ಚಾಮರಾಜನಗರ: ಬುರೇವಿ ಚಂಡಮಾರುತದ ಪರಿಣಾಮವಾಗಿ ತಮಿಳುನಾಡಿನ ಗಡಿಯಲ್ಲಿರುವ ಜಿಲ್ಲೆಯಾದ್ಯಂತ ಗುರುವಾರ ಸಂಪೂರ್ಣ ಮೋಡ ಕವಿದು, ತುಂತುರು ಮಳೆ ಸುರಿದು ಜನ ಜೀವನ ಅಸ್ತವ್ಯಸ್ತವಾಯಿತು.
ಗಡಿ ಜಿಲ್ಲೆಯಲ್ಲಿ ಚಳಿಗಾಲ ಆರಂಭವಾಗಿದ್ದು, ವಾತಾವರಣದಲ್ಲಿ ತಾಪಮಾನ ಕಡಿಮೆಯಿದೆ. ಇದರ ಮೇಲೆ ಬುರೇವಿ ಚಂಡಮಾರುತದಿಂದಾಗಿ ತುಂತುರು ಮಳೆ ಸಹ ಸೇರಿಕೊಂಡು ದಿನವಿಡೀ ಮೈಕೊರೆಯುವ ಚಳಿಯ ವಾತಾವರಣ ಉಂಟಾಯಿತು.
ಸಂಪೂರ್ಣ ಮೋಡ ಕವಿದ ವಾತಾವರಣದಿಂದಾಗಿ ಮಧ್ಯಾಹ್ನದ ಹಗಲು ಕೂಡ ಮುಂಜಾನೆಯ ತಿಳಿ ಬೆಳಕಿನಂತಿತ್ತು. ತುಂತುರು ಮಳೆಯಿಂದಾಗಿ ಹೊರ ಹೋಗಲಾಗದೇ, ಗುರುವಾರ ಕನಕದಾಸ ಜಯಂತಿಯ ಸರ್ಕಾರಿ ರಜೆ ಇದ್ದ ಕಾರಣ, ಜನರು ಮನೆಯಲ್ಲೇ ಉಳಿದು, ಟಿವಿ ನೋಡುತ್ತಾ ಕಾಲ ಕಳೆದರು.
ಅನಿವಾರ್ಯದ ಕೆಲಸಗಳಿಗಾಗಿ ಹೊರ ಬಂದವರು, ಜಿಟಿ ಜಿಟಿ ಮಳೆಯಲ್ಲಿ ಛತ್ರಿ, ಜಾಕೆಟ್‌ಗಳ ಮೊರೆ ಹೋದರು. ಮಳೆಯಿಂದಾಗಿ ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳಲ್ಲಿ ಮಧ್ಯಾಹ್ನದ ಬಳಿಕ ವ್ಯಾಪಾರ ವಹಿವಾಟು ಎಂದಿನಂತಿರಲಿಲ್ಲ.
ಇದನ್ನೂ ಓದಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ 61ರ ವೃದ್ಧ; ಬಾಲಕಿ ಗರ್ಭಿಣಿಯಾದಾಗ ವಿಚಾರ ಬೆಳಕಿಗೆ
ಇದೇ ವಾತಾವರಣ, ಡಿ.5ರವರೆಗೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಜಾತ್ಯತೀತ ಪರಿಕಲ್ಪನೆಯೇ ಸರ್ಕಾರದ ಆಶಯ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