Advertisement
ಹಂಪನಕಟ್ಟೆ, ಬಂಟ್ಸ್ ಹಾಸ್ಟೆಲ್, ಲಾಲ್‌ಬಾಗ್, ಬಾವುಟಗುಡ್ಡ, ಪಿವಿಎಸ್ ಜಂಕ್ಷನ್, ಜ್ಯೋತಿ ಚಿತ್ರಮಂದಿರ ಬಳಿ, ಬಿಜೈ ಸಹಿ¤ ಅನೇಕ ಕಡೆಗಳಲ್ಲಿ ಬಸ್ ಲೇ/ಬೇಗಳನ್ನು ನಿರ್ಮಾಣ ಮಾಡಲಾಗಿದೆ. ರಸ್ತೆ, ಬಸ್ ಲೇನ್ ಪ್ರತ್ಯೇಕಿಸಲು ಕೋನ್‌ಗಳನ್ನು ಅಳವಡಿಸಲಾಗಿದೆ. ಕೆಲವು ಕಡೆ ಗಳಲ್ಲಿ ಮಾರ್ಕಿಂಗ್ ಮಾಡಲಾಗಿದೆ. ಈ ಮಾರ್ಕಿಂಗ್ ಒಳಗೇ ಬಸ್‌ಗಳು ಸಂಚರಿಸ ಬೇಕು ಅಥವಾ ಪ್ರಯಾಣಿಕರನ್ನು ಇಳಿಸ ಬೇಕು. ಆದರೆ ಈ ನಿಯಮ ಹಲವು ಕಡೆಗಳಲ್ಲಿ ಪಾಲನೆ ಆಗುತ್ತಿಲ್ಲ.
Related Articles
ಬಸ್ ಚಾಲಕರು, ಮಾಲಕರು ಹೇಳು ವಂತೆ ಮಂಗಳೂರಿನಲ್ಲಿರುವ ಬಸ್ ಬೇ/ಲೇನ್‌ಗಳು ಅವೈಜ್ಞಾನಿಕವಾಗಿದೆ. ಇದರಲ್ಲಿ ಬಸ್ ಸಂಚರಿಸಲು ಕಷ್ಟವಾಗುತ್ತದೆ. ಇನ್ನು ಖಾಸಗಿ ಬಸ್ ಚಾಲಕರಿಗೆ ಸಮಯ ಪಾಲನೆ ಅತೀ ಮುಖ್ಯ. ಹೀಗಿದ್ದಾಗ, ಬಸ್ ಲೇನ್ ಪ್ರವೇಶಿಸುವಲ್ಲಿ ವಿಳಂಬ ನೀತಿ ಅಳವಡಿ ಸಲಾಗುತ್ತದೆ ಎನ್ನುತ್ತಾರೆ ಸ್ಥಳೀಯರು.
Advertisement
ನಿಯಮ ಪಾಲನೆಯಾಗುತ್ತಿಲ್ಲಪಾಲಿಕೆ, ಸಂಚಾರಿ ಇಲಾಖೆಯು ಸುಗಮ ಸಂಚಾರದ ದೃಷ್ಟಿಯಿಂದ ಬಸ್ ಬೇ/ಲೇನ್ ಅಳವಡಿಸಿದೆ. ಇದನ್ನು ಬಸ್ ಚಾಲಕರು ಉಪಯೋಗಿಸಬೇಕು. ಕೆಲವು ಕಡೆಗಳಲ್ಲಿ ನಿಯಮ ಪಾಲನೆಯಾಗುತ್ತಿಲ್ಲ. ಇದರಿಂದ ಪ್ರಯಾಣಿಕರು ಹೈರಾಣಾಗಿದ್ದಾರೆ. ಬಸ್‌ಬೇಗಳಲ್ಲಿ ಖಾಸಗಿ ವಾಹನ ನಿಲ್ಲಿಸಲಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಕ್ರಮಕೈಗೊಳ್ಳ ಬೇಕು ಎಂದು ಜಿ.ಕೆ. ಭಟ್ ಆಗ್ರಹಿಸಿದ್ದಾರೆ. ಅವೈಜ್ಞಾನಿಕ ಬಸ್ ಲೇನ್
ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ “ನಗರದಲ್ಲಿ ಸುಗಮ ಸಂಚಾರಕ್ಕೆಂದು ಕೆಲವೊಂದು ಜಂಕ್ಷನ್‌ಗಳಲ್ಲಿ ಬಸ್ ಲೇನ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇವುಗಳು ಅವೈಜ್ಞಾನಿ ಕವಾಗಿದೆ. ಈ ಬಗ್ಗೆ ಈಗಾಗಲೇ ಪೊಲೀಸ್ ಆಯುಕ್ತರ ಗಮನಕ್ಕೂ ತಂದಿದ್ದೇವೆ. ಕೆಲವೊಂದು ಜಂಕ್ಷನ್‌ಗಳಲ್ಲಿನ ಬಸ್ ಲೇನ್‌ಗಳಲ್ಲಿ ಬಸ್‌ಗಳು ಸಾಲು ಸಾಲು ನಿಂತಿರುತ್ತವೆ. ಹೀಗಿದ್ದಾಗ ಮುಂದಿನ ಬಸ್ ನಿರ್ಗಮಿಸದೆ ಹಿಂದಿನ ಬಸ್ ಹೋಗಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಬಸ್ ಲೇನ್ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ’ ಎನ್ನುತ್ತಾರೆ. ಉಲ್ಲಂಘಿಸಿದರೆ ಕ್ರಮ
ನಗರದ ಸಂಚಾರ ದಟ್ಟಣೆ ತಪ್ಪಿಸುವ ಉದ್ದೇಶದಿಂದ ಬಸ್ ಬೇ/ಲೇನ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳ ಮುಖೇನ ಬಸ್‌ಗಳು ಸಂಚರಿಸಬೇಕು. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುತ್ತೇವೆ. ಬಸ್ ಲೇನ್‌ಗಳಲ್ಲಿ ಕೆಲವು ಕಡೆ ಕೋನ್‌ಗಳು ತುಂಡಾಗಿದ್ದು, ಸದ್ಯದಲ್ಲೇ ಹೊಸ ಕೋನ್ ಅಳವಡಿಸುತ್ತೇವೆ.
-ನಟರಾಜ್, ಟ್ರಾಫಿಕ್ ಎಸಿಪಿ ನವೀನ್ ಭಟ್ ಇಳಂತಿಲ