ಮುಂಬಯಿ: ಹೆಣ್ಣಿನ ಜನ್ಮವು ಪರಮೋನ್ನತವಾದುದು. ಸ್ತ್ರೀಯು ಸತ್ವ , ರಜ ಮತ್ತು ತಮೋ ಎಂಬ ಮೂರು ಗುಣದ ಅಕ್ಷಯ ಭಂಡಾರವಾಗಿದ್ದಾಳೆ. ಇಂತಹ ಗುಣ ನಿಧಿಯಾಗಿರುವ ಮಹಿಳೆಯನ್ನು ಅಬಲೆ, ಬಲಹೀನೆ, ನಿಸ್ಸಹಾಯಕಿ ಎಂದು ಪರಿಗಣಿಸುವುದು ಸರಿಯಲ್ಲ ಎಂದು ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ನುಡಿದರು.
ಮಾ. 8 ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘ ಮಹಿಳಾ ವಿಭಾಗ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾಚೀನ ಕಾಲದಿಂದಲೂ ಭರತ ಖಂಡದಲ್ಲಿ ಸ್ತ್ರೀಗೆ ಅಪಾರವಾದ ಗೌರವವಿದೆ. ನಾವು ಸ್ತ್ರೀಯನ್ನು ಶಕ್ತಿ ಸ್ವರೂಪಿಣಿ ಎಂದೇ ಆರಾಧಿಸುತ್ತಾ ಬಂದಿದ್ದೇವೆ. ನಮ್ಮನ್ನು ಹೆತ್ತು ಸಾಕಿ ಸಲಹಿದ ನಮ್ಮ ಜನ್ಮದಾತೆಯಾದ ಸ್ತ್ರೀಯನ್ನು ಬೇರೆ ಬೇರೆ ರೂಪದಲ್ಲಿ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು. ಹೆಣ್ಣು ನಮ್ಮ ದೇಶದ ಕಣ್ಣು. ಹಿಂದೆ ಮಹಿರ್ಷಿ ವಾಲ್ಮೀಕಿ ತನ್ನ ಮಹಾಕಾವ್ಯ ರಾಮಾಯಣದಲ್ಲಿ ಸ್ತ್ರೀಯನ್ನು ಮಧುರ ಸ್ವರೂಪಿಣಿ ಎಂದು ವರ್ಣಿಸಿದ್ದಾರೆ. ತ್ಯಾಗದ ಭಾವನೆಯೇ ಸ್ತ್ರೀಯಲ್ಲಿರುವ ಮಧುರ ಸ್ವರೂಪ. ಮಹಿಳಾ ವಿಭಾಗವು ವೃದ್ಧಾಶ್ರಮ, ಮಹಿಳಾ ವಸತಿಗೃಹ ನಡೆಸುತ್ತಿರುವ ಜೊತೆಗೆ ಆರ್ಥಿಕವಾಗಿ ತೊಂದರೆಯಲ್ಲಿರುವ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ನೀಡುತ್ತಿರುವ ನೆರವಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಮಹಿಳಾ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಮತ್ತು ಪದಾಧಿಕಾರಿಗಳು ಆಯೋಜಿಸಿದ ಮಹಿಳಾ ದಿನಾಚರಣೆ ಸಂಭ್ರಮದಲ್ಲಿ ತುಂಬಿ ತುಳುಕಿದ ಸಭಾಗೃಹವನ್ನು ಕಂಡು ಸಂತಸವಾಗುತ್ತಿದೆ. ಇದು ಮಹಿಳೆಯರ ಒಗ್ಗಟ್ಟಿನ ಪ್ರತೀಕವಾಗಿದೆ. ಬಂಟರ ಸಂಘವು ಮಹಿಳೆಯರ ಕಾರ್ಯ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡಿ ಗೌರವಿಸುತ್ತಿದೆ ಎಂದು ನುಡಿದು ಶುಭಾಶಯಗಳನ್ನು ಸಲ್ಲಿಸಿದರು.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ದೊರೈರಾಜ್ ಮಾತನಾಡಿ, ಪುರುಷರಾಗಲಿ, ಮಹಿಳೆಯರಾಗಲಿ ಮೊದಲು ನಾವು ಮಾನವೀಯತೆಯನ್ನು ಕಲಿಯೋಣ. ಸಮಾಜದಲ್ಲಿ ತಮ್ಮದೇ ಆದ ಸ್ಥಾನ ಪಡೆದುಕೊಂಡಿರುವ ಮಹಿಳೆಯರಿಗಿಂದು ಅವಕಾಶಗಳು ತನ್ನಿಂದ ತಾನೇ ದೊರೆಯುತ್ತಿದೆ. ಅದಕ್ಕಾಗಿ ನಾವೆಲ್ಲರೂ ಅಭಿಮಾನ ಪಡಬೇಕು ಎಂದು ನುಡಿದರು.
ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡ ಮೇಯರ್ ಮೀನಾಕ್ಷಿ ಆರ್. ಶಿಂದೆ, ಜ್ಯೋತಿ ಆರ್. ಎನ್. ಶೆಟ್ಟಿ, ಬಾಲಿವುಡ್ ನಟಿ ಕರಿಶ್ಮಾ ಕಪೂರ್, ಮಿಥಾಲಿ ದೊರೈರಾಜ್, ಅಂತಾರಾಷ್ಟ್ರೀಯ ನೃತ್ಯಗಾರ್ತಿ ಮಿಥಾಲಿ ಜಿ. ಶೆಟ್ಟಿಯವರನ್ನು ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಹಾಗೂ ಪದಾಧಿಕಾರಿಗಳು ಶಾಲು, ಸ್ಮರಣಿಕೆ ಹಾಗೂ ಪುಷ್ಪಗುತ್ಛ ವನ್ನಿತ್ತು ಸಮ್ಮಾನಿಸಿದರು. ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆಯವರನ್ನು ಗೌರವಿಸಲಾಯಿತು. ಮಹಿಳಾ ವಿಭಾಗದ ಗೌರವ ಕಾರ್ಯದರ್ಶಿ ಚಿತ್ರಾ ಆರ್. ಶೆಟ್ಟಿ, ಡಾ|ವಿಜೇತಾ ಎಸ್.ಶೆಟ್ಟಿ. ಪ್ರೊ| ಪ್ರಸನ್ನ , ಮಹಿಳಾ ವಿಭಾಗದ ಗೌರವ ಕೋಶಾಧಿಕಾರಿ ಆಶಾ ವಿ. ರೈ ಅವರು ಸಮ್ಮಾನಿತರನ್ನು ಪರಿಚಯಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಚಂದ್ರಿಕಾ ಹರೀಶ್ ಶೆಟ್ಟಿ ದಂಪತಿಯನ್ನು ಮಹಿಳಾ ವಿಭಾಗದ ಪರವಾಗಿ ರಂಜನಿ ಸುಧಾಕರ ಹೆಗ್ಡೆ ಮತ್ತು ಪದಾಧಿಕಾರಿಗಳು ಸಮ್ಮಾನಿಸಿದರು. ರಂಜನಿ ಎಸ್. ಹೆಗ್ಡೆ, ಸುಧಾಕರ ಎಸ್. ಹೆಗ್ಡೆ, ದಂಪತಿಯನ್ನು ಸಮ್ಮಾನಿಸಲಾಯಿತು. ಸಾಂಸ್ಕೃತಿಯ ವೈವಿಧ್ಯಮಯ ಕಾರ್ಯಕ್ರಮ ಜರಗಿತು. ಸಂಘದ ಮಹಿಳಾ ವಿಭಾಗದ ಸದಸ್ಯೆಯರಿಂದ ನಮಕ್ ನಮನೆ ಕಿರು ನಾಟಕ ಜರಗಿತು.
