Advertisement

ಬುರ್ಹಾನ್‌ ವಾನಿಯ 11 ಬಂಟರು ಹತ

03:04 AM May 04, 2019 | mahesh |

ಶ್ರೀನಗರ: ಹಿಜ್ಬುಲ್ ಮುಜಾಹಿದೀನ್‌ ಉಗ್ರ ಬುರ್ಹಾನ್‌ ವಾನಿ ನಾಲ್ಕು ವರ್ಷಗಳ ಹಿಂದೆ 11 ಜನ ಸಹಚರರೊಂದಿಗೆ ಕಾಣಿಸಿಕೊಂಡಿದ್ದ ಫೊಟೋದಲ್ಲಿರುವ ಎಲ್ಲರನ್ನೂ ಸೇನೆ ಸದೆಬಡಿದಿದೆ. ಶುಕ್ರವಾರ ಲತೀಫ್ ಟೈಗರ್‌ ಎಂಬಾತನನ್ನು ಹತ್ಯೆಗೈಯುವ ಮೂಲಕ ಸೇನೆ ಈ ಸಾಧನೆ ಮಾಡಿದೆ. ಕಾಶ್ಮೀರದ ಶೋಪಿಯಾನ್‌ನಲ್ಲಿ ಇಬ್ಬರು ಸಹಚರರೊಂದಿಗೆ ಇದ್ದಾಗ ಲತೀಫ್ನನ್ನು ಹತ್ಯೆಗೈಯಲಾಗಿದೆ. 2015ರ ಜೂನ್‌ನಲ್ಲಿ ಬುರ್ಹಾನ್‌ ವಾನಿಯ ಫೋಟೊ ಭಾರಿ ವೈರಲ್ ಆಗಿತ್ತು. ಮಾಸ್ಕ್ ಇಲ್ಲದೇ ಅವರು ಫೋಟೋಗೆ ಪೋಸು ನೀಡಿದ್ದರು. ಲತೀಫ್ ಮಧ್ಯದ ಸಾಲಿನ ಬಲಬದಿಯಲ್ಲಿದ್ದ.

Advertisement

ಶುಕ್ರವಾರ ಖಚಿತ ಸುಳಿವಿನ ಮೇರೆಗೆ ಸೇನೆ ದಾಳಿ ನಡೆಸಿದಾಗ ಲತೀಫ್ ಸಿಕ್ಕಿಬಿದ್ದಿದ್ದಾನೆ. ಸಾಮಾನ್ಯ ಸನ್ನಿವೇಶದಲ್ಲಿ ಚುನಾವಣೆ ಸಮಯವಾದ್ದರಿಂದ ನಾವು ಎನ್‌ಕೌಂಟರ್‌ ಮಾಡದೇ ಸುಮ್ಮನಿರುತ್ತಿದ್ದೆವು. ಆದರೆ ಈ ಉಗ್ರನ ಹಿನ್ನೆಲೆ ತಿಳಿದಿದ್ದರಿಂದ ನಾವು ಕಾರ್ಯಾಚರಣೆ ನಡೆಸಿದೆವು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸುವುದಕ್ಕಾಗಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಲತೀಫ್ ಐಇಡಿಗಳನ್ನು ತಯಾರಿಸುವಲ್ಲಿ ಪರಿಣಿತಿ ಹೊಂದಿದ್ದು, ಕಳೆದ ಆರು ವರ್ಷಗಳಿಂದಲೂ ಪೊಲೀಸರು ಈತನನ್ನು ಹುಡುಕುತ್ತಿದ್ದರು.

ಲತೀಫ್ ಜೊತೆಗೆ ಹತ್ಯೆಗೈದ ಉಗ್ರನನ್ನು ಶೋಪಿಯಾನ್‌ ಶರಿಖ್‌ ಅಹಮದ್‌ ನೆಗ್ರೂ ಎಂದು ಗುರುತಿಸಲಾಗಿದೆ. ಶುಕ್ರವಾರ ನಡೆದ ದಾಳಿಯಲ್ಲಿ ಓರ್ವ ಸೇನಾಯೋಧರಿಗೆ ಗಾಯವಾಗಿದೆ. ಮೂಲಗಳ ಪ್ರಕಾರ ಒಂದು ಮನೆ ಸಂಪೂರ್ಣವಾಗಿ ಕುಸಿದಿದ್ದು, ಎರಡು ಮನೆಗೆ ಭಾಗಶಃ ಹಾನಿಯಾಗಿದೆ. ಉಗ್ರರನ್ನು ಹತ್ಯೆಗೈಯುತ್ತಿದ್ದಂತೆ ಇಲ್ಲಿನ ಯುವಕರು ಪ್ರತಿಭಟನೆ ಆರಂಭಿಸಿದ್ದರು. ನಂತರ ಅವರನ್ನು ಚದುರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next