Advertisement

ಗುಲ್ವಾಡಿ ವೆಂಟೆಡ್‌ ಡ್ಯಾಂ ಮೂಲಕ ಬಸ್‌ ಸಂಚರಿಸಲಿ: ಪ್ರಯಾಣಿಕರ ಮನವಿ

09:54 PM Feb 09, 2020 | Sriram |

ಬಸ್ರೂರು: ಬಸ್ರೂರಿನಿಂದ ವಾರಾಹಿ ನದಿ ತಟದ ಮೇಲೆ ಗುಲ್ವಾಡಿ ಕಳುವಿನಬಾಗಿಲುವರೆಗೆ ರಸ್ತೆಯಿದೆ. ಬಹಳ ಹಿಂದೆ ಇಲ್ಲಿ ವೆಂಟೆಡ್‌ ಡ್ಯಾಂ ನಿರ್ಮಾಣಕ್ಕೂ ಮೊದಲು ಒಂದು ಬಸ್‌ ಕಂಡ್ಲೂರು ಹಳೆ ಕಳುವಿನಬಾಗಿಲಿನವರೆಗೆ ಬಂದು ಹೋಗುತ್ತಿತ್ತು. ಅನಂತರ ಆ ಬಸ್‌ ನಿಂತು ಹೋಯಿತು.

Advertisement

ಕಳುವಿನಬಾಗಿಲಿನಲ್ಲಿ ವೆಂಟೆಡ್‌ ಡ್ಯಾಂ ನಿರ್ಮಾಣವಾಗಿ ಹತ್ತು ವರ್ಷಕ್ಕೂ ಹೆಚ್ಚು ಸಮಯ ಕಳೆಯಿತು. ಈ ಡ್ಯಾಂ ಮೇಲೆ ದೊಡ್ಡ ವಾಹನ ಮಾತ್ರ ಸಂಚರಿಸಲು ಸಾಧ್ಯವಿಲ್ಲ. ಅಂದರೆ ಮಿನಿ ಬಸ್‌ ಬಿಟ್ಟರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎನ್ನುವುದು ಸ್ಥಳೀಯರ ಮನವಿಯಾಗಿದೆ.

ಕುಂದಾಪುರದಿಂದ ತಲ್ಲೂರು-ಹೆಮ್ಮಾಡಿ ಮೂಲಕ ಕೊಲ್ಲೂರು ತಲುಪುದಕ್ಕೆ ಹೆಚ್ಚು ದೂರವಿದೆ. ಆ ಮಾರ್ಗದ ಬದಲು ಬಸ್ರೂರು-ಗುಲ್ವಾಡಿ-ಮಾವಿನಕಟ್ಟೆ-ವಂಡ್ಸೆ ಮೂಲಕ ಕೊಲ್ಲೂರಿಗೆ ಸಂಚರಿಸಿದರೆ ಅರ್ಧಕ್ಕಿಂತ ಹೆಚ್ಚು ದೂರ ಕಡಿಮೆಯಾಗುತ್ತದೆ.

ಈ ಮಾರ್ಗದಲ್ಲಿ ಬಸ್‌ ಸಂಚ ರಿಸುವುದರಿಂದ ಬಸ್ರೂರು-ಕೋಣಿ-ಕಂದಾವರ-ಬಳ್ಕೂರು-ಜಪ್ತಿಹುಣ್ಸೆ ಮಕ್ಕಿ-ಹಾಲಾಡಿ- ನೇರಳಕಟ್ಟೆ ಮಂತಾದ ಗ್ರಾಮಗಳ ಜನರಿಗೆ ಅನುಕೂಲ
ವಾಗುತ್ತದೆ ಎನ್ನುವುದು ಇಲ್ಲಿನ ಜನರ ಆಶಯವಾಗಿದೆ.

ಬಸ್‌ ಸಂಚರಿಸಿದರೆ ಅನುಕೂಲ
ನಾನು ಪ್ರತಿದಿನ ಬಸ್ರೂರಿನಿಂದ ನೇರಳಕಟ್ಟೆಗೆ ಕಚೇರಿ ಕೆಲಸಕ್ಕೆ ಹೋಗಲು ಕುಂದಾಪುರಕ್ಕೆ ಹೋಗಿ ಅಲ್ಲಿಂದ ತಲ್ಲೂರು-ಮಾವಿನಕಟ್ಟೆ ಮಾರ್ಗವಾಗಿ ಸಾಗಿ ನೇರಳಕಟ್ಟೆಗೆ ಕಚೇರಿ ಕೆಲಸಕ್ಕೆ ಹೋಗುತ್ತಿದ್ದೇನೆ. ಈ ಮಾರ್ಗದಲ್ಲಿ ಬಸ್‌ ಸಂಚರಿಸಿದರೆ ನನ್ನಂತಹ ಅನೇಕ ಮಂದಿಗೆ ಅನುಕೂಲ
– ರಮಾನಾಥ್‌, ಸ್ಥಳೀಯ

Advertisement
Advertisement

Udayavani is now on Telegram. Click here to join our channel and stay updated with the latest news.

Next