Advertisement

Bus late: ತಡವಾಗಿ ಬಂದ ಬಸ್: ರಸ್ತೆ ಸಂಚಾರ‌ ತಡೆದು ವಿದ್ಯಾರ್ಥಿಗಳ ಆಕ್ರೋಶ

11:40 AM Jul 04, 2023 | Team Udayavani |

ಮಸ್ಕಿ:‌ ತಾಲೂಕಿನ ಸಾನಬಾಳ‌‌ ಗ್ರಾಮದಲ್ಲಿ ಸಮಯಕ್ಕೆ ಸರಿಯಾಗಿ ‌ಬಸ್ ಬರುತ್ತಿಲ್ಲ. ದಿನ-ನಿತ್ಯ 10 ಗಂಟೆಯ ನಂತರ‌ ಬಸ್ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಬಸ್ ಅಡ್ಡಗಟ್ಟಿ ದಿಢೀರ್ ಪ್ರತಿಭಟನೆ ನಡೆಸಿದ‌ ಘಟನೆ ಜು.4 ರ ಮಂಗಳವಾರ ನಡೆದಿದೆ.

Advertisement

ಕಳೆದ ಒಂದು ವಾರದಿಂದ  ಮಸ್ಕಿ ತಾಲೂಕು ಕೇಂದ್ರದಿಂದ ಸಾನಬಾಳ ಗ್ರಾಮಕ್ಕೆ ಬರುವ ಬಸ್ ತಡವಾಗಿ‌ ಬರುತ್ತಿದೆ. ಶಾಲೆ ಕಾಲೇಜಿನ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ‌ ಹೋಗಲು ಆಗುತ್ತಿಲ್ಲ.

ನಿತ್ಯ‌ 9 ಗಂಟೆಗೆ ಸಾನಬಾಳ‌ ಗ್ರಾಮಕ್ಕೆ ಬರಬೇಕಾದ ಬಸ್ 10 ಅಥವಾ 10.30 ಗಂಟೆಗೆ ಬರುತ್ತಿದೆ. ಇದರಿಂದ ಶಾಲಾ-ಕಾಲೇಜುಗಳಿಗೆ ತೆರಳಲು ತೊಂದರೆಯಾಗುತ್ತಿದ್ದು, ಶಾಲೆ ಆರಂಭವಾಗಿ ಒಂದು ಗಂಟೆ ಬಳಿಕ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾದ‌ ಸ್ಥಿತಿ‌ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಒಂದು ಗಂಟೆಗೂ ಅಧಿಕ‌ ಕಾಲ ಬಸ್ ತಡೆಗಟ್ಟಿ ಸಂಚಾರ ತಡೆ ನಡೆಸಿದರು. ಬಳಿಕ ಸಾರಿಗೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ‌ ಮನವೊಲಿಸಿ ಇನ್ನು ಮುಂದೆ ಸಮಯಕ್ಕೆ ಸರಿಯಾಗಿ ಬಸ್ ಬರಲಿದೆ ಎಂದು ಭರವಸೆ ‌ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ‌ಬಿಟ್ಟು ಬಸ್ ಹತ್ತಿದರು.

Advertisement

Udayavani is now on Telegram. Click here to join our channel and stay updated with the latest news.

Next