Advertisement

ಸರಳ ಆಚರಣೆಗೆ ದುಬಾರಿ ಪಯಣ! ಸುಲಿಗೆ ಮಾಡಿದ ಖಾಸಗಿ ಸಾರಿಗೆಗಳು ; ಮೌನಕ್ಕೆ ಶರಣಾದ ಇಲಾಖೆ

12:19 PM Sep 10, 2021 | Team Udayavani |

ಬೆಂಗಳೂರು: ಗೌರಿ-ಗಣೇಶ ಹಬ್ಬದ ಆಚರಣೆ ದುಬಾರಿ ಆಗಿಲ್ಲ; ಆದರೆ, ಆ ಹಬ್ಬಕ್ಕೆ ಬೆಂಗಳೂರಿನಿಂದ ಊರಿಗೆ ಹೋಗುವುದೇ ದುಬಾರಿಯಾಗಿ ಪರಿಣಮಿಸಿತು!

Advertisement

ಕಳೆದ ಬಾರಿ ಕೋವಿಡ್‌-19 ಹಾವಳಿ ಹಿನ್ನೆಲೆಯಲ್ಲಿ ಹಬ್ಬಕ್ಕೆ ಊರಿಗೆ ಹೋಗುವವರೂ ಇರಲಿಲ್ಲ (ನಿರ್ಬಂಧದ ಹಿನ್ನೆಲೆಯಲ್ಲಿ ಊರಲ್ಲೇ ಇದ್ದರು). ಇದರಿಂದ ಬಸ್‌ಗಳನ್ನು ಕೇಳುವವರೂ ಇರಲಿಲ್ಲ. ಆದರೆ, ಈ ಬಾರಿ ಜನಜೀವನ ಸಹಜಸ್ಥಿತಿಗೆ ಮರಳುತ್ತಿದ್ದಂತೆ ಎಂದಿನಂತೆ ಹಬ್ಬದ ಸಡಗರ ಕಳೆಗಟ್ಟಿದೆ.

ಊರಿಗೆ ಹೋಗುವವರ ಸಂಖ್ಯೆ ಹೆಚ್ಚಿದ್ದು, ಖಾಸಗಿ ಬಸ್‌ ಆಪರೇಟರ್‌ಗಳು ಅಕ್ಷರಶಃ ಸುಲಿಗೆ ಮಾಡುತ್ತಿದ್ದಾರೆ.
ಸಾಮಾನ್ಯ ದರಕ್ಕೆ ಹೋಲಿಸಿದರೆ, ಹಬ್ಬದ ಸಂದರ್ಭದಲ್ಲಿಅದರಲ್ಲೂವಿಶೇಷವಾಗಿಗುರುವಾರ ಮತ್ತು ಗುರುವಾರ ಬೆಂಗಳೂರಿನಿಂದ ಬೆಳಗಾವಿ, ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಮತ್ತಿತರ ಕಡೆಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗಿದೆ. ಉದಾಹರಣೆಗೆ ಬೆಂಗಳೂರಿನಿಂದ ಬೆಳಗಾವಿಗೆ 1500- 2,000 ರೂ., ಬೆಂಗಳೂರು-ಹುಬ್ಬಳ್ಳಿ 1000- 1500 ರೂ., ಶಿವಮೊಗ್ಗ 700- 1,000 ರೂ. ಇದೆ.

ಇದನ್ನೂ ಓದಿ :ತಾಲಿಬಾನ್‌ಗೆ ಎಚ್ಚರಿಕೆ ನೀಡಿದ ಕ್ರಿಕೆಟ್‌ ಆಸ್ಟ್ರೇಲಿಯ

ಆದರೆ, ಸಾರಿಗೆಇಲಾಖೆಯಅಧಿಕಾರಿಗಳುಮೌನಕ್ಕೆ ಶರಣಾಗಿದ್ದಾರೆ. ಇದರ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಕೊರೊನಾ ಹಾವಳಿಯಿಂದ ವೇತನಕ್ಕೆ ಕತ್ತರಿ ಬಿದ್ದಿದೆ. ಕುಟುಂಬ ನಿರ್ವಹಣೆ ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಹಬ್ಬಕ್ಕೆ ಹೊರಟರೆ, ರೈಲುಗಳಂತೂ 15 ದಿನಗಳ ಹಿಂದೆಯೇ ಭರ್ತಿ ಆಗಿವೆ.

