Advertisement

ಗುಂಡ್ಲುಪೇಟೆ: ಎಂದಿನಂತೆ ಬಸ್‌ ಸಂಚಾರ

03:26 PM Apr 23, 2021 | Team Udayavani |

ಗುಂಡ್ಲುಪೇಟೆ: ಹೈ ಕೋರ್ಟ್‌ ಆದೇಶದ ನಂತರ ತಾಲೂಕಿನಲ್ಲಿಕೆಎಸ್‌ಆರ್‌ಟಿಸಿ ಬಸ್‌ಗಳು ಗುರುವಾರದಿಂದ ಸಂಚಾರಆರಂಭಿಸಿದ್ದು, 80 ಬಸ್‌ಗಳು ಮೈಸೂರು-ಚಾಮರಾಜನಗರಸೇರಿ ಗ್ರಾಮೀ ಪ್ರದೇಶಗಳಲ್ಲಿ ಸಂಚಾರ ಮಾಡಿವೆ.

Advertisement

ಗುಂಡ್ಲುಪೇಟೆ ಡಿಪೋದಲ್ಲಿ 429 ಮಂದಿ ಸಾರಿಗೆನೌಕರರಿದ್ದು, 140 ಬಸ್‌ಗಳಿವೆ. ಜನರ ದಟ್ಟಣೆಗೆ ತಕ್ಕಂತೆಗುರುವಾರ 80 ಬಸ್‌ಗಳ ಸಂಚಾರ ಆರಂಭಿಸಲಾಗಿದೆ. ಹಳ್ಳಿಗಳಕಡೆ ಪ್ರಯಾಣಿಕ ಸಂಖ್ಯೆಗೆ ಅನುಗುಣವಾಗಿ ಬಸ್‌ಸಂಚರಿಸುತ್ತಿದೆ.

ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಬಾಚಹಳ್ಳಿ, ಗೋಪಾಲಪುರ, ಎಲಚಟ್ಟಿ, ಬರಗಿ ಸೇರಿ ಇತರೆಹಲವು ಗ್ರಾಮಗಳಿಗೆ ಎಂದಿನಂತೆ ಬಸ್‌ಗಳು ಓಡಾಡುತ್ತಿವೆಎಂದು ಘಟಕದ ವ್ಯವಸ್ಥಾಪಕ ಜಯಕುಮಾರ್‌ ಮಾಹಿತಿನೀಡಿದರು.

ಕೋವಿಡ್ಟೆಸ್ಟ್‌, ಲಸಿಕಾ ಕಡ್ಡಾಯ: ಸಾರಿಗೆ ನೌಕರರಮುಷ್ಕರ ತಿಳಿಗೊಂಡಿದ್ದು, ತಾಲೂಕಿನಲ್ಲಿ ಪ್ರಸ್ತುತ 120ಕ್ಕೂಹೆಚ್ಚು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕಿದೆ. ಇವರು ಕೆಲಸಕ್ಕೆಬರಲು ಕೋವಿಡ್‌ ಟೆಸ್ಟ್‌ ಕಡ್ಡಾಯವಾಗಿದ್ದು, ಕಡ್ಡಾಯವಾಗಿಲಸಿಕೆ ಪಡೆಯಲೇಬೇಕಿದೆ.

ಜೊತೆಗೆ ಏಳು ದಿನಕ್ಕಿಂತ ಹೆಚ್ಚು ದಿನರಜೆ ಹಾಕಿದರೆ ಅಂತಹ ಸಿಬ್ಬಂದಿ ಜಿಲ್ಲಾಧಿಕಾರಿಯಿಂದ ಪತ್ರತರಬೇಕಿರುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿಮುಷ್ಕರದ ವೇಳೆ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗೆ ಈಗದೊಡ್ಡ ಸಮಸ್ಯೆ ಉಂಟಾಗಿದೆ.

Advertisement

ಖಾಸಗಿ ಬಸ್ಗೆ ಬ್ರೇಕ್: ಕಳೆದ 15 ದಿನಗಳಲ್ಲಿ ಗುಂಡ್ಲುಪೇಟೆತಾಲೂಕು ಸೇರಿ ಇತರೆಡೆ ಖಾಸಗಿ ಬಸ್‌ಗಳು ಹೆಚ್ಚಿನ ದರತೆಗೆದುಕೊಂಡು ಸಂಚರಿಸುತ್ತಿದ್ದವು. ಅದಕ್ಕೆ ಇದೀಗ ಬ್ರೇಕ್‌ಬಿದ್ದಿದೆ. ಕೆಎಸ್‌ಆರ್‌ಟಿಸ್‌ ಬಸ್‌ ನಿಲ್ದಾಣದೊಳಗೆ ನಿಲುಗಡೆಮಾಡುತ್ತಿದ್ದ ಖಾಸಗಿ ಬಸ್‌ಗಳು ಗುರುವಾರದಿಂದಕಾಣೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next