Advertisement
ರಸ್ತೆ ಅತಿಕೃಮಿತ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆದ ನಂತರ ಸ್ಥಳೀಯರು ಗುಣಮಟ್ಟದ ಸಿಸಿ ರಸ್ತೆ ಕಾಣುವಂತಾಗಿದೆ. ಸಾರಿಗೆ ಸೌಲಭ್ಯವಿಲ್ಲದ ಕಾರಣ ದಶಕದ ಹಿಂದೆ ಲಾರಿ, ಜೀಪು, ಕ್ರೂಸರ್, ಟ್ರ್ಯಾಕ್ಟರ್ ಗಳಲ್ಲಿ ಪ್ರಯಾಣ ಬೆಳೆಸುತ್ತಿದ್ದ ಜನರಿಗೆ ಈಗ ಬಸ್ ಸೌಕರ್ಯ ಒದಗಿದ್ದರೂ ನೆರಳಿಗಾಗಿ ಬಸ್ ನಿಲ್ದಾಣ ನಿರ್ಮಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬೇಜವಾಬ್ದಾರಿ ತೋರಿದ್ದಾರೆ.
Related Articles
Advertisement
ವಾಡಿ ನಗರ ಮೂಲಕ ಕಲಬುರಗಿ-ಯಾದಗಿರಿ ಜಿಲ್ಲೆಗಳ ಸಂಪರ್ಕಕ್ಕೆ 40ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುವಂತೆ ಮಾಡಿ ಜನತೆಗೆ ಅನುಕೂಲತೆ ಒದಗಿಸಿದ್ದಾರೆ. ಆದರೆ ಸ್ವಾತಂತ್ರ್ಯ ಲಭಿಸಿದ ನಂತರದಿಂದಲೂ ವಾಡಿ ಜನತೆ ಬಸ್ ನಿಲ್ದಾಣ ಭಾಗ್ಯ ಕಂಡಿಲ್ಲ.
ನರಕದಂತಿದ್ದ ವಾಡಿ ನಗರಕ್ಕೆ ಕುಡಿಯುವ ನೀರು ಒದಗಿಸಿದ್ದಾರೆ. ಗುಣಮಟ್ಟದ ಸಿಸಿ ರಸ್ತೆಗಳನ್ನು ನಿರ್ಮಿಸಿದ್ದಾರೆ. ದಿನನಿತ್ಯ ತಾಸಿಗೊಂದು ಬಸ್ ಸಂಚರಿಸುವ ಅನಿರೀಕ್ಷಿತ ಸೌಕರ್ಯ ಒದಗಿಸಲಾಗಿದೆ. ಆದರೆ ಬಸ್ ನಿಲ್ದಾಣ ಸೌಲಭ್ಯ ಮಾತ್ರ ಒದಗಿಸಿಲ್ಲ. ಮಳೆ, ಗಾಳಿ, ಚಳಿ, ಬಿಸಿಲು ಲೆಕ್ಕಿಸದೇ ನಾವು ಪ್ರತಿದಿನ ಬೀದಿಯಲ್ಲೇ ನಿಂತು ಬಸ್ಸಿಗಾಗಿ ಕಾಯುತ್ತೇವೆ. ಹೋಟೆಲ್ ಮತ್ತು ಅಂಗಡಿಗಳ ಎದುರು ನಿಲ್ಲಲು ವ್ಯಾಪಾರಿಗಳು ಅವಕಾಶ ನೀಡುವುದಿಲ್ಲ. ಬಸ್ ಬರುವವರೆಗೂ ಬಿಸಿಲಲ್ಲಿ ನಿಲ್ಲುವುದು ಅನಿವಾರ್ಯವಾಗಿದೆ. ಯಾವ ತಪ್ಪಿಗಾಗಿ ನಮಗೀ ಶಿಕ್ಷೆ? -ರೂಪಾ ಬಿ.ಕೆ., ಪ್ರೌಢಶಾಲೆ ವಿದ್ಯಾರ್ಥಿನಿ
-ಮಡಿವಾಳಪ್ಪ ಹೇರೂರ