ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಅ. 2ರಿಂದ ಅ. 3 ರವರೆಗೆ ನಡೆಯಲಿರುವ ಅತ್ಯಾಕರ್ಷಕ ಸೀರೆಗಳು, ಚಿನ್ನ-ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಅ. 2ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀ ಮುಕ್ತಾನಂದ ಸಭಾಗೃಹದಲ್ಲಿ ಬಂಟರ ಸಂಘದ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ ಮತ್ತು ಲತಾ ಪಿ. ಶೆಟ್ಟಿ ದಂಪತಿ, ಮುಖ್ಯ ಅತಿಥಿಯಾಗಿ ಪಾಲ್ಗೊಂಡ ವಿ. ಕೆ. ಗ್ರೂಪ್ ಆಫ್ ಇಂಡಸ್ಟ್ರೀಸ್ ಇದರ ನಿರ್ದೇಶಕಿ ವಸಂತಿ ಕರುಣಾಕರ ಶೆಟ್ಟಿ ಅವರು ರಿಬ್ಬನ್ ಬಿಡಿಸಿ, ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಜರಗಿದ ಸೀರೆ ಮತ್ತು ವಜ್ರಾಭರಣಗಳ ಭವ್ಯ ಪ್ರದರ್ಶನದಲ್ಲಿ ಮಾಜಿ ಕಾರ್ಯಾಧ್ಯಕ್ಷೆಯರಾದ ಲತಾ ಪಿ. ಭಂಡಾರಿ, ಆಶಾ ಎಂ. ಹೆಗ್ಡೆ, ಲತಾ ಪಿ. ಶೆಟ್ಟಿ, ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಮಮತಾ ಎಂ. ಶೆಟ್ಟಿ, ಗೌರವ ಕಾರ್ಯದರ್ಶಿ ಕವಿತಾ ಐ. ಆರ್.ಶೆಟ್ಟಿ, ಗೌರವ ಕೋಶಾಧಿಕಾರಿ ಆಶಾ ಎಸ್. ಶೆಟ್ಟಿ,ಜತೆ ಕಾರ್ಯದರ್ಶಿ ಆಶಾ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಶಾಂತಿ ಡಿ. ಶೆಟ್ಟಿ, ಸಂಚಾಲಕಿ ಯರಾದ ರಂಜನಿ ಎಸ್. ಹೆಗ್ಡೆ, ಅರುಣಾ ಪ್ರಭಾ ಶೆಟ್ಟಿ, ವಿದ್ಯಾರ್ಥಿ ದತ್ತು ಸಮಿತಿಯ ಕಾರ್ಯಾಧ್ಯಕ್ಷೆ ಶೋಭಾ ಎಸ್. ಶೆಟ್ಟಿ, ಲತಾ ವಿ. ಶೆಟ್ಟಿ, ಮಹಿಳಾ ವಿಭಾಗದ ಸದಸ್ಯೆಯರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ, ಲತಾ ಪಿ. ಶೆಟ್ಟಿ ದಂಪತಿ, ಅತಿಥಿ ವಸಂತಿ ಕೆ. ಶೆಟ್ಟಿ, ಬೆಂಗಳೂರು ಕುಮುದಿನಿ ಸಿಲ್ಕ್ ಆ್ಯಂಡ್ ಸಾರೀಸ್‌ನ ಕುಮುದಿನಿ, ದಿ ಡೈಮಂಡ್ ಫ್ಯಾಕ್ಟರಿ (ಟಿಡಿಎಫ್) ಇದರ ನಿರ್ದೇಶಕ ಪ್ರಸನ್ನ ಶೆಟ್ಟಿ ಮತ್ತು ತಂಡದವರನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಲಾಯಿತು. ಮಹಿಳಾ ವಿಭಾಗದ ಗೌರವ ಕಾರ್ಯದರ್ಶಿ ಕವಿತಾ ಐ. ಆರ್. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಂಘದ ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಸಮಿತಿಯ ಸದಸ್ಯರು-ಸದಸ್ಯೆಯರು, ಸಮಾಜ ಬಾಂಧವರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಬೆಲೆಬಾಳುವ ಕಾಂಜೀವರಂ ಸಿಲ್ಕ್ ಸೀರೆಗಳು, ಕಾಟನ್ ಕ್ರೇಫ್, ಜ್ಯೂಟ್ ಸಿಲ್ಕ್, ಬನಾರಸ್, ಪೈತಾನಿ ಇಕÏಟ್ ಕೋರಾ ಮೊದಲಾದ ವಿವಿಧ ವಿನ್ಯಾಸಗಳ ಹೊಸ ಸೀರೆಗಳು ಮಹಿಳೆಯರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ದಿ ಡೈಮಂಡ್ ಫ್ಯಾಕ್ಟರಿಯ ಬ್ರೈಡ್ ಪ್ರೈಡ್ ವಧುವಿನ ಚಿನ್ನಾಭರಣಗಳು, ಟೆಂಪಲ್ ಗೋಲ್ಡ್, ಲಿನ್‌ಕಟ್ಟ್ ಡೈಮಂಡ್, ವಿವಿಎಸ್, ಇಎಫ್‌ಐ, ಕ್ವಾಲಿಟಿಯ ವಜ್ರಾಭರಣಗಳು ಬಿಇಎಸ್ ಹಾಲ್ ಮಾರ್ಕ್ ಇರುವ ಚಿನ್ನಾಭರಣಗಳು ಗ್ರಾಹಕರಿಗೆ ಶೇ. 90ರಷ್ಟು ಮೇಕಿಂಗ್ ಚಾರ್ಜ್ ಉಚಿತ ದರದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಮಾರಾಟ ಮಾಡಲಾಗುತ್ತಿದೆ.