Advertisement

ಬಿಸಿನೆಸ್‌ ಸೆಂಟರ್‌ ಆದ ನಗರಸಭೆ ಇಂಟರ್‌ಲಾಕ್‌ಗಾಗಿ ಕೋಳಿ ಜಗಳ 

02:34 PM Mar 18, 2017 | Team Udayavani |

ಮಡಿಕೇರಿ: ನಗರಸಭೆ ಎನ್ನುವುದು ಜನರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕಾಗಿ ಇರುವುದೇ ಹೊರತು ಇದನ್ನು ಬಿಸಿನೆಸ್‌ ಸೆಂಟರ್‌ ಮಾಡುವುದು ಬೇಡ. ಇಲ್ಲಿ ಜನರ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕು, ಆದರೆ ಇಂಟರ್‌ಲಾಕ್‌ ಗೊಂದಲ, ನಗರಸಭೆಯ ಕೋಟಿಗಟ್ಟಲೆ ಆಸ್ತಿ ಎಂದೆಲ್ಲ ಚರ್ಚೆಯಾಗುತ್ತಿದೆ. ನಗರಸಭೆಯನ್ನು ಬಿಸಿನೆಸ್‌ ಸೆಂಟರ್‌ ಮಾಡುವುದು ಬೇಡವೆಂದು ಹಿರಿಯ ಸದಸ್ಯ ಕೆ.ಎಂ. ಗಣೇಶ್‌ ಸದಸ್ಯರಿಗೆ ಬುದ್ದಿ ಮಾತು ಹೇಳಿದ ಪ್ರಸಂಗ ನಡೆಯಿತು.

Advertisement

ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸುರಭಿ ಹೋಟೆಲ್‌ ಬಳಿ ಹಾಕಲಾಗಿದ್ದ ಇಂಟರ್‌ ಲಾಕ್‌ನ್ನು ನಗರಸಭಾ ಅಧ್ಯಕ್ಷರ ನೇತೃತ್ವದಲ್ಲಿ ತೆರವುಗೊಳಿಸಲಾಗಿದೆ ಎನ್ನುವ ಕ್ಷುಲ್ಲಕ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಯಿತಲ್ಲದೆ, ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಹಾಗೂ ಉಪಾಧ್ಯಕ್ಷರಾದ ಟಿ.ಎಸ್‌. ಪ್ರಕಾಶ್‌ ಅವರುಗಳ ನಡುವೆ ವಾಗ್ವಾದ ನಡೆಯಿತು. 

ಸಭೆ ಆರೋಗ್ಯಕರ ಚರ್ಚೆಯ ಮೂಲಕ ಮುಂದುವರಿಯುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಟಿ.ಎಸ್‌. ಪ್ರಕಾಶ್‌ ಸುರಭಿ ಹೋಟೆಲ್‌ನ ಎದುರು ಅಳವಡಿಸಲಾಗಿದ್ದ ಇಂಟರ್‌ಲಾಕ್‌ನ್ನು ತೆರವುಗೊಳಿಸಿದ ಬಗ್ಗೆ ಸಹನೆ ಕಳೆದುಕೊಂಡು ಮಾತನಾಡಿದರು. ಅಧ್ಯಕ್ಷರು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ನ್ಯಾಯ ಒದಗಿಸುತ್ತಿದ್ದಾರೆ ಎಂದು ಟೀಕಿಸಿದರು. ಇತರ ಅಂಗಡಿ ಮಳಿಗೆಗಳ ಎದುರು ಅಳವಡಿಸಲಾಗಿರುವ ಇಂಟರ್‌ಲಾಕ್‌ಗಳನ್ನು ಕೂಡ ತೆರವುಗೊಳಿಸಿ ಎಂದು ಒತ್ತಾಯಿಸಿದರು.  ಈ ಸಂದರ್ಭ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next