Advertisement

ಬಸ್‌ ಸಂಚಾರ ಸ್ಥಗಿತ-ಪರದಾಟ

04:17 PM Nov 10, 2019 | Team Udayavani |

ಬಾದಾಮಿ: ಅಯ್ಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಬಾದಾಮಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿತ್ತು.

Advertisement

ಶಾಲಾ-ಕಾಲೇಜು ರಜೆ ಘೋಷಿಸಲಾಗಿತ್ತು. ಮಾರುಕಟ್ಟೆಯ ಅಂಗಡಿ-ಮುಂಗಟ್ಟು ಬಂದ್‌ ಆಗಿದ್ದರಿಂದ ಸಾರ್ವಜನಿಕರು ಮತ್ತು ವ್ಯಾಪಾರಿಗಳಿಲ್ಲದೇ ಶಾಂತ ವಾತಾವರಣ ನಿರ್ಮಾಣವಾಗಿತು. ಬೆಳಿಗ್ಗೆ ಪಿಎಸ್‌ಐ ಪ್ರಕಾಶ ಬಣಕಾರ ಹಾಗೂ ಪೊಲೀಸ್‌ ಸಿಬ್ಬಂದಿ ವಾಹನದ ಸಾರ್ವಜನಿಕರಿಕೆ ಎಚ್ಚರಿಕೆ ಮತ್ತು ಶಾಂತಿ ಕಾಪಾಡಲು ಮನವಿ ಮಾಡಿದ್ದರು. ಜತೆಗೆ ಬೀದಿ ವ್ಯಾಪಾರಿಗಳಿಗೂ ತಡೆ ಮಾಡುವ ಮೂಲಕ ಮುಖ್ಯ ರಸ್ತೆಯಲ್ಲಿ ಶಾಂತಿ ಸುವ್ಯವಸ್ಥೆಗೆ ಕ್ರಮ ಕೈಗೊಂಡಿದ್ದರು.

ಜನತೆ ಪರದಾಟ: ತಾಲೂಕಿನ ವಿವಿಧ ಗ್ರಾಮಗಳಿಗೆ ಮತ್ತು ಬಾದಾಮಿ ನಗರಕ್ಕೆ ಆಗಮಿಸುವ ಮತ್ತು ತೆರಳುವ ಜನತೆ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವೆರೆಗೆ ಬಸ್‌ ಸಂಚಾರ ಸ್ಥಗಿತಗೊಂಡಿದ್ದ ಕಾರಣ ಪ್ರಯಾಣಿಕರು ಮಧ್ಯಾಹ್ನದವರೆಗೂ ಪರದಾಡಿದರು. ಕೆಲ ಖಾಸಗಿ ವಾಹನಗಳು ದಿನದ ದರಕ್ಕಿಂತ ಹೆಚ್ಚಿನ ದರದೊಂದಿಗೆ ಪ್ರಯಾಣಿಕರಿಗೆ ಸೇವೆ ನೀಡಿದರು. ಸ್ಥಳೀಯವಾಗಿ ಆಸ್ಪತ್ರೆಗಳಿಗೆ ತೆರಳುವವರು ಬಾಡಿಗೆ ವಾಹನಗಳ ಮೂಲಕ ಬಾಗಲಕೋಟೆ, ಗದಗ, ಹುಬ್ಬಳ್ಳಿ ನಗರಗಳಿಗೆ ಪ್ರಯಾಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next