Advertisement

ಥಾಣೆಯ ಟಿಎಂಟಿ ಬಸ್ಸು ಬೆಂಕಿಗೆ ಆಹುತಿ: ಜೀವ ಹಾನಿ ಇಲ್ಲ

11:40 AM Jan 18, 2018 | Team Udayavani |

ಥಾಣೆ : ಥಾಣೆ ಮುನಿಸಿಪಲ್‌ ಟ್ರಾನ್ಸ್‌ ಪೋರ್ಟ್‌ (ಟಿಎಂಟಿ)ಗೆ ಸೇರಿದ ಒಂದು ಬಸ್ಸು ಮುಂಬ್ರಾ ಟೌನ್‌ಶಿಪ್‌ ಸಮೀಪ ಬೆಂಕಿಗೆ ಆಹುತಿಯಾಯಿತು. ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದಿದ್ದುದರಿಂದ ಯಾವುದೇ ಜೀವ ಹಾನಿ ಆಗಿಲ್ಲ.

Advertisement

ನಿನ್ನೆ  ಬುಧವಾರ ರಾತ್ರಿ 8.30ರ ಹೊತ್ತಿಗೆ  ಬಸ್ಸು ಮುಂಬ್ರಾ ದಿಂದ ಆನಂದ ನಗರಕ್ಕೆ ಹೋಗುತ್ತಿತ್ತು. ರೇತಿ ಬಂದರು ಸಮೀಪ ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಬಸ್ಸಿನ ಲೈಟ್‌ಗಳು ಆಫ್ ಆದವು. 

ಆಗ ಡ್ರೈವರ್‌ ಬಸ್ಸನ್ನು ನಿಲ್ಲಿಸಿದ. ಏನಾಯಿತೆಂದು ನೋಡಲು ಕಂಡಕ್ಟರ್‌ ಕೆಳಗಿಳಿದು ಹೋದ. ಅಗಲೇ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಆ ಕೂಡಲೇ ಅದು ಬೆಂಕಿಗೆ ಸಂಪೂರ್ಣವಾಗಿ ಆಹುತಿಯಾಯಿತು ಎಂದು ವರದಿ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next