Advertisement

ವಿದ್ಯಾರ್ಥಿಗಳಿಂದ ಬಸ್‌ ತಡೆ

04:30 PM Nov 30, 2021 | Team Udayavani |

ಗುರುಮಠಕಲ್‌: ಶಾಲಾ ಸಮಯಕ್ಕೆ ಸರಿಯಾಗಿ ಬಸ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಗಡಿನಾಡು ವ್ಯಾಪ್ತಿಯ ಮೇದಕ್‌ ಗ್ರಾಮದಲ್ಲಿ ಸೋಮವಾರ ಬಸ್‌ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಮೇದಕ್‌, ಯಾನಾಗುಂದಿ, ಕಾನಾಗಡ್ಡ, ಬುರುಗಪಲ್ಲಿ ಮುಂತಾದ ಗ್ರಾಮಗಳಿಂದ ಗುರುಮಠಕಲ್‌ ಪಟ್ಟಣಕ್ಕೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಬರುತ್ತಾರೆ. ಕಲಬುರಗಿ ಡಿಪೋದಿಂದ ಗುರುಮಠಕಲ್‌ಗೆ ಸಂಚರಿಸುವ ಬಸ್‌ 10 ಗಂಟೆಯಾದ ಮೇಲೆ ನಮ್ಮ ಗ್ರಾಮಕ್ಕೆ ಬರುತ್ತದೆ. ಹೀಗಾದರೆ ನಾವು ಯಾವಾಗ ಗುರುಮಠಕಲ್‌ ಶಾಲಾ-ಕಾಲೇಜು ತಲುಪಬೇಕು?. ಇದರಿಂದ ನಮ್ಮ ತರಗತಿಗಳು ತಪ್ಪುತ್ತಿವೆ ಎಂದು ಅಸಮಾಧಾನಗೊಂಡರು.

ಬೆಳಗ್ಗೆ 9 ಮತ್ತು ಸಂಜೆ 4.30 ಗಂಟೆಗೆ ಸಮಯ ಹೊಂದಿಸಿ ಬಸ್‌ ಸಂಚರಿಸುವಂತೆ ವ್ಯವಸ್ಥೆ ಮಾಡಿ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳೆಲ್ಲ ಬಸ್‌ ತಡೆದು ಪ್ರತಿಭಟನಾ ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ವಿದ್ಯಾರ್ಥಿಗಳಾದ ರಮೇಶ್‌, ಅಶೋಕ್‌, ವಿಷ್ಣುವರ್ಧನ್‌, ಸಿದ್ದು, ಸಂಜು, ಇಂದೇಶ, ರಾಜಕುಮಾರ, ನರಸಿಂಹ, ಉಮೇಶ, ರವಿ, ನವೀನ್‌, ಅನುಷಾ, ಲಕ್ಷ್ಮೀ, ಶಶಿಕಲಾ, ನವಿತಾ, ಅಶ್ವಿ‌ನಿ, ಮಹೇಶ್ವರಿ, ಸುನಿತಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next