Advertisement

ಮನೆಯ ಮೇಲೆ ಉರುಳಿ ಬಿದ್ದ ಮದುವೆ ದಿಬ್ಬಣದ ಬಸ್: ಮಗು ಸೇರಿ ಐವರು ಸಾವು

05:35 PM Jan 03, 2021 | Team Udayavani |

ಸುಳ್ಯ: ಪುತ್ತೂರು ಕಡೆಯಿಂದ ಸುಳ್ಯ ಆಲೆಟ್ಟಿ ಮೂಲಕ ಪಾಣತ್ತೂರು ಕಡೆಗೆ ಹೋಗುತ್ತಿದ್ದ ಮದುವೆ ದಿಬ್ಬಣದ ಖಾಸಗಿ ಬಸ್ ಕೇರಳದ ಪಾನತ್ತೂರು ಬಳಿ ಪಲ್ಟಿಯಾಗಿದ್ದು, ಐವರು ಮೃತಪಟ್ಟಿರುವ ಘಟನೆ ನಡೆದಿದೆ.

Advertisement

ಕೊಡಗಿನ ಕರಿಕೆಯಲ್ಲಿ ಇದ್ದ ಮದುವೆ ಕಾರ್ಯಕ್ರಮಕ್ಕೆ ಕಲ್ಲಪ್ಪಳ್ಳಿ ಪಾನತ್ತೂರು ಮೂಲಕ ಈ ಬಸ್ ಸಾಗುತ್ತಿತ್ತು. ಪಾಣತ್ತೂರು ಬಳಿಯ ಗಡಿಗುಡ್ಡೆ ಪೆರಿಯಾರಂ ಎಂಬಲ್ಲಿ ಮನೆಯೊಂದರ ಮೇಲೆ ಬಸ್ ಬಿದ್ದು ದುರಂತ ಸಂಭವಿಸಿದೆ.

ಬಸ್‌ನಲ್ಲಿ ಸುಮಾರು 60 ಮಂದಿ ಪ್ರಯಾಣಿಸುತ್ತಿದ್ದು, ಘಟನೆಯಲ್ಲಿ ಒಂದು ಮಗು ಸೇರಿದಂತೆ ಐವರು ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿದೆ. ಸುಮಾರು 20 ಮಂದಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ:ಚಿತ್ರದುರ್ಗದಲ್ಲಿ ಆಸ್ಪತ್ರೆಗೆ ದಾಖಲಾದ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ

Advertisement

ಗಾಯಾಳುಗಳನ್ನು ಕಾಂಞಂಗಾಡ್ ಆಸ್ಪತ್ರೆಗೆ ಸೇರಿಸಲಾಗಿದೆ.

ಇದನ್ನೂ ಓದಿ: ವಿಟ್ಲಪಡ್ನೂರು: ಅತ್ತೆಯ ಎದುರೇ ನಾದಿನಿಯ ಅತ್ಯಾಚಾರಗೈದು ಫೋಟೊ ವೈರಲ್ ಮಾಡುವುದಾಗಿ ಬೆದರಿಕೆ

ವಧುವಿನ ಮನೆ ಪುತ್ತೂರು ತಾಲೂಕಿನ ಬಲ್ನಾಡಿನ ಪಾಲೆಚ್ಚಾರು : 

Advertisement

Udayavani is now on Telegram. Click here to join our channel and stay updated with the latest news.

Next