Advertisement

ಶಿಕ್ಷಣದ ಜತೆ ಸಂಸ್ಕಾರ ನೀಡಿ; ರಮೇಶ ಜಾರಕಿಹೊಳಿ

06:49 PM Mar 12, 2022 | Team Udayavani |

ಗೋಕಾಕ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಜೊತೆಗೆ ಸಂಸ್ಕಾರ ನೀಡುವುದು ಅಗತ್ಯವಾಗಿದೆ. ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಆಸಕ್ತಿ ಹುಟ್ಟಿಸಿ ಸ್ವತಂತ್ರವಾಗಿ ಕಲಿಯಲು ಪೋಷಕರು ಪ್ರೇರೇಪಿಸಬೇಕೆಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

Advertisement

ಅವರು, ಶುಕ್ರವಾರ ತಾಲೂಕಿನ ಹಿರೇನಂದಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಪ್ರಯೋಗಾಲಯ ಉದ್ಘಾಟನೆ ಹಾಗೂ ಶಾಲಾ ಆಟದ ಮೈದಾನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಆಧುನಿಕ ಜಗತ್ತಿನಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗುತ್ತಿರುವ ಇಂದಿನ ಮಕ್ಕಳು ದೇಶಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿಯ ಪರಂಪರೆ ಕಡೆಗಣಿಸುತ್ತಿರುವುದು ವಿಪರ್ಯಾಸದ ಸಂಗತಿ. ಒಬ್ಬ ಅತ್ಯುತ್ತಮ ಶಿಕ್ಷಕ, ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯಿಂದ ಇಡೀ ಸಮಾಜವೇ ಬದಲಾಗುತ್ತದೆ. ಮಕ್ಕಳೇ ಈ ದೇಶದ ಆಸ್ತಿ, ಅವರಿಗೆ ಸ್ವಾತಂತ್ರ್ಯ ಹೋರಾಟಗಾರರೇ ರೋಲ್‌ ಮಾಡೆಲ್‌ ಆಗಬೇಕೆಂದರು.

ಜಿಪಂ ಮಾಜಿ ಸದಸ್ಯ ಟಿಆರ್‌ ಕಾಗಲ್‌, ಎಂ.ಎಲ್‌ ತೋಳಿನವರ, ಕ್ಷೇತ್ರ ಶಿಕ್ಷಣಾಧಿಕಾರಿ ಬಳಗಾರ ಸೇರಿದಂತೆ ಮಮದಾಪೂರ, ಹಿರೇನಂದಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next