Advertisement
ದೊಡ್ಡಕುಂದ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಪರಿಶಿಷ್ಟ ಜಾತಿ ಸಮೂದಾಯದವರು 2 ಏಕರೆ ಜಾಗವನ್ನು ಶ್ಮಶಾನ ಕಾರ್ಯಕ್ಕಾಗಿ ಮೀಸಲಿಟ್ಟಿದ್ದರು ಇದೆ ಶ್ಮಶಾನಕ್ಕೆ ಸೇರಿದ ಜಾಗದಲ್ಲಿ ಪಕ್ಕದ ರಾಮೇನಹಳ್ಳಿ ಮತ್ತು ಕಿರಿಕೊಡ್ಲಿ ಗ್ರಾಮದ ಪರಿಶಿಷ್ಟ ಜಾತಿ ಸಮೂದಾಯದವರು ಅಂತ್ಯ ಸಂಸ್ಕಾರ ನಡೆಸುತ್ತಾರೆ. ಹಲವಾರು ದಶಕಗಳಿಂದ ಶ್ಮಶಾನಕ್ಕಾಗಿ ಮೀಸಲಿಟ್ಟಿದ ಜಾಗವನ್ನು ಒಂದು ವಾರದ ಹಿಂದೆ ಬ್ಯಾಡಗೊಟ್ಟ ಗ್ರಾ.ಪಂ.ಉಪಾಧ್ಯಕ್ಷ ಅಹಮದ್‌ಮೋಣು ಎಂಬಾತ ಬೇಲಿ ನಿರ್ಮಿಸಿಕೊಂಡು ಒತ್ತುವರಿ ಮಾಡಿ ಕೊಂಡಿದ್ದರು. ವಿಷಯ ಗ್ರಾಮಸ್ಥರಿಗೆ ತಿಳಿದು ಈ ಕುರಿತು ಸೋಮವಾರಪೇಟೆ ತಾಹಶೀಲ್ದಾರರಿಗೆ ಗ್ರಾಮಸ್ಥರು ಅಹಮದ್ ವಿರುದ್ಧ‌್ದ ದೂರುನೀಡಿ ಜಾಗವನ್ನು ತೆರವುಗೊಳಿಸಿಕೊಡುವಂತೆ ಮನವಿ ಮಾಡಿದ್ದರು. ಅದರಂತೆ ತಹಶೀಲ್ದಾರರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರಿಗೆ ಸೇರಿದ ಶ್ಮಶಾನದ ಜಾಗವನ್ನು ಒತ್ತುವರಿ ಮಾಡಿದ್ದ ಅಹಮದ್‌ಗೆ ಜಾಗವನ್ನು ತೆರವುಗೊಳಿಸುವಂತೆ ಸೂಚಿಸಿದ್ದರು. ಆದರೂ ಸಹ ಶ್ಮಶಾನ ಅಹಮದ್ ಅತಿಕ್ರಮಿಸಿದ ಜಾಗವನ್ನು ತೆರವುಗೊಳಿಸಿದಿದ್ದ ಹಿನ್ನೆಲೆ ಯಲ್ಲಿ ದೊಡ್ಡಕುಂದ, ರಾಮೇನಹಳ್ಳಿ ಮತ್ತು ಕಿರಿಕೊಡ್ಲಿ ಗ್ರಾಮಸ್ಥರು ಎಲ್ಲಾರೂ ಒಂದಾಗಿ ಒತ್ತುವರಿ ಮಾಡಿಕೊಂಡಿದ್ದ ಶ್ಮಶಾನಕ್ಕೆ ಸೇರಿದ ಜಾಗವನ್ನು ಕಾರ್ಯಾಚರಣೆ ಮೂಲಕ ತೆರವುಗೊಳಿಸಿದರು.
Advertisement
ಶ್ಮಶಾನದ ಜಾಗ ಒತ್ತುವರಿ: ಗ್ರಾಮಸ್ಥರಿಂದ ತೆರವು ಕಾರ್ಯಾಚರಣೆ
11:06 PM Jul 11, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.