ಸಭಾ ಕಾರ್ಯಕ್ರಮದಲ್ಲಿ ಸಂಘದ ವಿಶ್ವಸ್ಥರು, ಮಾಜಿ ಅಧ್ಯಕ್ಷರುಗಳು, ಕಾರ್ಯಾಧ್ಯಕ್ಷರು, ಮಾಜಿ ಮಹಿಳಾ ಕಾರ್ಯಾಧ್ಯಕ್ಷೆಯರು, ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳು ಹಾಗೂ ಸಹಕರಿಸಿದ ಎಲ್ಲರಿಗೆ ಪುಷ್ಪಗುತ್ಛ ನೀಡಿ ಗೌರವಿಸಲಾಯಿತು. ಪ್ರಮುಖ ದಾನಿಗಳಾಗಿ ಸಹಕರಿಸಿದ ಸರಿತಾ ಕೆ. ಡಿ. ಶೆಟ್ಟಿ, ಆರತಿ ಶಶಿಕಿರಣ್ ಶೆಟ್ಟಿ, ಭವಾನಿ ರಘುರಾಮ ಶೆಟ್ಟಿ, ರೇವತಿ ದಾಮೋದರ್‌ಶೆಟ್ಟಿ, ಸರೋಜಿನಿ ಹರೀಶ್ ಶೆಟ್ಟಿ, ನಯನಾ ಜಯರಾಮ ಶೆಟ್ಟಿ, ಶಾಲಿನಿ ರವಿ ಶೆಟ್ಟಿ ಮಾಹೀಮ್, ದಾನಿಗಳಾಗಿ ಸಹಕರಿಸಿದ ನಿಖೀತಾ ಯತಿನ್ ಹೆಗ್ಡೆ, ಭವಾನಿ ಸೀತಾರಾಮ ಶೆಟ್ಟಿ, ಸಂಧ್ಯಾ ರತ್ನಾಕರ್ ಶೆಟ್ಟಿ, ಆಶಾಲತಾ ಬೋಳಾರ್, ಪ್ರವೀಣ್ ಭೋಜ ಶೆಟ್ಟಿ, ಪ್ರಮೋದ ಶಿವ ಶೆಟ್ಟಿ, ಆದರ್ಶ್ ಶೆಟ್ಟಿ, ಜಯಲಕ್ಷಿ ¾à ಜೆ. ಶೆಟ್ಟಿ, ಲತಾ ವಿಶ್ವನಾಥ್ ಶೆಟ್ಟಿ, ಸುಶೀಲಾ ಜಗನ್ನಾಥ ರೈ, ಪದ್ಮಾವತಿ ಎಸ್ ಹೆಗ್ಡೆ, ಆಶಾ ಸಂತೋಷ್‌ಶೆಟ್ಟಿ, ಶಾರದಾ ಪಿ. ಹೆಗ್ಡೆ, ಶಾಂತಾ ಸುಧಾಕರ್ ಶೆಟ್ಟಿ , ವನಜಾ ಕರುಣಾಕರ್ ಶೆಟ್ಟಿ, ಗುಲಾಬಿ ಎಸ್.ಶೆಟ್ಟಿ, ಶಾಂಭವಿ ವಿ. ಶೆಟ್ಟಿ, ಮುಂಡಪ್ಪ ಎಸ್. ಪಯ್ಯಡೆ, ರತ್ನಾ ವಿ. ಶೆಟ್ಟಿ ಮೊದಲಾದವರನ್ನು ಗೌರವಿಸಲಾಯಿತು.
ದಾನಿಗಳ ಯಾದಿಯನ್ನು ಉಪ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ, ಜೊತೆ ಕಾರ್ಯದರ್ಶಿ ಮನೋರಮಾ ಎನ್. ಶೆಟ್ಟಿ, ಜೊತೆ ಕೋಶಾಧಿಕಾರಿ ರತ್ನಾ ಪಿ. ಶೆಟ್ಟಿ ಓದಿದರು. ರಾಧಾಬಾಯಿ ಟಿ.ಭಂಡಾರಿ ಸ್ಮರಣಾರ್ಥ ಪ್ರಶಸ್ತಿ ಆಯ್ಕೆಯ ಲತಾ ಪಿ. ಭಂಡಾರಿ, ದೀಪಾ ಪಿ. ಭಂಡಾರಿ, ಡಾ| ಸುನೀತಾ ಎಂ. ಶೆಟ್ಟಿ ಅವರನ್ನು ಹಾಗೂ ಡಾ| ಪಿ. ವಿ. ಶೆಟ್ಟಿ, ಶಖೀಲಾ ಪಿ. ವಿ. ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು. ಆರಂಭದಲ್ಲಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಚಿತಾ ಶೆಟ್ಟಿ ಪ್ರಾರ್ಥಿಸಿದರು. ಬಂಟ ಗೀತೆಯನ್ನು ಮೊಳಗಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಾ| ಪೂರ್ಣಿಮಾ ಶೆಟ್ಟಿ ಹಾಗೂ ಸಭಾ ಕಾರ್ಯಕ್ರಮವನ್ನು ಡಾ| ವಿಜೇತಾ ಶೆಟ್ಟಿ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಮನೋರಮಾ ಎನ್ ಶೆಟ್ಟಿ ವಂದಿಸಿದರು.
ಚಿತ್ರ-ವರದಿ:ಪ್ರೇಮನಾಥ್ ಶೆಟ್ಟಿ ಮುಂಡ್ಕೂರು