ಹುಣಸೂರು: ರಾಜ್ಯ ಸಾರಿಗೆ ಸಂಸ್ಥೆ ನೌಕರರ ಸಂಘವು ಕರೆ ನೀಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಹುಣಸೂರಿನಲ್ಲಿ ಬೆರಳೆಣಿಕೆಯಷ್ಟು ಬಸ್ ಗಳು ಮಾತ್ರ ಸಂಚರಿಸುತ್ತಿವೆ.
ಹುಣಸೂರು ನಗರವು ಮೈಸೂರು- ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದು, ಕೇರಳ, ಮಡಿಕೇರಿ, ಮಂಗಳೂರು ಕಡೆಯಿಂದ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಬಸ್ ಗಳು ಓಡಾಡುತ್ತವೆ.
ಇದನ್ನೂ ಓದಿ:ಮಂಗಳೂರು- ಮೈಸೂರು ವಿಮಾನಯಾನ ಆರಂಭ: ಮಂಗಳೂರಿಗೆ ಬಂದಿಳಿದ ಮೊದಲ ವಿಮಾನ
ಪ್ರತಿಭಟನೆ ಹಿನ್ನೆಲೆಯಲ್ಲಿ ಹೆಚ್ಚಿನ ಬಸ್ ಗಳು ಬರದೆ ಪ್ರಯಾಣಿಕರು ಪರದಾಡುವಂತಾಗಿದೆ. ಹುಣಸೂರು ಡಿಪೋದಲ್ಲಿ 115 ಬಸ್ ಗಳಿದ್ದು, ಈ ಪೈಕಿ ಡಿಪೋದಿಂದ ರತ್ನಪುರಿ, ಎಚ್ ಡಿ ಕೋಟೆ, ಕೆ.ಆರ್ ನಗರ ಗಳಿಗೆ 15 ಬಸ್ ಗಳು ಮಾತ್ರ ಪ್ರಯಾಣ ಬೆಳೆಸಿದೆ.
ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಪ್ರತಿಭಟನೆಯಿಂದಾಗಿ ಕೆಲಸಕ್ಕೆ ಹೋಗುವ ಪ್ರಯಾಣಿಕರು ಖಾಸಗಿ ವಾಹನ ಅವಲಂಬಿಸುವಂತಾಗಿದೆ.