Advertisement

ಬಸ್‌ ಸಂಚಾರ ಸ್ಥಗಿತ : ನೆಂಪು ಕಾಲೇಜು ಮಕ್ಕಳಿಗೆ ಸಂಕಷ್ಟ

10:45 PM Jul 29, 2019 | Team Udayavani |

ಕುಂದಾಪುರ: ಉಡುಪಿಯಿಂದ ವಂಡ್ಸೆ, ಕೊಲ್ಲೂರಿಗೆ ಶಾಲಾ- ಕಾಲೇಜು ಮಕ್ಕಳಿಗೆ ಅನುಕೂಲವಾಗುವಂತೆ ಸಂಚರಿಸುತ್ತಿದ್ದ ಖಾಸಗಿ ಬಸ್‌ವೊಂದು ಕಳೆದ 1 ತಿಂಗಳಿನಿಂದ ಸಂಚಾರವನ್ನು ಸ್ಥಗಿತಗೊಳಿಸಿದ್ದು, ಇದರಿಂದ ನೆಂಪು ಪ.ಪೂ. ಕಾಲೇಜಿಗೆ ಅಂಪಾರು, ವಾಲೂ¤ರು, ನೇರಳಕಟ್ಟೆಯಿಂದ ಬರುವ ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

Advertisement

ಕಳೆದ ಒಂದೂವರೆ ತಿಂಗಳಿನಿಂದ ಉಡುಪಿಯಿಂದ ಕೊಲ್ಲೂರಿಗೆ ಅಂಪಾರು – ನೇರಳಕಟ್ಟೆ – ನೆಂಪು ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಿರುವುದರಿಂದ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ.

4 ಬಾರಿ ಸಂಚಾರ
ಉಡುಪಿಯಿಂದ ಈ ಖಾಸಗಿ ಬಸ್‌ ದಿನಕ್ಕೆ 4 ಬಾರಿ ಸಂಚರಿಸುತ್ತಿತ್ತು. ಬೆಳಗ್ಗೆ ಉಡುಪಿಯಿಂದ ಕೊಲ್ಲೂರಿಗೆ, ಮಧ್ಯಾಹ್ನ ಹಾಗೂ ಸಂಜೆ ಉಡುಪಿಯಿಂದ ವಂಡ್ಸೆಯವರೆಗೆ ಸಂಚರಿಸುತ್ತಿತ್ತು. ಆದರೆ ಏಕಾಏಕಿ ಈ ಬಸ್‌ ಸಂಚಾರ ಸ್ಥಗಿತಗೊಳಿಸಿರುವುದರಿಂದ ನಿತ್ಯ ಬೆಳಗ್ಗೆ ಹಾಗೂ ಸಂಜೆ ಹೊತ್ತು ಪ್ರಯಾಣಿಸುತ್ತಿದ್ದ ಮಕ್ಕಳು ಸಹಿತ ನೂರಾರು ಮಂದಿಗೆ ಸಂಚಾರ ಸಂಕಷ್ಟ ಎದುರಾಗಿದೆ.

ಈಗ ಹೆಬ್ರಿಯಿಂದ ಕೊಲ್ಲೂರಿಗೆ 8.20ಕ್ಕೆ ಒಂದು ಬಸ್‌ ಸಂಚರಿಸಿದರೆ, ಆ ಬಳಿಕ ಮತ್ತೆ ಬಸ್‌ ಬರುವುದು ಮಧ್ಯಾಹ್ನ 1ಕ್ಕೆ. ಅದು ಕೊಲ್ಲೂರಿನಿಂದ ವಂಡ್ಸೆ, ನೇರಳಕಟ್ಟೆ, ಅಂಪಾರು ಆಗಿ ಉಡುಪಿಗೆ, ಮತ್ತೆ 3.15ಕ್ಕೊಂದು ಬಸ್‌ ಹೆಬ್ರಿಯಂದ ಕೊಲ್ಲೂರಿಗೆ ಈ ಮಾರ್ಗವಾಗಿ ಸಂಚರಿಸುತ್ತದೆ. ಆ ಬಳಿಕ ಮತ್ತೆ ಈ ಮಾರ್ಗದಲ್ಲಿ ಯಾವುದೇ ಬಸ್‌ ಸಂಚಾರ ಇಲ್ಲ. ಈ ಮಾರ್ಗದಲ್ಲಿ ಸರಕಾರಿ ಬಸ್‌ ಆದರೂ ಸಂಚಾರ ಆರಂಭಿಸಲಿ ಎಂಬುದು ಸ್ಥಳೀಯರ ಆಗ್ರಹ.

