತು. ಈ ವಹಿವಾಟಿನಿಂದ ಬಂದ ಲಾಭದಲ್ಲಿ ಮಲ್ಯ ವೆಚ್ಚಕ್ಕೆ ಹಾಗೂ ಮಲ್ಯ ಆಪ್ತರ ಸಂಬಳಕ್ಕೆ ವೆಚ್ಚ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಇನ್ನೊಂದೆಡೆ, ತಮ್ಮ ಮತ್ತು ಕುಟುಂಬದ ಆಸ್ತಿ ಜಪ್ತಿ ಪ್ರಶ್ನಿಸಿ ಮಲ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next