Advertisement

ಸರ್ಕಾರಿ ಬಸ್‌ಗಳಲ್ಲೂ ಸೀಟು ಇಲ್ಲ. ಅನಿವಾರ್ಯವಾಗಿ ಖಾಸಗಿ ಸಾರಿಗೆಗಳ ಮೊರೆ ಹೋಗಬೇಕಾಗಿದೆ. ಈ ಅನಿವಾರ್ಯತೆಯನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಯಾಣಿಕ ಮನೋಜ್‌ ಆಕ್ರೋಶ ವ್ಯಕ್ತಪಡಿಸಿದರು.
ಗೌರಿ-ಗಣೇಶ ಹಬ್ಬ ಇರುವುದರಿಂದ ಸಾಕಷ್ಟು ಮಂದಿ ರಾಜಧಾನಿಯಿಂದ ರಾಜ್ಯ ಹಾಗೂ ಹೊರರಾಜ್ಯಗಳಿಗೆ ತೆರಳಲಿದ್ದಾರೆ. ಈ ಸಂದರ್ಭದ ದುರ್ಬಳಕೆ ಮಾಡಿಕೊಂಡಿ ಕೊಂಡಿರುವ ಖಾಸಗಿ ಬಸ್‌ ಅಪರೇಟರ್‌ಗಳು ಮನಬಂದಂತೆ ಹೆಚ್ಚಿಸಿದ್ದಾರೆ. ಸಾಲು ರಜೆ, ಹಬ್ಬ, ವಿಶೇಷ ಸಂದರ್ಭಗಳಲ್ಲಿ ಗ್ರಾಹಕರ ಸುಲಿಗೆ ಸಾಮಾನ್ಯವಾಗಿದೆ.

ಹಬ್ಬದ ಹಿನ್ನೆಲೆಯಲ್ಲಿ ವಾರದಿಂದ ಖಾಸಗಿ ಬಸ್‌ಗಳಲ್ಲಿ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಜೋರಾಗಿತ್ತು. ಗುರುವಾರ ಸಂಜೆಗೆ ಬೆಂಗಳೂರಿನಿಂದ ರಾಜ್ಯದ ದೂರದ ಜಿಲ್ಲೆಗಳು ಹಾಗೂ ಹೊರರಾಜ್ಯಗಳ ವಿವಿಧ ನಗರಗಳಿಗೆ ತೆರಳುವಖಾಸಗಿಬಸ್‌ಗಳ ಶೇ.80ರಷ್ಟು ಆಸನಗಳ ಮುಂಗಡ ಟಿಕೆಟ್‌ ಖರೀದಿಸಲಾಗಿದೆ. ಬೇಡಿಕೆ ಹೆಚ್ಚಾಗಿರುವ ಕಡೆಗಳಲ್ಲಿ ಟಿಕೆಟ್‌ ದರ ಹೆಚ್ಚಿಸಲಾಗಿದೆ.

ಸಾಮಾನ್ಯ ದಿನಗಳಲ್ಲಿ ನಾನು ಬೆಂಗಳೂರಿನಿಂದ ಬೆಳಗಾವಿಗೆ ಹೋಗುವಾಗ ಪ್ರಯಾಣ ದರ 900- 1,000 ರೂ. ಇರುತ್ತಿತ್ತು. ಆದರೆ, ಈಗ2,500 ರೂ. ಕೊಟ್ಟು ಹೋಗುತ್ತಿದ್ದೇನೆ. ಸಾರಿಗೆ ಇಲಾಖೆ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ
ಪ್ರಯತ್ನವನ್ನೂ ಮಾಡದಿರುವುದು ವಿಚಿತ್ರ ಎಂದು ನವೀನ್‌ ಪಾಟೀಲ್‌ ಬೇಸರ ವ್ಯಕ್ತಪಡಿಸಿದರು.

“ಹಬ್ಬದ ಸಂದರ್ಭದಲ್ಲಿ ಟಿಕೆಟ್‌ ದರ ಏರಿಕೆ ಅನಿವಾರ್ಯ. ಯಾಕೆಂದರೆ, ಬೆಂಗಳೂರಿನಿಂದ ಪ್ರಯಾಣಿಕರು ಸಿಗುತ್ತಾರೆ. ಆ ಕಡೆಯಿಂದ ಬೆಂಗಳೂರಿಗೆನಿರೀಕ್ಷಿತಸಂಖ್ಯೆಯಲ್ಲಿಪ್ರಯಾಣಿಕರು ಸಿಗುವುದಿಲ್ಲ. ಈ ಮಧ್ಯೆ ಕೊರೊನಾದಿಂದ ಸುಮಾರು ಒಂದು ವರ್ಷದಿಂದಖಾಸಗಿ ಬಸ್‌ಗಳು ರಸ್ತೆಗೆ ಇಳಿದಿರಲಿಲ್ಲ. ಇದೀಗ ಕೆಲವು ಆಪರೇಟರ್‌ ಗಳು ಸೀಮಿತ ಸಂಖ್ಯೆಯಲ್ಲಿ ಬಸ್‌ಗಳನ್ನು ರಸ್ತೆಗೆ
ಇಳಿಸಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ತುಸು ಏರಿಕೆ ಮಾಡಲಾಗಿದೆ’ ಎಂದು ಖಾಸಗಿ ಟ್ರಾವೆಲರ್ ಸಮಜಾಯಿಷಿ ನೀಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next