ಬೇರೆ ವಾಹನಗಳ ಅವಲಂಬನೆ
ಕಾಲೇಜು ಹೆಚ್ಚಿನ ದಿನಗಳಲ್ಲಿ 4 ಗಂಟೆಯವರೆಗೆ ಇರುತ್ತದೆ. ಆದರೆ ಅಪರಾಹ್ನ 3.15 ರ ನಂತರ ಈ ಮಾರ್ಗದಲ್ಲಿ ಬಸ್‌ ಸಂಚಾರ ಇಲ್ಲದೇ ಇರುವುದರಿಂದ ಕಾಲೇಜು ವಿದ್ಯಾರ್ಥಿಗಳು ಇತರ ಖಾಸಗಿ ವಾಹನಗಳ ಮೊರೆ ಹೋಗುವಂತಾಗಿದ್ದು, ಈ ಸಮಸ್ಯೆಗೆ ಪರಿಹಾರ ಎದುರು ನೊಡುತ್ತಿದ್ದಾರೆ.

Advertisement

ಪರಿಶೀಲನೆ ನಡೆಸಿ, ಸೂಕ್ತ ಕ್ರಮ
ಅಂಪಾರು, ನೇರಳಕಟ್ಟೆ, ನೆಂಪು ಮಾರ್ಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್‌ ಸಂಚಾರ ಸ್ಥಗಿತದಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಈಗಾಗಲೇ ವಾಲೂ¤ರು, ಕಂಡೂÉರು ಮಾರ್ಗದಲ್ಲಿ ಒಂದು ಕೆಎಸ್‌ಆರ್‌ಟಿಸಿ ಬಸ್‌ ಸಂಚರಿಸುತ್ತಿದ್ದು, ಅದನ್ನು ಅಂಪಾರು ಮಾರ್ಗದಲ್ಲಿ ಸಂಚರಿಸುವಂತೆ ಮಾಡಿದರೆ ಆಗುವ ಸಾಧಕ-ಬಾಧಕ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ರಾಜೇಶ್‌ ಮೊಗವೀರ,
ಡಿಪೋ ಮ್ಯಾನೇಜರ್‌, ಕೆಎಸ್‌ಆರ್‌ಟಿಸಿ ಕುಂದಾಪುರ ವಿಭಾಗ

ಸರಕಾರಿ ಬಸ್‌ ಬರಲಿ
ಅಂಪಾರುವಿನಿಂದ ವಂಡ್ಸೆ, ನೆಂಪು, ನೇರಳಕಟ್ಟೆಗೆ ಈಗ ಬರಬೇಕಾದರೆ ಬಸ್‌ ಇಲ್ಲದೇ ತುಂಬಾ ಸಮಸ್ಯೆಯಾಗುತ್ತಿದೆ. ಹಿಂದೆ 4 ಟ್ರಿಪ್‌ ಮಾಡುತ್ತಿದ್ದ ಖಾಸಗಿ ಬಸ್‌ ಈಗ ಬರುತ್ತಿಲ್ಲ. ಈ ಮಾರ್ಗದಲ್ಲಿ ಬೆಳಗ್ಗೆ ಮತ್ತು ಸಂಜೆ ಹೊತ್ತು ಸರಕಾರಿ ಬಸ್‌ ಸಂಚಾರ ವ್ಯವಸ್ಥೆ ಮಾಡಲಿ.
-ಪ್ರಕಾಶ್‌ ಭಟ್‌ ನೆಂಪು,
ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next