Advertisement

ಬ್ಯೂಸಿನೆಸ್‌ ಆನೆ

09:18 PM May 26, 2019 | Sriram |

ಆನೆ ದೈತ್ಯ ಜೀವಿ. ಆನೆ ದಸರೆಯ ಜಂಬೂಸವಾರಿಯ ಕೇಂದ್ರ ಬಿಂದು. ಆನೆ ಗಣೇಶನ ಇನ್ನೊಂದು ರೂಪ.. ಇವೆಲ್ಲವೂ ಸರಿ. ಈಗ ವಿಶೇಷ ಸುದ್ದಿ ಏನೆಂದರೆ, ಆನೆಯನ್ನು ಮುಂದಿಟ್ಟುಕೊಂಡು ಬ್ಯೂಸಿನೆಸ್‌ ಮಾಡೋದು ಉಂಟಂತೆ.

Advertisement

ಸಾಮಾನ್ಯವಾಗಿ ಕಾಡಲ್ಲಿ ಹಿಡಿದ ಆನೆಗಳನ್ನು ಹೆಚ್ಚಾಗಿ ದೇವಸ್ಥಾನದಲ್ಲಿ ಇಟ್ಟುಕೊಂಡಿರುತ್ತಾರೆ. ಕೇರಳದಲ್ಲಿ ಆನೆ ಪ್ರತಿ ದೇವಾಲಯದ ಖಡ್ಡಾಯ ಎಂಬಂತಿದೆ. ಅದೇ ರೀತಿ ಟಿಂಬರ್‌ಗೂ ಬಳಸುವುದೂ ಉಂಟಂತೆ. ಈಗಿನ ಸಮಾಚಾರ ಅಂದರೆ, ಆನೆ ಪ್ರತಿದಿನ ಎರಡಿಂದ ಮೂರು ಲಕ್ಷ ದುಡಿಯಬಲ್ಲದು ಅನ್ನೋದು. ಟಸ್ಕರ್‌ಗಳು ದಿನಕ್ಕೆ 30 ಸಾವಿರವಂತೆ.

ಕೇಳರದಲ್ಲಿ ಹೆಚ್ಚುಕಮ್ಮಿ 6ತಿಂಗಳಲ್ಲಿ ಕನಿಷ್ಠ ಅಂದರೂ 70 ಹಬ್ಬಗಳು ಬಂದು ಹೋಗುತ್ತವೆ. ಅಷ್ಟರಲ್ಲೂ ಆನೆ ಭಾಗವಹಿಸಿದರೆ 21 ಲಕ್ಷ ಸಿಗುತ್ತದೆ ಅನ್ನೋ ಅಂದಾಜಿದೆ. ಹಾಗಂತ ಇದರ ಖರ್ಚೇನು ಕಡಿಮೆ ಇಲ್ಲ. 20ಸಾವಿರ ರೂ. ಮಾವುತನಿಗೆ ಕೊಡಬೇಕು. ಒಂದು ಆನೆಗೆ ಒಬ್ಬ ಕಾವಾಡಿ, ಒಬ್ಬ ಮಾವುತನಿರುತ್ತಾನೆ. ದೇವಸ್ಥಾನ, ಇತರೆ ಹಬ್ಬಗಳಲ್ಲಿ ಭಾಗವಹಿಸಿದರೆ ಆನೆ ಪಾಲನೆ ಮಾಡುವವರಿಗೆ ಮೇಲ್‌ ಕಾಸು ಬೇರೆ ಸಿಗುತ್ತದೆ. ಪ್ರತಿದಿನ ಆನೆಗೆ 150 ಕೆ.ಜಿ ಆಹಾರ ಬೇಕಾಗುತ್ತದೆ. ಅಲ್ಲಿನ ದೊಡ್ಡ ದೊಡ್ಡ ಶ್ರೀಮಂತರ ಕೇವಲ ಹಬ್ಬಕ್ಕೆ ಮಾತ್ರವಲ್ಲ. ಮನೆಯ ಪ್ರತಿಯೊಂದು ಸಂಭ್ರಮಕ್ಕೂ ಆನೆ ಜೊತೆಯಾಗುವ ಸಂಪ್ರದಾಯ ಇದೆಯಂತೆ. ಹೀಗಾಗಿ, ಆನೆ ಕೂಡ ತಮ್ಮ ಆಹಾರ ತಾನೇ ಸಂಪಾದನೆ ಮಾಡಿಕೊಳ್ಳಬಹುದು. ಅಮೆರಿಕದಲ್ಲೂ ಕೆಲ ಕಡೆ ಮದುವೆಗಳಿಗೆ ಆನೆ ಕರೆಸುವ ಉತ್ಸಾಹ ಇನ್ನೂ ಇದೆ. ಆದರೆ ಅದರ ಬೆಲೆ ದಿನಕ್ಕೆ ಮೂರು ಸಾವಿರದಿಂದ 7 ಸಾವಿರ ಡಾಲರ್‌ ತನಕ ಬೆಲೆ ಇದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next