Advertisement

‘ಬಸ್‌, ಬಹುತ್‌ ಹುವಾ’ಎನ್ನುತ್ತಿದೆ ದೇಶ

05:07 AM May 15, 2019 | mahesh |

ಲೋಕಸಭೆ ಚುನಾವಣೆಯ ಕೊನೆಯ ಹಂತಕ್ಕೆ 4 ದಿನವಷ್ಟೇ ಬಾಕಿಯಿದ್ದು, ಅಂತಿಮ ಹಂತದ ಮತದಾನ ನಡೆಯಲಿರುವ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಬಿರುಸಾಗಿದೆ. ಮಂಗಳವಾರ ಒಂದೇ ದಿನ ಅವರು ಉತ್ತರಪ್ರದೇಶದ ಎರಡು ಕಡೆ ಹಾಗೂ ಬಿಹಾರದ ಎರಡು ಕ್ಷೇತ್ರಗಳಲ್ಲಿ ಚುನಾವಣಾ ರ್ಯಾಲಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ 1984ರ ಸಿಕ್ಖ್ ವಿರೋಧಿ ದಂಗೆ ಕುರಿತು ಕಾಂಗ್ರೆಸ್‌ ನಾಯಕ ಸ್ಯಾಮ್‌ ಪಿತ್ರೋಡಾ ನೀಡಿರುವ ಹೇಳಿಕೆಯನ್ನು ಪ್ರಸ್ತಾಪಿಸಿದ ಮೋದಿ, ‘ಇಡೀ ದೇಶವೇ ಈಗ ಇವರಿಂದ ರೋಸಿ ಹೋಗಿದೆ. ಹೆಚ್ಚಾಯ್ತು, ಇನ್ನು ಸಾಕು ಮಾಡಿ(ಅಬ್‌ ಬಸ್‌, ಬಹುತ್‌ ಹುವಾ)’ ಎಂದು ಹೇಳುತ್ತಿದೆ’ ಎಂದಿದ್ದಾರೆ.

Advertisement

ಟಿವಿ ಕ್ಯಾಮೆರಾಗಳ ಮುಂದೆ ನಾಮ್‌ಧಾರ್‌(ರಾಹುಲ್)ನ ಗುರು(ಪಿತ್ರೋಡಾ) ನೀಡಿರುವ ಮೂರೇ ಮೂರು ಪದ(ಹುವಾ ತೋ ಹುವಾ)ವು ಆ ಇಡೀ ಪಕ್ಷದ ನಡವಳಿಕೆಯನ್ನು ದೇಶದ ಮುಂದಿಟ್ಟಿದೆ. ಕಾಂಗ್ರೆಸ್‌ನ ಭ್ರಷ್ಟಾಚಾರ, ವಂಶಾಡಳಿತದ ರಾಜಕೀಯ ಮತ್ತು ಅಹಂಕಾರದಿಂದ ದೇಶದ ಜನ ಬೇಸತ್ತಿದ್ದಾರೆ. ಮೇ 23ರ ಸಂದೇಶವು ಸ್ಪಷ್ಟವಾಗಿದೆ. ಇಡೀ ದೇಶವೇ ಮತ್ತೂಮ್ಮೆ ಮೋದಿ ಸರಕಾರ ಎಂದು ಹೇಳುತ್ತಿದೆ ಎಂದೂ ಮೋದಿ ನುಡಿದಿದ್ದಾರೆ.

ಸವಾಲು: ಉ.ಪ್ರದೇಶದ ಬಲ್ಲಿಯಾ ದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ನಾನು ಯಾವುದಾದರೂ ಬೇನಾಮಿ ಆಸ್ತಿಯನ್ನು ಹೊಂದಿರುವ, ಫಾರ್ಮ್ ಹೌಸ್‌ ನಿರ್ಮಿಸಿರುವ, ಬಂಗಲೆ ಅಥವಾ ಶಾಪಿಂಗ್‌ ಕಾಂಪ್ಲೆಕ್ಸ್‌ ನಿರ್ಮಿಸಿರುವ ಅಥವಾ ವಿದೇಶಿ ಬ್ಯಾಂಕ್‌ನಲ್ಲಿ ಹಣ ಠೇವಣಿಯಿಟ್ಟಿರುವ ಬಗ್ಗೆ, ತಾಕತ್ತಿದ್ದರೆ ಮಹಾಕಲಬೆರಕೆಯ ಪಕ್ಷಗಳು ಸಾಬೀತುಪಡಿಸಲಿ. ಇದು ನನ್ನ ಸವಾಲು’ ಎಂದು ಹೇಳಿದ್ದಾರೆ. ನಾನು ಶ್ರೀಮಂತನಾಗುವ ಕನಸನ್ನು ಎಂದಿಗೂ ಕಂಡಿಲ್ಲ. ಬಡವರ ಹಣವನ್ನು ಲೂಟಿ ಮಾಡುವ ಪಾಪದ ಕೆಲಸವನ್ನೂ ಮಾಡಿಲ್ಲ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next