Advertisement

ಚಿಂಚೋಳಿಯಲ್ಲಿ ಕಳುವಾಗಿದ್ದ ಕೆಎಸ್ ಆರ್ ಟಿಸಿ ಬಸ್ ಭೂಕೈಲಾಸದಲ್ಲಿ ಪತ್ತೆ!

05:20 PM Feb 22, 2023 | Team Udayavani |

ಚಿಂಚೋಳಿ: ಬೀದರ್‌ ನಿಂದ ಕಲಬುರಗಿ ಜಿಲ್ಲೆಯ ಚಿಂಚೋಳಿಗೆ ಬಂದಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ ಕಳುವಾಗಿ ನೆರೆಯ ತೆಲಂಗಾಣ ರಾಜ್ಯದಲ್ಲಿ ಪತ್ತೆಯಾದ ಘಟನೆ ಮಂಗಳವಾರ ನಡೆದಿದೆ.

Advertisement

ಬೀದರ ಡಿಪೋಗೆ ಸೇರಿದ ಈ ವಸತಿ ಬಸ್‌ ಸೋಮವಾರ ರಾತ್ರಿ 9ಗಂಟೆಗೆ ಚಿಂಚೋಳಿ ತಲುಪಿತ್ತು. ಬಸ್‌ ನಿಲ್ದಾಣದ ಪ್ಲಾಟ್‌ಫಾರಂ-3ರಲ್ಲಿ ಬಸ್‌ ನಿಲ್ಲಿಸಿದ ಚಾಲಕ ಮಹ್ಮದ್‌ ಅಯೂಬ್‌ ಹಾಗೂ ನಿರ್ವಾಹಕ ಈರಪ್ಪ ಬಸ್‌ನಲ್ಲಿಯೇ ಎಂದಿನಂತೆ ಊಟ ಮಾಡಿ, ಬಳಿಕ ವಿಶ್ರಾಂತಿ ಕೋಣೆಗೆ ಹೋಗಿ ಮಲಗಿದ್ದರು.

ಮರುದಿನ ಬೆಳಿಗ್ಗೆಯ ಟ್ರಿಪ್‌ಗೆ ಹೊರಡಲು ಚಾಲಕ ಮಹ್ಮದ್‌ ಅಯೂಬ್‌ ನಸುಕಿನ ಜಾವ ಐದು ಗಂಟೆಗೆ ಬಂದಾಗ ನಿಲ್ದಾಣದಲ್ಲಿ ಬಸ್‌ ಕಾಣಿಸಲಿಲ್ಲ. ಹೀಗಾಗಿ ಡಿಪೋ ವ್ಯವಸ್ಥಾಪಕ ಅಶೋಕ ಪಾಟೀಲ ಅವರ ಗಮನಕ್ಕೆ ತಂದರು.

ಅವರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಬೆಳಗಿನ ಜಾವ 3:37 ನಿಮಿಷಕ್ಕೆ ಬಸ್‌ ಕಳ್ಳತನವಾಗಿರುವುದು ಗೊತ್ತಾಯಿತು. ಚಿಂಚೋಳಿ ಪಿಎಸ್‌ಐ ಮಹೆಬೂಬ್‌ ಅಲಿ
ನಿಲ್ದಾಣದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಸ್‌ ಚಲಾಯಿಸಿಕೊಂಡು ಮಿರಿಯಾಣ ಮಾರ್ಗವಾಗಿ ಹೋಗಿರುವುದು ಗೊತ್ತಾಯಿತು. ತೆಲಂಗಾಣದತ್ತ ಹೋಗಿರಬಹುದೆಂದು ಶಂಕಿಸಿ ಕಾರ್ಯಾಚರಣೆ ನಡೆಸಿದಾಗ ಸಂಜೆ ಹೊತ್ತಿಗೆ ತೆಲಂಗಾಣದ ತಾಂಡೂರ ಬಳಿಯ ತಾಂಡಾದ ಭೂಕೈಲಾಸ ದೇಗುಲದ ಬಳಿ ಚರಂಡಿಯಲ್ಲಿ ಸಿಕ್ಕಿ ಹಾಕಿದ ರೀತಿಯಲ್ಲಿ ಬಸ್‌ ಪತ್ತೆಯಾಯಿತು.

ಬಸ್‌ ಕಳವು ಕುರಿತು ವಿಚಾರಣೆ ನಡೆದಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಎಂ.ರಾಚಪ್ಪ , ವ್ಯವಸ್ಥಾಪಕ ನಿರ್ದೇಶಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next