Advertisement
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಿಡಘಟ್ಟ ಗ್ರಾಮದ ಸಿದ್ದಲಿಂಗಸ್ವಾಮಿ ಹಾಗೂ ಕನಕಪುರ ಜಿಲ್ಲೆ ಸಾತನೂರು ಸಮೀಪ ಚಿಕ್ಕ ಹಾಲಳ್ಳಿಯ ಕೀರ್ತಿ ಎಂಬುವರ ವಿವಾಹ ಮಹೋತ್ಸವ ಧರ್ಮಸ್ಥಳದಲ್ಲಿ ನಿಶ್ಚಿತವಾಗಿದ್ದು ಈ ಹಿನ್ನೆಲೆಯಲ್ಲಿ ಹುಡುಗನ ಸಂಬಂಧಿಕರು ಉದಯರಂಗ ಟ್ರಾನ್ಸ್‌ಪೋರ್ಟ್‌ನ ಖಾಸಗಿ ಬಸ್‌ನಲ್ಲಿ ಧರ್ಮಸ್ಥಳಕ್ಕೆ ಮದುವೆಗೆಂದು ತೆರಳುತ್ತಿದ್ದರು. ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಆನೆಮಹಲ್ ಗ್ರಾಮದ ದುರ್ಗಾಂಬ ರೈಸ್ ಮಿಲ್ ಸಮೀಪ ಚಾಲಕ ವೇಗವಾಗಿ ಬಸ್ ಚಲಾಯಿಸಿದ್ದು ತಿರುವಿನಲ್ಲಿ ಬಸ್ ನಿಯಂತ್ರಣಕ್ಕೆ ಸಿಗದ ಕಾರಣ ಬಸ್ ಮಗುಚಿ ಬಿದ್ದಿದೆ. ಬಸ್ ಅಪಘಾತಕ್ಕೆ ಈಡಾದ ಕಾರಣ ಬಸ್‌ನಲ್ಲಿದ್ದ 54 ಜನರಲ್ಲಿ ಸುಮಾರು 8ರಿಂದ 10 ಮಂದಿಗೆ ಗಂಭೀರ ಪೆಟ್ಟು ಬಿದ್ದಿದ್ದು ಬಾಕಿ ಉಳಿದವರಿಗೆ ಸಣ್ಣಪುಟ್ಟ ಪೆಟ್ಟು ಬಿದ್ದಿದೆ. ಗಾಯಾಳುಗಳಿಗೆ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಗಂಭೀರ ಗಾಯಗೊಂಡ ಚನ್ನಯ್ಯ, ಸಿದ್ದರಾಜು, ಶಿವರಾಜು, ಮಲ್ಲಮ್ಮ, ಶಿವಮ್ಮ ಎಂಬುವರನ್ನು ಹಾಸನದ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ನೀಡಲು ಆ್ಯಂಬುಲೆನ್ಸ್‌ನಲ್ಲಿ ಕಳುಹಿಸಲಾಯಿತು. ಬಹುತೇಕರಿಗೆ ಬಲಗೈ, ಹಣೆ ಹಾಗೂ ತಲೆಗೆ ಪೆಟ್ಟು ಬಿದ್ದಿದೆ. ಆನೆಮಹಲ್ ಗ್ರಾಮಸ್ಥರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಕ್ರಾಫರ್ಡ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಸಹ ತುರ್ತು ಚಿಕಿತ್ಸೆ ನೀಡಿದರು.
Advertisement
ದಿಬ್ಬಣದ ಬಸ್ ಪಲ್ಟಿ: 10 ಜನರಿಗೆ ಗಂಭೀರ ಗಾಯ
03:39 PM Jun 20, 2019 | Suhan S |
Advertisement
Udayavani is now on Telegram. Click here to join our channel and stay updated with the latest news.