Advertisement

ಮತದಾರರ ಜಾಗೃತಿಗಾಗಿ ಬಸ್‌ಗೆ ಭಿತ್ತಿಪತ್ರ

04:25 PM Apr 18, 2018 | Team Udayavani |

ಧಾರವಾಡ: ಮತದಾನ ಮಹತ್ವದ ಅರಿವು ಮೂಡಿಸುವ ಉದ್ದೇಶದಿಂದ ನಗರದ ಹೊಸಬಸ್‌ ನಿಲ್ದಾಣದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ಹಾಗೂ ಬಸ್‌ಗಳಲ್ಲಿ ಭಿತ್ತಿಪತ್ರ ಅಂಟಿಸುವ ಕಾರ್ಯಕ್ಕೆ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರಾಗಿರುವ ಜಿಪಂ ಸಿಇಒ ಸ್ನೇಹಲ್‌ ಆರ್‌. ಮಂಗಳವಾರ ಚಾಲನೆ ನೀಡಿದರು.

Advertisement

ಪ್ರಯಾಣಿಕರು, ಮಹಿಳೆಯರು, ಯುವಕ-ಯುವತಿಯರು ಹಾಗೂ ಹಿರಿಯ ನಾಗರಿಕರಿಗೆ ಜಾಗೃತಿ ಕರಪತ್ರಗಳನ್ನು ವಿತರಿಸಿದ ಸ್ನೇಹಲ್‌ ಅವರು ಮೇ 12ರಂದು ತಪ್ಪದೇ ಮತದಾನ ಮಾಡಲು ಮನವಿ ಮಾಡಿದರು.

ಜಿಲ್ಲಾ ವಾರ್ತಾಧಿ ಕಾರಿ ಮಂಜುನಾಥ ಡೊಳ್ಳಿನ, ವಾಕರಸಾ ಸಂಸ್ಥೆಯ ಅಧಿಕಾರಿಗಳಾದ ಡಿ. ರಾಧಾಕೃಷ್ಣ, ಶಶಿಧರ ಕುಂಬಾರ, ಶಿವಪ್ರಸಾದ, ರಾಜೇಂದ್ರ ರೂಗಿ, ಎಸ್‌.ಆರ್‌.ಅದರಗುಂಚಿ, ಸಿ.ಐ. ಹಿರೇಹೊಳಿ ಇನ್ನಿತರರಿದ್ದರು. ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಹಾಗೂ ಧಾರವಾಡ ವಿಭಾಗದ ಬಸ್ಸುಗಳು ಮತ್ತು ಬೇಂದ್ರೆ ನಗರ ಸಾರಿಗೆಯ ವಾಹನಗಳಲ್ಲಿ ಸುಮಾರು 3 ಸಾವಿರ ಭಿತ್ರಿ ಪತ್ರಗಳನ್ನು ಅಂಟಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next